More

    ಇಂದಿನಿಂದ ಇಂಗ್ಲೆಂಡ್-ಪಾಕಿಸ್ತಾನ 2ನೇ ಟೆಸ್ಟ್

    ಸೌಥಾಂಪ್ಟನ್: ಭರ್ಜರಿ ಚೇಸಿಂಗ್ ಮೂಲಕ ಮ್ಯಾಂಚೆಸ್ಟರ್‌ನಲ್ಲಿ ಗೆಲುವು ದಾಖಲಿಸಿದ ಆತಿಥೇಯ ಇಂಗ್ಲೆಂಡ್ ತಂಡ ಗುರುವಾರದಿಂದ ನಡೆಯಲಿರುವ ಪ್ರವಾಸಿ ಪಾಕಿಸ್ತಾನ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಸರಣಿ ಒಲಿಸಿಕೊಳ್ಳುವ ಹಂಬಲದಲ್ಲಿದೆ. ಆದರೆ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅಲಭ್ಯತೆ ಆಂಗ್ಲರಿಗೆ ಹಿನ್ನಡೆ ಎನಿಸಿದೆ.

    ರೋಸ್ ಬೌಲ್ ಕ್ರೀಡಾಂಗಣದ ಜೈವಿಕ-ಸುರಕ್ಷಾ ವಾತಾವರಣದಲ್ಲಿ ನಡೆಯಲಿರುವ ಪಂದ್ಯ ಪಾಕಿಸ್ತಾನದ ಪಾಲಿಗೆ ಸರಣಿ ಜೀವಂತ ಉಳಿಸಿಕೊಳ್ಳಲು ಪ್ರಮುಖವಾಗಿದೆ. ಕಳೆದ 6 ಟೆಸ್ಟ್ ಸರಣಿಗಳಲ್ಲಿ ಮೊದಲ ಬಾರಿಗೆ ಸರಣಿಯ ಮೊದಲ ಟೆಸ್ಟ್ ಜಯಿಸುವಲ್ಲಿ ಸಲವಾಗಿರುವ ಇಂಗ್ಲೆಂಡ್ ಈಗ, ಕಳೆದ 10 ವರ್ಷಗಳಿಂದ ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿ ಗೆಲ್ಲದ ಕೊರತೆಯನ್ನು ನೀಗಿಸಿಕೊಳ್ಳುವತ್ತ ಗಮನಹರಿಸಿದೆ.

    ಈ ಪಂದ್ಯವನ್ನು ಗೆದ್ದುಕೊಂಡರೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರುವ ಅವಕಾಶ ಆಂಗ್ಲರಿಗೆ ಇದೆ. ಇಂಗ್ಲೆಂಡ್ ಸದ್ಯ 266 ಅಂಕ ಕಲೆಹಾಕಿದ್ದರೆ, ಆಸೀಸ್ 296 ಅಂಕ ಹೊಂದಿದೆ. ಭಾರತ 360 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ.

    ಇದನ್ನೂ ಓದಿ: ಐಪಿಎಲ್ ಪ್ರಾಯೋಜಕತ್ವಕ್ಕೆ ಬೆಂಗಳೂರು ಮೂಲದ ಕಂಪನಿ ಪೈಪೋಟಿ!

    ಸ್ಟೋಕ್ಸ್ ಕೌಟುಂಬಿಕ ಕಾರಣದಿಂದಾಗಿ ಸರಣಿಯ ಕೊನೇ 2 ಟೆಸ್ಟ್‌ಗಳಿಂದ ಹೊರಗುಳಿದಿದ್ದು, ಅವರ ಸ್ಥಾನವನ್ನು ಬ್ಯಾಟ್ಸ್‌ಮನ್ ಜಾಕ್ ಕ್ರೌಲಿ ತುಂಬುವ ನಿರೀಕ್ಷೆ ಇದೆ. ಪಾಕಿಸ್ತಾನ ತಂಡ ಈ ಪಂದ್ಯಕ್ಕೆ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಶಾದಾಬ್ ಖಾನ್ ಬದಲು ಮಧ್ಯಮ ವೇಗದ ಬೌಲಿಂಗ್ ಆಲ್ರೌಂಡರ್ ಹೀಮ್ ಅಶ್ರ್ಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.

    ಪಾಕ್ ನಾಯಕ ಅಜರ್ ಅಲಿ ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ವಿಲರಾಗಿದ್ದಲ್ಲದೆ, ಅವರ ನಾಯಕತ್ವವೂ ಟೀಕೆಗಳಿಗೆ ಒಳಗಾಗಿದೆ. ಹೀಗಾಗಿ ಈ ಬಾರಿ ಮತ್ತೆ ಅವರ ನಾಯಕತ್ವಕ್ಕೆ ಸತ್ವಪರೀಕ್ಷೆ ಎದುರಾಗಲಿದೆ. ನಾಯಕರಾಗಿ ವಿದೇಶದಲ್ಲಿ ಆಡಿದ ಕಳೆದ 12 ಇನಿಂಗ್ಸ್‌ಗಳಲ್ಲಿ ಅವರು ಕೇವಲ 139 ರನ್ ಬಾರಿಸಿದ್ದಾರೆ.
    *ಆರಂಭ: ಮಧ್ಯಾಹ್ನ 3.30, ನೇರಪ್ರಸಾರ: ಸೋನಿ ಸಿಕ್ಸ್

    ಭಾರತದಲ್ಲಿ 2021ರವರೆಗೆ ಕರೊನಾ ನಿಯಂತ್ರಣವಾಗದಿದ್ದರೆ ಟಿ20 ವಿಶ್ವಕಪ್ ಸ್ಥಳಾಂತರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts