More

    ಶೈಕ್ಷಣಿಕ ಅಭ್ಯುದಯಕ್ಕೆ ತಂತ್ರಜ್ಞಾನ ಬಳಕೆ ಅಗತ್ಯ

    ಲಿಂಗಸುಗೂರು:ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸ್ಮಾಟ್‌ಕ್ಲಾಸ್ ಬೋಧನೆ ಅವಶ್ಯವಾಗಿದ್ದು, ಬೌದ್ದಿಕ ಬೆಳವಣಿಗಗೆ ಸಹಕಾರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಪೂರು ಹೇಳಿದರು.

    ಪಟ್ಟಣದ ಸರ್ಕಾರಿ ಆಂಗ್ಲ ಮಾಧ್ಯಮ ಆದರ್ಶ ಪ್ರೌಢಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸ್ ಬೋಧನೆಗೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಶೈಕ್ಷಣಿಕ ಅಭ್ಯುದಯಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಮಾಹಿತಿ ಅವಶ್ಯ ಎಂಬ ಕಾರಣಕ್ಕೆ ಲಿಂಗಸುಗೂರು ಕ್ಷೇತ್ರದ 29 ಹಾಗೂ ಕುಷ್ಟಗಿ ಕ್ಷೇತ್ರದ 11 ಸರ್ಕಾರಿ ಶಾಲೆೆಗಳಿಗೆ ಸ್ಮಾರ್ಟ್‌ಕ್ಲಾಸ್ ಸೌಲಭ್ಯ ಕಲ್ಪಿಸಲು ಅನುದಾನ ಒದಗಿಸಲಾಗಿದೆ. ಮುಂಬರುವ 5 ವರ್ಷದಲ್ಲಿ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ಎಲ್ಲ ಶಾಲೆಗಳಿಗೆ ಎಂಎಲ್ಸಿ ಅನುದಾನದಲ್ಲಿ ಸ್ಮಾರ್ಟ್‌ಕ್ಲಾಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

    ಎಸ್‌ಡಿಎಂಸಿ ಅಧ್ಯಕ್ಷ ಪಾಮಯ್ಯ ಮುರಾರಿ ಮಾತನಾಡಿ, ಸರ್ಕಾರಿ ಶಾಲೆಗಳ ಕುರಿತ ಕಾಳಜಿಯಿಂದಾಗಿ ಶರಣಗೌಡ ಬಯ್ಯಪೂರು ಅನುದಾನ ನೀಡಿ ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದಾರೆ ಎಂದರು. ಸಮ್ ಕಾಲೇಜು ಆಡಳಿತಾಧಿಕಾರಿ ವಿನಯಕುಮಾರ ಗಣಾಚಾರಿ, ಕಿಯೋನಿಕ್ಸ್ ಆಡಳಿತಾಧಿಕಾರಿ ಬಸವರಾಜ ಹಿರೇಮಠ, ಎಸ್‌ಡಿಎಂಸಿ ಸದಸ್ಯರಾದ ಚಂದ್ರಕಾಂತ, ತಾಜುದ್ದೀನ್, ಚನ್ನಾರೆಡ್ಡಿ ಬಿರಾದಾರ, ಮಹೇಶ ಬೆಂಗಳೂರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts