More

    ಜಿಲ್ಲೆಯಲ್ಲಿ 3310 ಜನರಿಂದ ಮನೆಯಿಂದ ಮತದಾನ: 85 ಮೇಲ್ಪಟ್ಟವರಿಂದ ಶೇ.94.90, ಅಂಗವಿಕಲರಿಂದ ಶೇ.98.42 ವೋಟಿಂಗ್

    ಮಂಡ್ಯ: ಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣಾ ಅಂಗವಾಗಿ 85 ವರ್ಷ ಮೇಲ್ಪಟ್ಟ ಮತ್ತು ಅಂಗವಿಕಲರಿಗೆ ನಡೆದ ಮನೆಯಿಂದ ಮತದಾನ ಪ್ರಕ್ರಿಯೆಯಲ್ಲಿ 3,310 ಜನರು ಪಾಲ್ಗೊಂಡಿದ್ದಾರೆ.
    ಏ.16ರಿಂದ 18ರವರೆಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಅದರಂತೆ 12 ಡಿ ಮುಖಾಂತರ 85 ವರ್ಷ ಮೇಲ್ಪಟ್ಟ 2,570 ಹಾಗೂ ಅಂಗವಿಕಲ 885 ಮತದಾರರು ಮನೆಯಿಂದ ಮತದಾನ ಮಾಡಲು ಒಪ್ಪಿಗೆ ಪಡೆದುಕೊಂಡಿದ್ದರು. ಈ ಪೈಕಿ 85 ವರ್ಷ ಮೇಲ್ಪಟ್ಟ 2,439 ಅಂದರೆ ಶೇ.94.90 ಮತದಾರರು ಮತ ಚಲಾಯಿಸಿದ್ದಾರೆ. ಅಂತೆಯೇ 871 ಅಂಗವಿಕಲರು ಮತ ಚಲಾಯಿಸಿದ್ದು, ಶೇ.98.42 ಮತದಾನವಾಗಿರುತ್ತದೆ.
    85 ವರ್ಷ ಮೇಲ್ಪಟ್ಟ ಮತದಾರರ ತಾಲೂಕುವಾರು ಗಮನಿಸಿದರೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ-305, ಮದ್ದೂರಿನಲ್ಲಿ 286, ಮಳವಳ್ಳಿಯಲ್ಲಿ 548, ಮಂಡ್ಯದಲ್ಲಿ 220, ಮೇಲುಕೋಟೆಯಲ್ಲಿ 334, ನಾಗಮಂಗಲದಲ್ಲಿ 295, ಶ್ರೀರಂಗಪಟ್ಟಣದಲ್ಲಿ 185, ಕೃಷ್ಣರಾಜನಗರದಲ್ಲಿ 266 ಮತದಾರರು ಮತ ಚಲಾಯಿಸಿದ್ದಾರೆ. ಅಂತೆಯೇ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 66, ಮದ್ದೂರಿನಲ್ಲಿ 106, ಮಳವಳ್ಳಿಯಲ್ಲಿ 238, ಮಂಡ್ಯದಲ್ಲಿ 101, ಮೇಲುಕೋಟೆಯಲ್ಲಿ 95, ನಾಗಮಂಗಲದಲ್ಲಿ 69, ಶ್ರೀರಂಗಪಟ್ಟಣದಲ್ಲಿ 112 ಹಾಗೂ ಕೃಷ್ಣರಾಜನಗರ 84 ಜನ ಅಂಗವಿಕಲರು ಮತದಾನ ಮಾಡಿದ್ದಾರೆ.
    ಇನ್ನು ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಅಗತ್ಯ ಸೇವಾ ವಲಯದಡಿ ಕಾರ್ಯನಿರ್ವಹಿಸುತ್ತಿರುವ 1,022 ಸಿಬ್ಬಂದಿಗೆ ಅಂಚೆ ಮತದಾನದ ವ್ಯವಸ್ಥೆಯನ್ನು ನಗರದ ಮಂಡ್ಯ ವಿಶ್ವವಿದ್ಯಾಲಯದ ಕಲಾ ವಿಭಾಗದಲ್ಲಿ ಮಾಡಲಾಗಿದೆ. ಏ.19ರಿಂದ 21ರವರೆಗೆ ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಮಂಡ್ಯ ಉಪವಿಭಾಗಾಧಿಕಾರಿ ಮಹೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts