More

    ಶತ್ರು ನೆಲಕ್ಕೇ ನುಗ್ಗಿ ಉಗ್ರದಮನ ಪಕ್ಕಾ: ಪ್ರಧಾನಿ ಮೋದಿ

    ಹೃಷಿಕೇಶ: ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಕ್ರಿಮಿನಲ್​ಗಳು ಪಾಕಿಸ್ತಾನದಲ್ಲಿ ನಿಗೂಢವಾಗಿ ಹತ್ಯೆಗೀಡಾಗುತ್ತಿರುವ ನಡುವೆಯೇ ‘ಉಗ್ರರನ್ನು ಅವರ ಮನೆಗಳಿಗೇ ನುಗ್ಗಿ ಕೊಲ್ಲುವುದು ನಮ್ಮ ಸಿದ್ಧಾಂತ’ ಎಂದು ಪ್ರಧಾನಿ ನರೇಂದ್ರ ಮೋದಿ ಶತ್ರು ರಾಷ್ಟ್ರಕ್ಕೆ ನೇರ ಎಚ್ಚರಿಕೆ ರವಾನಿಸಿದ್ದಾರೆ.

    ಉತ್ತರಾಖಂಡದ ಹೃಷಿಕೇಶದಲ್ಲಿ ನಡೆದ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ ಬಿಜೆಪಿ ನೇತೃತ್ವದ ದೃಢ ಸರ್ಕಾರ ಇರುವುದರಿಂದಲೇ ದೇಶದ ಭದ್ರತಾ ಪಡೆಗಳು ಉಗ್ರರ ನೆಲಕ್ಕೇ ನುಗ್ಗಿ ಮಟ್ಟ ಹಾಕುತ್ತಿವೆ. ಇದೇ ನಮ್ಮ ಸರ್ಕಾರದ ಸಿದ್ಧಾಂತ ಎಂದು ಗುಡುಗಿದರು.

    ಭಾರತದಲ್ಲಿ ದುರ್ಬಲ ಹಾಗೂ ಅಸ್ಥಿರ ಸರ್ಕಾರಗಳಿದ್ದಾಗೆಲ್ಲ ಶತ್ರುಗಳು ಅದರ ಪ್ರಯೋಜನ ಪಡೆಯುತ್ತಿದರು. ಇದರಿಂದಲೇ ಭಯೋತ್ಪಾದನೆ ದೇಶಾದ್ಯಂತ ವ್ಯಾಪಿಸುತ್ತಿತ್ತು. ಸ್ಥಿರ ಸರ್ಕಾರದ ಪ್ರಯೋಜನ ಕಂಡಿರುವ ಜನರಿಂದಾಗಿ ‘ಮತ್ತೊಮ್ಮೆ ಮೋದಿ ಸರ್ಕಾರ’ ಎಂಬ ಉದ್ಘೋಷ ದೇಶಾದ್ಯಂತ ಪ್ರತಿಧ್ವನಿಸುತ್ತಿದೆ ಎಂದು ಹೇಳಿದರು. ಹಿಂದಿನ ದುರ್ಬಲ ಕಾಂಗ್ರೆಸ್ ಸರ್ಕಾರ ಗಡಿ ಮೂಲಸೌಕರ್ಯ ಸದೃಢಗೊಳಿಸಿರಲಿಲ್ಲ. ಈಗ ರಸ್ತೆ ಹಾಗೂ ಆಧುನಿಕ ಸುರಂಗಗಳನ್ನು ಗಡಿ ಯುದ್ದಕ್ಕೂ ನಿರ್ವಿುಸಲಾಗಿದೆ.

    ಭ್ರಷ್ಟರು ದೇಶವನ್ನು ಲೂಟಿ ಮಾಡುವುದನ್ನು ತಡೆದಿರುವುದರಿಂದ ಅವರ ಸಿಟ್ಟು ನಮ್ಮ ವಿರುದ್ಧ ಅಧಿಕವಾಗಿದೆ ಎಂದೂ ಮೋದಿ ಹೇಳಿದರು. ಉತ್ತರಾಖಂಡವನ್ನು ಬ್ರಹ್ಮಕಮಲದ ನೆಲ ಎಂದು ಬಣ್ಣಿಸಿದ ಮೋದಿ, ಈ ಸಲ ಚುನಾವಣೆಯಲ್ಲಿ ಕಮಲದ ಗುರುತಿಗೆ ಮತ ಚಲಾಯಿಸುವ ಮೂಲಕ ಎಲ್ಲ ಐದು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವಂತೆ ಮಾಡಿ ಎಂದು ಮತ ಯಾಚಿಸಿದರು.

    2023ರಿಂದೀಚೆಗೆ ಭಾರತಕ್ಕೆ ಬೇಕಿದ್ದ 20ಕ್ಕೂ ಹೆಚ್ಚು ಉಗ್ರರು ಕ್ರಿಮಿನಲ್​ಗಳು ಪಾಕಿಸ್ತಾನದಲ್ಲಿ ನಿಗೂಢವಾಗಿ ಹತ್ಯೆಗೀಡಾಗಿದ್ದಾರೆ. ಈ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ದಿ ಗಾರ್ಡಿಯನ್ ಪತ್ರಿಕೆ ಇತ್ತೀಚೆಗಷ್ಟೇ ವರದಿ ಮಾಡಿತ್ತು. ಆದರೆ ಈ ಆರೋಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.

    ಉಗ್ರರ ನಿಗ್ರಹಿಸಲು ಪಾಕ್​ಗೆ ಸಹಕಾರ: ಇನ್ನೊಂದೆಡೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ‘ಪಾಕಿಸ್ತಾನ ಉಗ್ರರನ್ನು ಮಟ್ಟಹಾಕಲೇಬೇಕು, ಅವರಿಗೆ ಅದು ಸಾಧ್ಯವಾಗದೇ ಇದ್ದರೆ ಉಗ್ರ ನಿಮೂಲನೆಗೆ ನಾವೇ ಸಹಕಾರ ನೀಡುತ್ತೇವೆ’ ಎಂದು ಘೋಷಿಸಿದ್ದಾರೆ.

    ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು ಭಯೋತ್ಪಾದನೆ ಮೂಲಕ ಭಾರತದಲ್ಲಿ ಅಸ್ಥಿರತೆ ಸೃಷ್ಟಿಸಲು ಪಾಕಿಸ್ತಾನ ಪ್ರಯತ್ನಿಸಿದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ತುರ್ತಪರಿಸ್ಥಿತಿ ಸಮಯದಲ್ಲಿ ತಮ್ಮ ತಾಯಿಯ ಅಂತಿಮ ಸಂಸ್ಕಾರಕ್ಕೆ ತೆರಳಲು ಅನುವು ಮಾಡಿಕೊಟ್ಟಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಸಿಂಗ್, ಈಗ ಅವರು ನಮ್ಮನ್ನು ಸರ್ವಾಧಿಕಾರಿಗಳು ಎನ್ನುತ್ತಿದ್ದಾರೆ ಎಂದು ಕಿಡಿಕಾರಿದರು. ಗಡಿದಾಟಿ ತಪ್ಪಿಸಿಕೊಂಡಿರುವ ಭಯೋತ್ಪಾದಕರನ್ನು ಸದೆಬಡಿಯಲು ಪಾಕಿಸ್ತಾನಕ್ಕೆ ನುಗ್ಗಲಿಕ್ಕೂ ಹಿಂಜರಿಯುವುದಿಲ್ಲ ಎಂದು ಇತ್ತೀಚೆಗಷ್ಟೇ ರಾಜನಾಥ್ ಸಿಂಗ್ ಹೇಳಿದ್ದರು.

    ದಿ ಗಾರ್ಡಿಯನ್ ಹೇಳಿದ್ದೇನು?

    • ಪಾಕ್ ಕ್ರಿಮಿನಲ್​ಗಳ ಹತ್ಯೆಗೆ ವಿದೇಶಿ ಸಾಕ್ಷ್ಯ
    • ಭಾರತವನ್ನು ಬೊಟ್ಟು ಮಾಡಿದ ಗಾರ್ಡಿಯನ್
    • ದಿ ಗಾರ್ಡಿಯನ್ ಬ್ರಿಟನ್​ನ ಖ್ಯಾತ ದಿನಪತ್ರಿಕೆ
    • ವಿದೇಶಿ ಉಗ್ರರ ಹತ್ಯೆ ಭಾರತದ ಹೊಸ ಸ್ಟ್ರಾಟಜಿ
    • ಅಜ್ಞಾತ ಭಾರತ ಗುಪ್ತಚರ ಮೂಲ ಆಧರಿಸಿ ವರದಿ
    • ಪಾಕ್ ಗುಪ್ತದಳದ ಮಾಹಿತಿ ಪಡೆದು ಆರೋಪ
    • ಪಾಕ್ ಅಪರಿಚಿತ ಬಂಧೂಕುದಾರಿಗಳಿಗೆ ಹೊಣೆ
    • ಭಾರತದ ವಿದೇಶಿ ಗುಪ್ತಚರ ಏಜೆನ್ಸಿ ನೇರ ಶಾಮೀಲು
    • 2019ರ ಪುಲ್ವಾಮಾ ದಾಳಿ ಬಳಿಕ ಭಾರತ ಆಕ್ರೋಶ
    • ಪಾಕ್​ನವರಿಂದಲೇ ಪಾಕ್ ಬಗ್ಗಬಡಿಯುವ ತಂತ್ರ
    • ಐಸಿಸ್, ತಾಲಿಬಾನ್ ಘಟಕ ಜಾಲಕ್ಕೆ ಭಾರತ ಎಂಟ್ರಿ
    • ಉಗ್ರರ ಜತೆಗೆ ಭಾರತೀಯ ಏಜೆಂಟರ ಸಂಪರ್ಕ
    • ಧರ್ಮನಿಂದಕರ ಪಟ್ಟ ಕಟ್ಟಿ ಉಗ್ರರ ಹತ್ಯೆಗೆ ಸುಪಾರಿ
    • ಸಿಖ್ ಉಗ್ರ ಪರಂಜಿತ್ ಸಿಂಗ್ ಇದೇ ರೀತಿ ಹತ್ಯೆ

    ಹತ್ಯೆಯಾದ ಪ್ರಮುಖ ಉಗ್ರರು

    • 2020ರ ಬಳಿಕ ಪಾಕ್​ನಲ್ಲಿ 20 ಕ್ರಿಮಿನಲ್​ಗಳ ಹತ್ಯೆ
    • ಮೃತರೆಲ್ಲರೂ ಭಾರತಕ್ಕೆ ಬೇಕಿದ್ದ ಕುಖ್ಯಾತ ಉಗ್ರರು
    • ಖಲಿಸ್ತಾನಿ ಉಗ್ರ ಪರಮ್​ತ್ ಪಂಜ್ವಾರ್ ಕಗ್ಗೊಲೆ
    • 2023ರ ಮೇ 6ರಂದು ಲಾಹೋರ್​ನಲ್ಲಿ ಹತ್ಯೆ
    • 2023 ಸೆ.12ಕ್ಕೆ ಎಲ್​ಇಟಿ ಜಿಯಾ ರೆಹಮಾನ್ ಕೊಲೆ
    • 2023 ಸೆ.30 ಲಷ್ಕರ್ ಉಗ್ರ ಮುಫ್ತಿ ಕೈಸರ್ ಹತ್ಯೆ
    • 2023 ಅ.10ಕ್ಕೆ ಜೈಶ್ ಉಗ್ರ ಶಾಹೀದ್ ಲತೀಫ್ ಹತ್ಯೆ
    • ಈತ ಪಠಾಣ್​ಕೋಟ್ ದಾಳಿಯ ಮಾಸ್ಟರ್​ವೆುೖಂಡ್
    • 2023 ನ.7ಕ್ಕೆ ಕಾಶ್ಮೀರದ ಉಗ್ರ ಖ್ವಾಜಾ ಶಾಹಿದ್ ಹತ್ಯೆ
    • ನ.10ಕ್ಕೆ ಲಷ್ಕರ್ ಕಮಾಂಡರ್ ಅಕ್ರಮ್ ಘಾಜಿ ಕಗ್ಗೊಲೆ
    • ನ.12-ಜೈಶ್ ಮುಖ್ಯಸ್ಥ ರಹೀಮ್ ಉಲ್ಲಾ ತಾರೀಖ್ ಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts