More

    ಕಾರ್ಮಿಕರಿಗೆ ಬೇಸರದ ಸಂಗತಿ: ಇಪಿಎಫ್​ಗೆ 40 ವರ್ಷಗಳಲ್ಲೇ ಅತಿ ಕಡಿಮೆ ಬಡ್ಡಿ!

    ನವದೆಹಲಿ: ದೇಶಾದ್ಯಂತದ ಕಾರ್ಮಿಕರಿಗೆ ಇದು ಬೇಸರದ ಸಂಗತಿ ಎಂದರೂ ತಪ್ಪೇನಿಲ್ಲ. ಏಕೆಂದರೆ ಕಾರ್ಮಿಕರ ಭವಿಷ್ಯ ನಿಧಿ (ಎಂಪ್ಲಾಯೀಸ್​ ಪ್ರಾವಿಡೆಂಟ್ ಫಂಡ್​-ಇಪಿಎಫ್​)ಗೆ ನೀಡಲಾಗುವ ಬಡ್ಡಿಯನ್ನು ಇಪಿಎಫ್​ಒ ತಗ್ಗಿಸಲು ನಿರ್ಧರಿಸಿದೆ. ಅದರಲ್ಲೂ ಇದು ನಲ್ವತ್ತು ವರ್ಷಗಳಲ್ಲೇ ಅತಿ ಕಡಿಮೆ ಬಡ್ಡಿ ಎನಿಸಿಕೊಳ್ಳಲಿದೆ.

    ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯು 2021-22ರ ಕಾರ್ಮಿಕರ ಭವಿಷ್ಯ ನಿಧಿಗೆ ನೀಡಲಾಗುವ ಬಡ್ಡಿಯನ್ನು ಈ ಹಿಂದೆ ಇದ್ದ ಶೇ. 8.5ರ ಬದಲಾಗಿ ಶೇ. 8.1 ನೀಡಲು ಚಿಂತನೆ ನಡೆಸಿದೆ. ಇಪಿಎಫ್​​ಒನ ನಿರ್ಣಾಯಕ ಉನ್ನತ ಸಮಿತಿಯಾದ ಸೆಂಟ್ರಲ್​ ಬೋರ್ಡ್ ಆಫ್ ಟ್ರಸ್ಟೀಸ್​ ಈ ನಿರ್ಧಾರ ತಳೆದಿದೆ.

    ಅಂದರೆ 2020-21ರಲ್ಲಿ ಕಾರ್ಮಿಕರ ಭವಿಷ್ಯ ನಿಧಿಗೆ ಶೇ. 8.5 ಬಡ್ಡಿ ನೀಡಲಾಗಿದ್ದು, 2021-22ರ ನಿಧಿಗೆ ಶೇ. 8.1 ನೀಡಲಿದೆ. 1977-78ರಲ್ಲಿ ಶೇ. 8 ಬಡ್ಡಿ ನೀಡಲಾಗಿದ್ದು, ಒಂದು ವೇಳೆ ಈಗ ಶೇ. 8.1 ನೀಡಿದರೆ ಅದು ನಾಲ್ಕು ದಶಕಗಳಲ್ಲೇ ಅತಿ ಕಡಿಮೆ ಬಡ್ಡಿ ಎನಿಸಿಕೊಳ್ಳಲಿದೆ.

    ಕಾರ್ಮಿಕರ ಭವಿಷ್ಯ ನಿಧಿಗೆ 2011-12ರಲ್ಲಿ ಶೇ. 8.25, 2013-14 ಮತ್ತು 2014-15ರಲ್ಲಿ ಶೇ. 8.75, 2015-16ರಲ್ಲಿ ಶೇ. 8.8, 2016-17ರಲ್ಲಿ 8.65 ಹಾಗೂ 2017-18ರಲ್ಲಿ ಶೇ. 8.55 ಬಡ್ಡಿ ನೀಡಿತ್ತು.

    ನಂತರ 2018-19ರಲ್ಲಿ ಶೇ. 8.65 ಬಡ್ಡಿ ನೀಡಿದ್ದು, 2019-20ರಲ್ಲಿ ಅದನ್ನು ಶೇ. 8.5ಕ್ಕೆ ಇಳಿಸಿತ್ತು. ಇದು ಆ ಸಂದರ್ಭಕ್ಕೆ ಕಳೆದ ಏಳು ವರ್ಷಗಳಲ್ಲೇ ಕಡಿಮೆ ಬಡ್ಡಿ ಎನಿಸಿಕೊಂಡಿತ್ತು. ಇನ್ನು 2019-20ರಲ್ಲಿ ನೀಡಿದ್ದ ಬಡ್ಡಿ 2012-13ರ ಬಳಿಕ ನೀಡಿದ ಅತಿ ಕಡಿಮೆ ಬಡ್ಡಿ ಎನಿಸಿಕೊಂಡಿತ್ತು.

    52ನೇ ವಯಸ್ಸಲ್ಲಿ ಅಮ್ಮನಿಗೆ ಲವ್ ಮ್ಯಾರೇಜ್​; ಸಂತಸಪಟ್ಟ ಮಗನ ದೇಶವಿದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts