More

    ಶ್ರೀಲಂಕಾ ಪ್ರವಾಸದ ಆರಂಭದಲ್ಲೇ ಇಂಗ್ಲೆಂಡ್ ತಂಡಕ್ಕೆ ಕರೊನಾ ಶಾಕ್..!

    ಕೊಲಂಬೊ: ಎರಡು ಟೆಸ್ಟ್ ಪಂದ್ಯಗಳ ಸರಣಿ ಆಡಲು ಶ್ರೀಲಂಕಾಗೆ ಆಗಮಿಸಿರುವ ಇಂಗ್ಲೆಂಡ್ ತಂಡ ಐಸೋಲೇಷನ್ ಅವಧಿಯಲ್ಲೇ ಆಘಾತಕ್ಕೊಳಗಾಗಿದೆ. ಲಂಕಾಗೆ ಆಗಮಿಸಿದ ಬೆನ್ನಲ್ಲೇ ತಂಡದ ಪ್ರಮುಖ ಆಟಗಾರ ಮೊಯಿನ್ ಅಲಿಗೆ ಕರೊನಾ ವೈರಸ್ ಕಾಣಿಸಿಕೊಂಡಿದೆ. ಭಾನುವಾರವಷ್ಟೇ ಇಂಗ್ಲೆಂಡ್ ತಂಡ ಲಂಕಾಗೆ ಬಂದಿಳಿಯಿತು. ಈ ವೇಳೆ ನಡೆದ ಮೊದಲ ಕರೊನಾ ವೈರಸ್ ಪರೀಕ್ಷೆಯಲ್ಲಿ ಮೊಯಿನ್ ಅಲಿ ಹೊರತುಪಡಿಸಿ ಇಂಗ್ಲೆಂಡ್ ತಂಡದ ಇತರ ಎಲ್ಲ ಆಟಗಾರರ ವರದಿ ನೆಗೆಟಿವ್ ಬಂದಿದೆ.

    ಇದನ್ನೂ ಓದಿ: ವಿದ್ಯುತ್ ಉತ್ಪಾದಿಸುತ್ತಿರುವ ಕರ್ನಾಟಕದ ರೈತನಿಗೆ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ

    ಮೊಯಿನ್ ಅಲಿ ಅವರನ್ನು ಶ್ರೀಲಂಕಾದ ಕ್ವಾರಂಟೈನ್ ಶಿಷ್ಟಾಚಾರದಂತೆ 10 ದಿನಗಳ ಕಾಲ ಸ್ವಯಂ ಐಸೋಲೇಷನ್‌ಗೆ ಒಳಪಡಿಸಲಾಗಿದೆ. ಸದ್ಯ ಇಂಗ್ಲೆಂಡ್ ತಂಡ ಹಂಬಂತೋಟಾದಲ್ಲಿದ್ದು, ಜನವರಿ 10ರಂದು ಗಾಲೆಗೆ ಪ್ರಯಾಣ ಬೆಳೆಸಲಿದೆ. ಮೊಯಿನ್ ಅಲಿಗೆ ಪ್ರತ್ಯೇಕ ಹೊಟೇಲ್‌ನಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಜನವರಿ 14ರಂದು ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಮೊಯಿನ್ ಅಲಿ ಆಡುವ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಇಲ್ಲ ಎಂದು ಇಸಿಬಿ ವಕ್ತಾರ ತಿಳಿಸಿದ್ದಾರೆ.

    ಇದನ್ನೂ ಓದಿ: 2021ರ ಮೊದಲ ಶತಕವೀರ ಕೇನ್ ವಿಲಿಯಮ್ಸನ್, ಮಹಾನ್ ಸಾಧನೆಯತ್ತ ಕಿವೀಸ್

    ಇಂಗ್ಲೆಂಡ್ ತಂಡ ಕಳೆದ ಮಾರ್ಚ್ ತಿಂಗಳಲ್ಲಿ ಶ್ರೀಲಂಕಾ ಪ್ರವಾಸಕ್ಕೆ ಆಗಮಿಸಿತ್ತು. ಆದರೆ, ಕರೊನಾ ವೈರಸ್ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ತವರಿಗೆ ವಾಪಸಾಗಿತ್ತು. ಭಾನುವಾರ ವಿಶೇಷ ವಿಮಾನದ ಬಳಿಕ ಶ್ರೀಲಂಕಾಗೆ ವಾಪಸಾಗಿತ್ತು. ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಇಂಗ್ಲೆಂಡ್ ತಂಡ, ಲಂಕಾ ಪ್ರವಾಸಕ್ಕಾಗಿ ವಿವಿಧ ವಿಭಾಗಕ್ಕೆ 7 ಕೋಚ್‌ಗಳನ್ನು ನೇಮಿಸಿಕೊಂಡಿದೆ.

    ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಕರ್ನಾಟಕದ ಖ್ಯಾತ ಹೃದಯ ತಜ್ಞರಿಂದ ಚಿಕಿತ್ಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts