More

    ಕನ್ನಡದಲ್ಲೇ ಇಂಗ್ಲಿಷ್​ ಕಲಿಕೆ: ದೈನಂದಿನ ಬಳಕೆಯ ವಾಕ್ಯಗಳು

    ಕನ್ನಡದಲ್ಲೇ ಇಂಗ್ಲಿಷ್​ ಕಲಿಕೆ: ದೈನಂದಿನ ಬಳಕೆಯ ವಾಕ್ಯಗಳು1) ಸ್ವಲ್ಪ ರವಿಯ ಗ್ಯಾರೇಜಿಗೆ ಹೋಗಿ ನನ್ನ ಬೈಕ್ ತಯಾರಾಗಿದೆಯೆ ಎಂದು ವಿಚಾರಿಸುತ್ತೀಯಾ /ಕೇಳಿ ನೋಡುತ್ತೀಯಾ?

    Hey, can you go to Ravi’s garage and check to see if my bike is ready?

    2) ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಬಸ್ ಹತ್ತಿದಂತೆ ನಾನು ಅವರ ಹೆಸರನ್ನು ಪಟ್ಟಿಯಲ್ಲಿದ್ದ ಹೆಸರುಗಳೊಡನೆ ಪರಿಶೀಲಿಸಿದೆ.

    I checked off the names of every student on the list as they got on the bus.

    3) ‘ನನಗೆ ಚಾವಿ ಸಿಗಲಿಲ್ಲ.’ ‘ನಿನ್ನ ಚೀಲ / ಜೋಬಿನಲ್ಲಿ ಇನ್ನೊಮ್ಮೆ ಹುಡುಕಿ ನೋಡು.’

    “I didn’t find the key.” “Have a check in / through your bag / pockets.”

    4) ವಾಹನದ ಚಾಲಕ ನೀನು, ಆದುದರಿಂದ ಪೆಟ್ರೋಲ್ ಎಷ್ಟಿದೆ ಎಂದು ಗಮನಿಸುತ್ತಿರುವುದು ನಿನ್ನ ಕರ್ತವ್ಯ.

    You are the driver and it’s yourduty to check on the petrol level.

    5) ಆ ವ್ಯಕ್ತಿಯ ಮಾತು ಕೇಳಿದ ಮೇಲೆ ನನ್ನ ಪತ್ನಿ ನನಗೆ ತಿಳಿಯದಂತೆ ಇನ್ನೊಬ್ಬರೊಡನೆ ಸಂಬಂಧ ಇಟ್ಟುಕೊಂಡಿರುವಂತೆ ಅನಿಸುತ್ತಿದೆ.

    After hearing his words I’m having a feeling that my wife is cheating on me.

    6) ನಾವು ನಮ್ಮ ತಂಡದವರನ್ನು ಹುರಿದುಂಬಿಸಿದಾಗ ಹುಡುಗರು ಇನ್ನೊಂದು ತಂಡದವರನ್ನು ಹುರಿದುಂಬಿಸುತ್ತಿದ್ದರು.

    When we cheered for our team, those boys were cheering for the other side.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts