More

    ಸಾಮಾಜಿಕ ಚಿಂತನೆ ಮೂಡಿಸಲು ಎನ್ನೆಸ್ಸೆಸ್ ವೇದಿಕೆ

    ಸವಣೂರ: ವಿದ್ಯಾರ್ಥಿ ಜೀವನದಲ್ಲಿ ಸಾಮಾಜಿಕ ಚಿಂತನೆ ಮೂಡಿಸಲು ರಾಷ್ಟ್ರೀಯ ಸೇವಾ ಯೋಜನೆ ಮುಖ್ಯ ವೇದಿಕೆಯಾಗಿದೆ ಎಂದು ಸಾಹಿತಿ, ಶಿಗ್ಗಾಂವಿ ಬಿಜೆಪಿ ಮಂಡಳ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.

    ಶ್ರೀ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯ ಸವಣೂರಿನ ಕೀರ್ತಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಎನ್​ಎಸ್​ಎಸ್ ಕೋಶ, ಹಾವೇರಿ ವಿಶ್ವವಿದ್ಯಾಲಯ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಕುಣಿಮೆಳ್ಳಿಮಳ್ಳಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ತಾಲೂಕಿನ ಹಳೇ ಮೆಳ್ಳಗಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಎನ್​ಎಸ್​ಎಸ್ ವಾರ್ಷಿಕ ಶಿಬಿರ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

    ಶ್ರೀ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಶಶಿಕಲಾ ಪೋಲಿಸಗೌಡ್ರ ಶಿಬಿರ ಉದ್ಘಾಟಿಸಿ ಮಾತನಾಡಿ, ಪ್ರತಿ ವಿದ್ಯಾರ್ಥಿಗೆ ರಾಷ್ಟ್ರೀಯ ಸೇವಾ ಯೋಜನೆ ತರಬೇತಿ, ಜಾಗೃತಿ ಅವಶ್ಯವಾಗಿದೆ. ನಿತ್ಯ ಒತ್ತಡ ಬದುಕು ಸಾಗಿಸುವ ಯುವ ಜನಾಂಗ ಸೇವಾ ಮನೋಭಾವನೆ ರೂಢಿಸಿಕೊಂಡಲ್ಲಿ ಸಾರ್ಥಕ ಬದುಕು ಪಡೆಯಲು ಸಾಧ್ಯವಾಗಲಿದೆ ಎಂದರು.

    ಎನ್​ಎಸ್​ಎಸ್ ಜಿಲ್ಲಾ ನೋಡಲ್ ಅಧಿಕಾರಿ ಡಾ. ಸಿ.ಎಸ್. ಕುಮ್ಮಾರ ಶಿಬಿರ ಕುರಿತು, ಪ್ರಾಚಾರ್ಯ ಮಾಲತೇಶ ದಾನಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಪೋಲಿಸಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇ.ಮೂ. ಗಂಗಾಧರಯ್ಯ ಹಿರೇಮಠ, ಚನ್ನಬಸಯ್ಯ ಹಿರೇಮಠ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಭಜಂತ್ರಿ, ಸದಸ್ಯರಾದ ಸಂಗನಗೌಡ ಹೊಂಬಾಡಿ, ನಿಂಗಪ್ಪ ಚಿಗಳ್ಳಿ, ಇತರರಿದ್ದರು.

    ಅರುಣ ಭರಡಿ, ಶಿಬಿರಾರ್ಥಿಗಳಾದ ಶ್ವೇತಾ ಎಂ., ಐಶ್ವರ್ಯ ಹುಲ್ಲಮ್ಮನವರ, ಲೋಹಿತ್ ಬಾಳಿಕಾಯಿ, ಕಿರಣ ಪೊಲೀಸಗೌಡ್ರು, ವಿನಾಯಕ ಲಮಾಣಿ, ಚೇತನ ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts