More

    ದಕ್ಷಿಣ ಆಫ್ರಿಕಾ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಿದ ಇಂಗ್ಲೆಂಡ್, ಟಿ20 ರ‌್ಯಾಂಕಿಂಗ್‌ನಲ್ಲಿ ಟಾಪ್

    ಕೇಪ್‌ಟೌನ್: ವಿಶ್ವ ನಂ. 1 ಟಿ20 ಬ್ಯಾಟ್ಸ್‌ಮನ್ ಡೇವಿಡ್ ಮಲಾನ್ (99* ರನ್, 47 ಎಸೆತ, 11 ಬೌಂಡರಿ, 5 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನಿರ್ವಹಣೆಯ ನೆರವಿನಿಂದ ಇಂಗ್ಲೆಂಡ್ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಚುಟುಕು ಕ್ರಿಕೆಟ್ ಸರಣಿಯಲ್ಲಿ 3-0 ಕ್ಲೀನ್‌ಸ್ವೀಪ್ ಸಾಧಿಸಿದೆ. ಮಂಗಳವಾರ ನಡೆದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ 9 ವಿಕೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿತು. ಇದರೊಂದಿಗೆ ಇಂಗ್ಲೆಂಡ್ ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾ ತಂಡ, ಫಾಫ್​ ಡು ಪ್ಲೆಸಿಸ್ (52* ರನ್, 37 ಎಸೆತ, 5 ಬೌಂಡರಿ, 3 ಸಿಕ್ಸರ್) ಮತ್ತು ವಾನ್ ಡರ್ ಡುಸೆನ್ (74*ರನ್, 32 ಎಸೆತ, 5 ಬೌಂಡರಿ, 5 ಸಿಕ್ಸರ್) ಅರ್ಧಶತಕದ ನೆರವಿನಿಂದ 3 ವಿಕೆಟ್‌ಗೆ 191 ರನ್ ಪೇರಿಸಿತು. ಆದರೆ ಈ ಬೃಹತ್ ಸವಾಲನ್ನು ಸರಾಗವಾಗಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 17.4 ಓವರ್‌ಗಳಲ್ಲಿ 1 ವಿಕೆಟ್‌ಗೆ 192 ರನ್ ಪೇರಿಸಿ ಜಯಿಸಿತು. ಜೇಸನ್ ರಾಯ್ (16) ಬೇಗನೆ ಔಟಾದ ಬಳಿಕ ಜೋಸ್ ಬಟ್ಲರ್ (67* ರನ್, 46 ಎಸೆತ, 3 ಬೌಂಡರಿ, 5 ಸಿಕ್ಸರ್) ಮತ್ತು ಮಲಾನ್ ಜೋಡಿ ಮುರಿಯದ 2ನೇ ವಿಕೆಟ್‌ಗೆ 167 ರನ್ ಪೇರಿಸಿ ಗೆಲುವು ತಂದರು.

    ಉಭಯ ತಂಡಗಳ ಸ್ಕೋರ್ ಸಮನಾದಾಗ ಮಲಾನ್ 98 ರನ್‌ನಲ್ಲಿದ್ದರು. ಈ ವೇಳೆ ಅವರು ಬೌಂಡರಿ ಸಿಡಿಸಿದ್ದರೆ ಶತಕ ಪೂರೈಸಬಹುದಿತ್ತು. ಆದರೆ ಶತಕಕ್ಕೆ ಒಂದೇ ರನ್ ಸಾಕೆಂದು ಸಿಂಗಲ್ಸ್ ಕಸಿದ ಮಲಾನ್ ಟಿ20 ಕ್ರಿಕೆಟ್‌ನಲ್ಲಿ ತನ್ನ 2ನೇ ಸೆಂಚುರಿ ಪೂರೈಸುವ ಅವಕಾಶದಿಂದ ವಂಚಿತರಾದರು.

    ದಕ್ಷಿಣ ಆಫ್ರಿಕಾ: 3 ವಿಕೆಟ್‌ಗೆ 191 (ಡಿಕಾಕ್ 17, ಬವುಮಾ 32, ಪ್ಲೆಸಿಸ್ 52*, ವಾನ್ ಡರ್ ಡುಸೆನ್ 74*, ಸ್ಟೋಕ್ಸ್ 26ಕ್ಕೆ 2, ಜೋರ್ಡನ್ 42ಕ್ಕೆ 1). ಇಂಗ್ಲೆಂಡ್: 17.4 ಓವರ್‌ಗಳಲ್ಲಿ 1 ವಿಕೆಟ್‌ಗೆ 192 (ರಾಯ್ 16, ಬಟ್ಲರ್ 67*, ಮಲಾನ್ 99*, 37ಕ್ಕೆ 1). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಡೇವಿಡ್ ಮಲಾನ್.

    99: ಮಲಾನ್ ಟಿ20 ಕ್ರಿಕೆಟ್‌ನಲ್ಲಿ 99 ರನ್‌ಗೆ ಅಜೇಯರಾಗಿ ಉಳಿದ 3ನೇ ಬ್ಯಾಟ್ಸ್‌ಮನ್. ಅಲೆಕ್ಸ್ ಹ್ಯಾಲ್ಸ್ (2012) ಮತ್ತು ಲ್ಯೂಕ್ ರೈಟ್ (2012) ಮೊದಲಿಬ್ಬರು. ಈ ಮೂವರೂ ಇಂಗ್ಲೆಂಡ್‌ನವರು ಎಂಬುದು ಗಮನಾರ್ಹ.

    ಆಸೀಸ್‌ನಲ್ಲಿ ಗೆಲುವಿನ ಖಾತೆ ತೆರೆದ ಭಾರತ, ಏಕದಿನ ಸರಣಿಯಲ್ಲಿ ತಪ್ಪಿದ ವೈಟ್‌ವಾಷ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts