More

    ಸಿಕ್ಕಿಬಿದ್ದ ಇಂಜಿನಿಯರ್: ಓದಿದ್ದು ಇಂಜಿನಿಯರಿಂಗ್, ಜತೆಗೆ ಮಾಡುತ್ತಿದ್ದುದು ಚಿರತೆ ಚರ್ಮ-ಉಗುರು ಮಾರಾಟ..

    ಬೆಂಗಳೂರು: ಇಂಜಿನಿಯರಿಂಗ್ ಪದವೀಧರನಾಗಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದವ ಚಿರತೆ ಚರ್ಮ-ಉಗುರು ಮಾರಾಟ ಮಾಡುವ ಯತ್ನದಲ್ಲಿದ್ದಾಗ ಸಿಕ್ಕಿಬಿದ್ದಿದ್ದಾನೆ. ಚಿರತೆ ಚರ್ಮ, ಉಗುರು, ದವಡೆ, ಹಲ್ಲು ಮಾರಾಟಕ್ಕೆ ಯತ್ನಿಸುತ್ತಿದ್ದ ಖಾಸಗಿ ಕಂಪನಿ ನೌಕರರನ್ನು ಸಿಐಡಿ ಅರಣ್ಯ ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ.

    ತುರುವೇಕೆರೆ ತಾಲೂಕಿನ ಬೆನಕನಕೆರೆ ಗ್ರಾಮದ ಪಿ. ಚರಣ್ (25) ಬಂಧಿತ ಇಂಜಿನಿಯರ್. ಚಿರತೆ ಚರ್ಮ, ಚಿರತೆಯ 17 ಉಗುರು, ಮೇಲ್ದವಡೆ-ಕೆಳದವಡೆ, ಹಲ್ಲುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಚರಣ್ ಎಚ್‌ಎಸ್‌ಆರ್ ಲೇಔಟ್‌ನಲ್ಲಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸೆ.5ರಂದು ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕು ಚಿಕ್ಕಬೆನಕನಕೆರೆ ಗ್ರಾಮದಲ್ಲಿ ಸ್ಕೂಟರ್‌ನಲ್ಲಿ ಚಿರತೆ ಚರ್ಮ, ಉಗುರು, ಹಲ್ಲು ಮಾರಾಟಕ್ಕೆ ಅಪರಿಚಿತ ವ್ಯಕ್ತಿ ಪ್ರಯತ್ನ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಆರೋಪಿ ಎಲ್ಲಿಂದ ಚಿರತೆ ಚರ್ಮ, ಉಗುರು ತಂದಿದ್ದ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಸಿಕ್ಕಿಬಿದ್ದ ಇಂಜಿನಿಯರ್: ಓದಿದ್ದು ಇಂಜಿನಿಯರಿಂಗ್, ಜತೆಗೆ ಮಾಡುತ್ತಿದ್ದುದು ಚಿರತೆ ಚರ್ಮ-ಉಗುರು ಮಾರಾಟ..

    ‘ಸಾಯೋವರೆಗೂ ಹುಕ್ಕೇರಿಗೆ ನಾನೇ ಎಂಎಲ್​ಎ..’ ಎಂದಿದ್ದ ಉಮೇಶ್ ಕತ್ತಿ: ವಿಜಯವಾಣಿಗೆ ನೀಡಿದ್ದ ಕೊನೇ ಸಂದರ್ಶನ..

    ಇಷ್ಟವಿಲ್ಲದ ಮದುವೆ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts