More

    ಮೀನುಗಾರಿಕಾ ಚಟುವಟಿಕೆಗೆ ಉತ್ತೇಜನ, ಮಂಗಳೂರಿನಲ್ಲಿ ಕೇಂದ್ರ ಸಚಿವ ಡಾ.ಮುರುಗನ್ ಹೇಳಿಕೆ

    ಮಂಗಳೂರು: ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ, ವಾರ್ತಾ ಮತ್ತು ಪ್ರಸಾರ ಇಲಾಖೆ ರಾಜ್ಯ ಸಚಿವ ಡಾ.ಎಲ್.ಮುರುಗನ್ ಭಾನುವಾರ ಮಂಗಳೂರಿನ ವಿವಿಧ ಐಸ್ ಪ್ಲಾೃಂಟ್, ಮಾಸ್ಟರ್ ಸ್ಟೋರೇಜ್, ಪಂಜರ ಕೃಷಿ ಘಟಕಗಳಿಗೆ ಭೇಟಿದರು.

    ಬೈಕಂಪಾಡಿಯ ಐಸ್ ಪ್ಲಾೃಂಟ್ ಕಾರ್ಯಚಟುವಟಿಕೆ ವೀಕ್ಷಿಸಿದರು. ಬಳಿಕ ಕುಳಾಯಿ ಮಾಸ್ಟರ್ ಸ್ಟೋರೇಜ್ ಘಟಕದಲ್ಲಿ, ಪ್ರಧಾನ ಮಂತ್ರಿ ಮತ್ಸೃ ಸಂಪದ ಯೋಜನೆಯಡಿ ಫಲಾನುಭವಿಗಳಿಗೆ ಶೀತಲೀಕರಣ ವಾಹನ ವಿತರಿಸಿದರು. ಬಂಗ್ರಕೂಳೂರಿನ ಫಲ್ಗುಣಿ ನದಿ ತೀರದಲ್ಲಿ ಪಂಜರ ಕೃಷಿ ಘಟಕ ಪರಿಶೀಲಿಸಿ ಮೀನು ಕೃಷಿಕರ ಅಭಿಪ್ರಾಯ ಪಡೆದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಆರಂಭಿಸಿದ ಬಳಿಕ, ಪ್ರಧಾನಿ ಮೋದಿಯವರು ನೀಲಿಕ್ರಾಂತಿ ಯೋಜನೆಗೆ ಚಾಲನೆ ನೀಡಿದರು. ಆತ್ಮನಿರ್ಭರ ಪ್ಯಾಕೇಜ್ ಮೂಲಕ, ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ 20 ಸಾವಿರ ಕೋಟಿ ರೂ.ಹಂಚಿಕೆ ಮಾಡಲಾಗಿದೆ. ದೇಶದ 5 ಕಡೆಗಳಲ್ಲಿ ಆಧುನಿಕ ಮೀನುಗಾರಿಕಾ ಬಂದರು ನಿರ್ಮಾಣ ಸೇರಿದಂತೆ ವಿವಿಧೆಡೆ ಸಂಸ್ಕರಣಾ ಘಟಕ, ಐಸ್ ಪ್ಲಾೃಂಟ್, ಕೋಲ್ಡ್ ಸ್ಟೋರೇಜ್ ನಿರ್ಮಾಣ ಕೈಗೊಳ್ಳಲಾಗುತ್ತಿದೆ. ಪ್ರಧಾನ ಮಂತ್ರಿ ಮತ್ಸೃಸಂಪದ ಯೋಜನೆ ಮೂಲಕ ಮೀನು ಮತ್ತು ಮೀನು ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಲು ಆದ್ಯತೆ ನೀಡಲಾಗುತ್ತಿದೆ. ಕರೊನಾ ಭೀತಿ ನಡುವೆಯೂ ಮೀನುಗಾರಿಕಾ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.

    ಮೀನುಗಾರಿಕಾ ಚಟುವಟಿಕೆಗೆ ಉತ್ತೇಜನ, ಮಂಗಳೂರಿನಲ್ಲಿ ಕೇಂದ್ರ ಸಚಿವ ಡಾ.ಮುರುಗನ್ ಹೇಳಿಕೆ

    ರಾಜ್ಯ ಮೀನುಗಾರಿಕಾ ಸಚಿವ ಎಸ್.ಅಂಗಾರ, ರಾಜ್ಯದಲ್ಲಿ ಸೀವಿಡ್ ಕೃಷಿಗೆ ಸಂಬಂಧಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ 8 ಸ್ಥಳಗಳನ್ನು ಗುರುತಿಸಲಾಗಿದೆ. ರಾಜ್ಯದಲ್ಲೇ ಮೀನು ಮರಿಗಳನ್ನು ಉತ್ಪಾದಿಸಲು ಕ್ರಮ ಕೈಗೊಳ್ಳಲಾಗುವುದು. ಕರಾವಳಿಯ ಮಡೆಂಜಿ, ಮುಗುಡು ಮೀನುಗಳ ರಫ್ತು ಬಗ್ಗೆ ಚಿಂತನೆಯಿದೆ. ಇದರಿಂದ ಬೇಡಿಕೆ ಜತೆಗೆ ಬೆಲೆಯೂ ಹೆಚ್ಚಾಗುವ ಸಾಧ್ಯತೆಯಿದೆ ಎಂದರು. ನಿಡ್ಡೋಡಿಯಲ್ಲಿ ಸೀ ಫುಡ್ ಪಾರ್ಕ್ ಕುರಿತಂತೆ ಸಾರ್ವಜನಿಕರಲ್ಲಿರುವ ಗೊಂದಲ ಬಗೆಹರಿಸದಿ ಯೋಜನೆ ಮುಂದುವರಿಸಲು ಉದ್ದೇಶಿಸಲಾಗಿದೆ ಎಂದರು.

    ಶಾಸಕ ವೈ.ಭರತ್ ಶೆಟ್ಟಿ, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ದ.ಕ-ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮೀನುಗಾರಿಕಾ ಇಲಾಖೆ ನಿರ್ದೇಶಕ ರಾಮಾಚಾರ್ಯ, ಜಿಲ್ಲಾ ಉಪನಿರ್ದೇಶಕ (ಪ್ರಭಾರ) ಹರೀಶ್ ಕುಮಾರ್, ಕಾರ್ಪೋರೇಟರ್ ಕಿರಣ್, ಸುಮಿತ್ರಾ ಮೊದಲಾದವರಿದ್ದರು.

    ದೇಶದಲ್ಲೇ ಮೊದಲೇ ಬಾರಿಗೆ ಸಮುದ್ರ ಕಳೆ ಕೃಷಿ ಯೋಜನೆ ಜಾರಿಗೆ ತರಲಾಗಿದೆ. ದೇಶದ ವಿವಿಧೆಡೆ ಸೀವಿಡ್ ಕೃಷಿಗೆ ಉತ್ತೇ ಜನ ನೀಡಲಾಗುತ್ತಿದೆ. ಸೀವಿಡ್ ಬೆಳೆಯುವ ಮೂಲಕ ಮಹಿಳೆಯರು ಆರ್ಥಿವಾಗಿ ಸಬಲರಾಗಬಹುದು. ರಾಜ್ಯದಲ್ಲಿಯೂ ಸೀವಿಡ್ ಕೃಷಿ ಆರಂಭಿಸಲು ಸ್ಥಳ ಪರಿಶೀಲನೆ ನಡೆಯುತ್ತಿದೆ. ಒಳನಾಡು ಮೀನುಗಾರಿಕೆಗೂ ಆದ್ಯತೆ ನೀಡಲಾಗಿದೆ.

    ಡಾ.ಎಲ್.ಮುರುಗನ್
    ಕೇಂದ್ರ ಮೀನುಗಾರಿಕಾ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts