More

    ಹಾಸನಕ್ಕೂ ಕಾಡುತ್ತಿದೆ ಇಂಗ್ಲೆಂಡ್​ನ ಕರೊನಾ ಸೋಂಕು! ಇಬ್ಬರು ಕ್ವಾರಂಟೈನ್​

    ಹಾಸನ: ವೇಗವಾಗಿ ಹರಡುವ ಕರೊನಾ ಸೋಂಕಿನ ಭೀತಿ ಜಿಲ್ಲೆಯನ್ನೂ ಕಾಡುತ್ತಿದ್ದು, ಇಂಗ್ಲೆಂಡ್‌ನಿಂದ ಮಂಗಳವಾರ ಜಿಲ್ಲೆಗೆ ಆಗಮಿಸಿದ ಇಬ್ಬರನ್ನು ಗುರುತಿಸಿ ಕೋವಿಡ್ 19 ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್ ಮಾಡಲಾಗಿದೆ.

    ಇದನ್ನೂ ಓದಿ: ‘ದೃಶ್ಯ’ ಸಿನಿಮಾ ಕಥೆ ನೆನಪಿಸಿತು ಅರ್ಚಕರ ಕೊಲೆ ರಹಸ್ಯ; ಕ್ಲೈಮ್ಯಾಕ್ಸ್​ನತ್ತ ತನಿಖೆ…

    ಇಂಗ್ಲೆಂಡ್‌ನ ಎಕ್ಟ್ಸ್‌ರ್‌ನಿಂದ ಹಾಸನ ತಾಲೂಕಿಗೆ ಆಗಮಿಸಿರುವ 29 ವರ್ಷದ ವಿಜ್ಞಾನಿ ಹಾಗೂ ಅರಕಲಗೂಡು ತಾಲೂಕಿಗೆ ಬಂದಿರುವ 48 ವರ್ಷದ ಖಾಸಗಿ ಉದ್ಯೋಗಿಯನ್ನು ಜಿಲ್ಲಾ ಆರೋಗ್ಯ ಇಲಾಖೆ ಗುರುತಿಸಿದೆ. ಅವರಿಬ್ಬರ ಗಂಟಲು ಹಾಗೂ ಮೂಗಿನ ದ್ರವದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.

    ಇದನ್ನೂ ಓದಿ: 70 ವರ್ಷದ ವೃದ್ಧನಿಗೆ ಮಹಿಳೆಯೊಂದಿಗೆ ಲಿವ್​ ಇನ್​ ರಿಲೇಷನ್​ಶಿಪ್​! ವಿಚಾರ ತಿಳಿದ ಮಕ್ಕಳು ಮಾಡಿದ್ದೇನು ಗೊತ್ತಾ?

    ಇಬ್ಬರಲ್ಲಿಯೂ ಯಾವುದೇ ರೋಗ ಲಕ್ಷಣಗಳು ಕಾಣಿಸಿಲ್ಲ. ಹೀಗಿದ್ದರೂ ಮುಂಜಾಗ್ರತಾ ಕ್ರಮವಾಗಿ ಇಬ್ಬರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಜಿಲ್ಲೆಗೆ ಮಂಗಳವಾರ ಇಂಗ್ಲೆಂಡ್‌ನಿಂದ ಬಂದಿರುವ ಇಬ್ಬರನ್ನು ಗುರುತಿಸಿ ಅವರನ್ನು ಕೋವಿಡ್ 19 ಪರೀಕ್ಷೆಗೆ ಒಳಪಡಿಸಲಾಗಿದೆ. ಅವರನ್ನು ಕ್ವಾರಂಟೈನ್‌ನಲ್ಲಿರಲು ಸೂಚಿಸಿದ್ದು, ವರದಿ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದಾರೆ ಜಿಲ್ಲಾಧಿಕಾರಿ ಆರ್​ ಗಿರೀಶ್​.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts