More

    ಭಾರತ ಪ್ರವಾಸಕ್ಕೆ ಮುನ್ನ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಗೆದ್ದು ಬೀಗಿದ ಆಂಗ್ಲರು

    ಗಾಲೆ: ಭಾರತ ಪ್ರವಾಸಕ್ಕೆ ಪೂರ್ವಭಾವಿಯಾಗಿ ಇಂಗ್ಲೆಂಡ್ ತಂಡ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಗೆದ್ದು ಬೀಗಿದೆ. ಆತಿಥೇಯ ಶ್ರೀಲಂಕಾ ವಿರುದ್ಧದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಗೆಲುವು ದಾಖಲಿಸಿದ ಇಂಗ್ಲೆಂಡ್ ತಂಡ 2-0ಯಿಂದ ಸರಣಿ ವಶಪಡಿಸಿಕೊಂಡು ಬಲಿಷ್ಠ ಭಾರತ ವಿರುದ್ಧ ಸರಣಿಗೆ ವಿಶ್ವಾಸದಿಂದ ಸಜ್ಜಾಗಿದೆ. ಸರಣಿಯ 4 ಇನಿಂಗ್ಸ್‌ಗಳಲ್ಲಿ 426 ರನ್ ಸಿಡಿಸಿದ ಇಂಗ್ಲೆಂಡ್ ನಾಯಕ ಜೋ ರೂಟ್ ಅವರ ಭರ್ಜರಿ ಫಾರ್ಮ್ ಕೂಡ ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.

    ಗಾಲೆ ಸ್ಟೇಡಿಯಂನಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯದಲ್ಲಿ 9 ವಿಕೆಟ್‌ಗೆ 339 ರನ್‌ಗಳಿಂದ 4ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್, ಕೇವಲ 5 ರನ್ ಸೇರಿಸಿ 344 ರನ್‌ಗೆ ಆಲೌಟ್ ಆಯಿತು. ಇದರಿಂದ ಲಂಕಾ, ಮೊದಲ ಇನಿಂಗ್ಸ್‌ನಲ್ಲಿ 37 ರನ್ ಮುನ್ನಡೆ ಸಂಪಾದಿಸಿದರೂ, ಅದರ ಬೆನ್ನಲ್ಲೇ 2ನೇ ಇನಿಂಗ್ಸ್‌ನಲ್ಲಿ ಕೇವಲ 126 ರನ್‌ಗೆ ಕುಸಿಯಿತು. ಸ್ಪಿನ್ನರ್‌ಗಳಾದ ಡೊಮಿನಿಕ್ ಬೆಸ್ (49ಕ್ಕೆ 4) ಮತ್ತು ಜಾಕ್ ಲೀಚ್ (59ಕ್ಕೆ 4) ದಾಳಿಗೆ ಲಂಕಾ ನಾಟಕೀಯ ಕುಸಿತ ಕಂಡಿತು. ಬಾಲಂಗೋಚಿ ಲಸಿತ್ ಎಂಬುಲ್ಡೆನಿಯಾ ಬಿರುಸಿನ 40 ರನ್ ಗಳಿಸದಿದ್ದರೆ ಲಂಕಾ ಮೂರಂಕಿಯನ್ನೂ ತಲುಪುವುದು ಸಾಧ್ಯವಾಗುತ್ತಿರಲಿಲ್ಲ.

    ಇದನ್ನೂ ಓದಿ: ಆಸೀಸ್ ಪ್ರವಾಸದಲ್ಲಿ ಮಿಂಚಿದ 6 ಕ್ರಿಕೆಟಿಗರಿಗೆ ಭರ್ಜರಿ ಗಿಫ್ಟ್​ ಕೊಟ್ಟ ಮಹೀಂದ್ರಾ

    ಗೆಲುವಿಗೆ 164 ರನ್ ಸವಾಲು ಪಡೆದ ಇಂಗ್ಲೆಂಡ್, ಆರಂಭಿಕ ಡೊಮಿನಿಕ್ ಸಿಬ್ಲೆ (56*) ಮತ್ತು ಜೋಸ್ ಬಟ್ಲರ್ (46*) ಹೋರಾಟದಿಂದ ಇನ್ನೊಂದು ದಿನ ಬಾಕಿ ಇರುವಂತೆಯೇ ಗೆಲುವು ಒಲಿಸಿಕೊಳ್ಳುವಲ್ಲಿ ಸಲವಾಯಿತು. ದಿನದಾಟ ಮುಕ್ತಾಯಕ್ಕೆ ಕೆಲವೇ ಓವರ್ ಬಾಕಿ ಇದ್ದಾಗ 4 ವಿಕೆಟ್‌ಗೆ 164 ರನ್ ಪೇರಿಸಿ ಇಂಗ್ಲೆಂಡ್ ಜಯ ದಾಖಲಿಸಿತು. ಲಂಕಾ ನೆಲದಲ್ಲಿ ಇಂಗ್ಲೆಂಡ್‌ಗೆ ಇದು ಸತತ 6ನೇ ಟೆಸ್ಟ್ ಗೆಲುವಾಗಿದೆ. ಅಲ್ಲದೆ ಲಂಕಾದಲ್ಲಿ ಸತತ 2ನೇ ಟೆಸ್ಟ್ ಸರಣಿ ಗೆಲುವಾಗಿದೆ.

    ಜೋ ರೂಟ್ ಲಂಕಾ ನೆಲದಲ್ಲಿ ನಾಯಕರಾಗಿ 5ನೇ ಟೆಸ್ಟ್ ಗೆಲುವು ಕಂಡರು. ಈ ಮೂಲಕ ಲಂಕಾದಲ್ಲಿ ಗರಿಷ್ಠ ಟೆಸ್ಟ್ ಗೆಲುವು ಕಂಡ ವಿದೇಶಿ ನಾಯಕ ಎನಿಸಿದ್ದ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದರು.

    ಶ್ರೀಲಂಕಾ: 381 ಮತ್ತು 35.4 ಓವರ್‌ಗಳಲ್ಲಿ 126 (ಕುಸಾಲ್ ಪೆರೇರಾ 14, ತಿರಿಮನ್ನೆ 13, ಮ್ಯಾಥ್ಯೂಸ್ 5, ಡಿಕ್‌ವೆಲ್ಲಾ 7, ಎಂಬುಲ್ಡೆನಿಯಾ 40, ಬೆಸ್ 49ಕ್ಕೆ 4, ಲೀಚ್ 59ಕ್ಕೆ 4, ರೂಟ್ 0ಕ್ಕೆ 2). ಇಂಗ್ಲೆಂಡ್: 116.1 ಓವರ್‌ಗಳಲ್ಲಿ 344(ಎಂಬುಲ್ಡೆನಿಯಾ 137ಕ್ಕೆ 7) ಮತ್ತು 43.3 ಓವರ್‌ಗಳಲ್ಲಿ 4 ವಿಕೆಟ್‌ಗೆ 164 (ಸಿಬ್ಲೆ 56*, ಬೇರ್‌ಸ್ಟೋ 29, ರೂಟ್ 11, ಬಟ್ಲರ್ 46*, ಎಂಬುಲ್ಡೆನಿಯಾ 73ಕ್ಕೆ 3). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಜೋ ರೂಟ್.

    ಟೀಮ್ ಇಂಡಿಯಾದ ಈ ಕ್ರಿಕೆಟಿಗನ ಅಕ್ಕ ಕೂಡ ವೃತ್ತಿಪರ ಕ್ರಿಕೆಟರ್, ತಮ್ಮನ ಯಶಸ್ಸಿಗೂ ನೆರವು!

    ಟೀಮ್ ಇಂಡಿಯಾ ವೇಗಿ ಶಾರ್ದೂಲ್ ಠಾಕೂರ್ ಈಗ ಶಾರ್ದೂಲ್ಕರ್!

    ಆಸೀಸ್ ನೆಲದ ಯಶಸ್ಸಿನ ಗುಟ್ಟು ಬಿಚ್ಚಿಡುತ್ತಿದ್ದಾರೆ ಟೀಮ್ ಇಂಡಿಯಾ ಕ್ರಿಕೆಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts