More

    “ಇಡೀ ಕೃಷಿ ವ್ಯವಹಾರವನ್ನು ಇಬ್ಬರು ಮಿತ್ರರಿಗೆ ಕೊಡಲಿದ್ದಾರೆ ಮೋದಿ” : ರಾಹುಲ್ ಗಾಂಧಿ

    ಜೈಪುರ: ಇಡೀ ಕೃಷಿ ವ್ಯವಹಾರವನ್ನು ತಮ್ಮ ಇಬ್ಬರು ಮಿತ್ರರಿಗೆ ಹಸ್ತಾಂತರ ಮಾಡಲು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ರಾಜಸ್ತಾನದ ರೂಪನ್ಗಡದಲ್ಲಿ ಶನಿವಾರ ರೈತರನ್ನು ಉದ್ದೇಶಿಸಿ ಮಾತನಾಡುತ್ತಾ, ಯಾರ ಹೆಸರನ್ನೂ ಹೇಳದೆ ಈ ಆರೋಪವನ್ನು ಮಾಡಿದ್ದಾರೆ.

    “ಕೃಷಿಯು ದೇಶದ ಶೇ.40 ರಷ್ಟು ಜನರ ವ್ಯವಹಾರವಾಗಿದೆ. ಇದು ರೈತರು, ಸಣ್ಣ ಮತ್ತು ಮಧ್ಯಮ ವ್ಯವಹಾರಸ್ಥರು, ವ್ಯಾಪಾರಿಗಳು, ಕಾರ್ಮಿಕರನ್ನು ಒಳಗೊಂಡಿದೆ. ನರೇಂದ್ರ ಮೋದಿ ಈ ಪೂರ್ಣ ವ್ಯವಹಾರವನ್ನು ತಮ್ಮ ಇಬ್ಬರು ಮಿತ್ರರಿಗೆ ಕೊಡಲು ಬಯಸಿದ್ದಾರೆ. ಇದೇ ಕೃಷಿ ಕಾಯ್ದೆಗಳ ಉದ್ದೇಶ” ಎಂದು ಗಾಂಧಿ ಹೇಳಿದ್ದಾರೆ. “ಮೋದಿ ಆಯ್ಕೆ ನೀಡುತ್ತಿದ್ದೇನೆ ಎಂದರು. ಆದರೆ ಅವರು ನೀಡುತ್ತಿರುವ ಆಯ್ಕೆಗಳೆಂದರೆ – ಹಸಿವು, ನಿರುದ್ಯೋಗ ಮತ್ತು ಆತ್ಮಹತ್ಯೆ” ಎಂದು ವಾಕ್​ಪ್ರಹಾರ ನಡೆಸಿದ್ದಾರೆ.

    ಇದನ್ನೂ ಓದಿ: ‘ಎಂ’ ಅಕ್ಷರದವರನ್ನು ಟೀಕಿಸೋ ಭರದಲ್ಲಿ ಕಾಲ ಮೇಲೆ ಚಪ್ಪಡಿ ಹಾಕಿಕೊಂಡ ರಾಹುಲ್‌ಗಾಂಧಿ!

    ರಾಜ್ಯದ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೊತ್​ಸ್ರಾ ಇಬ್ಬರ ನಡುವೆ ಟ್ರ್ಯಾಕ್ಟರ್​ನಲ್ಲಿ ಕೂತು ರಾಲಿಯ ಸ್ಥಳಕ್ಕೆ ಆಗಮಿಸಿದ ರಾಹುಲ್ ಗಾಂಧಿ, ರಾಜಸ್ತಾನಿ ಸಫಾ ಧರಿಸಿದ್ದರು. ಎರಡು ಟ್ರ್ಯಾಕ್ಟರ್​ಗಳ ಟ್ರಾಲಿಗಳನ್ನು ಸೇರಿಸಿ ರಚಿಸಲಾದ ವೇದಿಕೆಯ ಮೇಲೆ ನಿಂತು ಗಾಂಧಿ ಮಾತಾಡಿದರೆ, ಜನರೂ ಟ್ರ್ಯಾಕ್ಟರ ಟ್ರಾಲಿಗಳ ಮೇಲೆ ಕೂತು ಭಾಷಣ ಕೇಳಿದರು.(ಏಜೆನ್ಸೀಸ್)

    “17 ತಿಂಗಳ ಲೆಕ್ಕ ಕೇಳುತ್ತಿದ್ದೀರಿ, 70 ವರ್ಷಗಳ ಲೆಕ್ಕ ತಂದಿದ್ದೀರಾ ?!”

    ಸುಳ್ಳು ಸುದ್ದಿ, ದ್ವೇಷ ಹರಡುವ ಟ್ವೀಟ್​ಗಳು : ಟ್ವಿಟರ್ ಮತ್ತು ಸರ್ಕಾರಕ್ಕೆ ಸುಪ್ರೀಂ ನೋಟೀಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts