More

    ಆಫ್ರಿಕಾಕ್ಕೆ ಬೃಹತ್ ಸವಾಲೆಸೆದ ಆಂಗ್ಲರು

    ಕೇಪ್​ಟೌನ್: ಟಿ20 ಶೈಲಿಯಲ್ಲಿ ಬೆನ್ ಸ್ಟೋಕ್ಸ್ ಬಾರಿಸಿದ ಬಿರುಸಿನ ಅರ್ಧಶತಕದ ನೆರವಿನಿಂದ ಪ್ರವಾಸಿ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ತಂಡಕ್ಕೆ 2ನೇ ಟೆಸ್ಟ್ ಪಂದ್ಯದಲ್ಲಿ 438 ರನ್​ಗಳ ಬೃಹತ್ ಸವಾಲು ನೀಡಿದೆ. ದಕ್ಷಿಣ ಆಫ್ರಿಕಾ ತಂಡ ಕೂಡ ಎಚ್ಚರಿಕೆ ಬ್ಯಾಟಿಂಗ್ ನಡೆಸಿದ್ದು, ಪಂದ್ಯದ ಫಲಿತಾಂಶ ಕುತೂಹಲ ಕೆರಳಿಸಿದೆ.

    ನ್ಯೂಲಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 4 ವಿಕೆಟ್​ಗೆ 218 ರನ್​ಗಳಿಂದ 4ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್, 111 ಓವರ್​ಗಳಲ್ಲಿ 8 ವಿಕೆಟ್​ಗೆ 391 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ಇದಕ್ಕೆ ಪ್ರಮುಖವಾಗಿ ಕಾರಣವಾಗಿದ್ದು ಬೆನ್ ಸ್ಟೋಕ್ಸ್ (72 ರನ್, 47 ಎಸೆತ, 7 ಬೌಂಡರಿ, 3 ಸಿಕ್ಸರ್) ಸ್ಪೋಟಕ ಇನಿಂಗ್ಸ್ ಹಾಗೂ ಡಾಮ್ ಸಿಬ್ಲಿ (133*ರನ್, 311 ಎಸೆತ, 19 ಬೌಂಡರಿ, 1 ಸಿಕ್ಸರ್) ಚೊಚ್ಚಲ ಶತಕ. ಮೊದಲ ಇನಿಂಗ್ಸ್​ನಲ್ಲಿ 46 ರನ್​ಗಳ ಹಿನ್ನಡೆ ಕಂಡಿದ್ದ ದಕ್ಷಿಣ ಆಫ್ರಿಕಾ, ಗೆಲುವಿಗೆ 438 ರನ್ ಸವಾಲು ಪಡೆದುಕೊಂಡಿತು.

    ಚೇಸಿಂಗ್ ಆರಂಭಿಸಿರುವ ದಕ್ಷಿಣ ಆಫ್ರಿಕಾ 56 ಓವರ್​ಗಳಲ್ಲಿ 2 ವಿಕೆಟ್​ಗೆ 126 ರನ್ ಬಾರಿಸಿದ್ದು, ಗೆಲುವಿಗೆ ಉಳಿದ 8 ವಿಕೆಟ್​ಗಳಿಂದ ಇನ್ನೂ 312 ರನ್ ಬಾರಿಸಬೇಕಿದೆ. ಅರ್ಧಶತಕ ಬಾರಿಸಿರುವ ಪೀಟರ್ ಮಲಾನ್​ರೊಂದಿಗೆ (63*ರನ್, 193 ಎಸೆತ, 2 ಬೌಂಡರಿ), ನೈಟ್ ವಾಚ್​ವುನ್ ಕೇಶವ್ ಮಹಾರಾಜ್ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ದಕ್ಷಿಣ ಆಫ್ರಿಕಾ: 223 ಮತ್ತು 56 ಓವರ್​ಗಳಲ್ಲಿ 2 ವಿಕೆಟ್​ಗೆ 126 (ಪೀಟರ್ ಮಲಾನ್ 63*, ಎಲ್ಗರ್ 34, ಹಮ್ಜಾ 18, ಕೇಶವ್ ಮಹಾರಾಜ್ 2*, ಆಂಡರ್​ಸನ್ 18ಕ್ಕೆ 1, ಡೆನ್ಲಿ 26ಕ್ಕೆ 1), ಇಂಗ್ಲೆಂಡ್: 269 ಮತ್ತು 111 ಓವರ್​ಗಳಲ್ಲಿ 8 ವಿಕೆಟ್​ಗೆ 391 ಡಿಕ್ಲೇರ್ (ಸಿಬ್ಲಿ 133*, ಬೆನ್ ಸ್ಟೋಕ್ಸ್ 72*, ಬಟ್ಲರ್, 23, ಕರ›ನ್ 13, ರಬಾಡ 69ಕ್ಕೆ 2, ನೋರ್ಜೆ 61ಕ್ಕೆ 3, ಕೇಶವ್ ಮಹಾರಾಜ್ 160ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts