More

    ಟೆಸ್ಟ್ ಕ್ರಿಕೆಟ್ ಇತಿಹಾಸ ನಿರ್ಮಾಣ: 5 ಲಕ್ಷ ಟೆಸ್ಟ್ ರನ್ ಬಾರಿಸಿದ ಇಂಗ್ಲೆಂಡ್!

    ಜೊಹಾನ್ಸ್​ಬರ್ಗ್: ಏಕದಿನ ಕ್ರಿಕೆಟ್​ನ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್​ನಲ್ಲಿ 5 ಲಕ್ಷ ರನ್ ಪೇರಿಸಿದ ದಾಖಲೆಯನ್ನು ಮಾಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್​ಬರ್ಗ್​ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್​ನ ಮೊದಲ ದಿನದಾಟದ ವೇಳೆ ಈ ಸಾಧನೆ ಮಾಡಿದೆ.

    ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಚೆಂಡನ್ನು ಕವರ್ಸ್​ನತ್ತ ತಳ್ಳಿ ಒಂದು ರನ್ ಕಸಿದ ಬೆನ್ನಲ್ಲಿಯೇ, ಟೆಸ್ಟ್​ನಲ್ಲಿ 5 ಲಕ್ಷ ರನ್ ಪೇರಿಸಿದ ಸಾಧನೆ ಮಾಡಿತು. ತಮ್ಮ 1022ನೇ ಟೆಸ್ಟ್​ನಲ್ಲಿ ಇಂಗ್ಲೆಂಡ್ ಈ ಸಾಧನೆ ಮಾಡಿದೆ.

    830 ಟೆಸ್ಟ್​ಗಳಿಂದ 4 ಲಕ್ಷ 32, 706 ರನ್ ಗಳಿಸುವುದರೊಂದಿಗೆ ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದರೆ, 540 ಟೆಸ್ಟ್ ಪಂದ್ಯಗಳಿಂದ 2 ಲಕ್ಷ 73, 518 ರನ್​ಗಳೊಂದಿಗೆ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ಇದ್ದು, 545 ಟೆಸ್ಟ್ ಪಂದ್ಯಗಳಂದ 2 ಲಕ್ಷ 70,441 ರನ್ ಬಾರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts