More

    ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲಿ

    ಮುಂಡರಗಿ: ಮಕ್ಕಳು ಉತ್ತಮ ಫಲಿತಾಂಶ ಪಡೆಯಲು ಶಿಕ್ಷಕರ ಜತೆಗೆ ಪಾಲಕರ ಪಾತ್ರ ಮುಖ್ಯವಾಗುತ್ತದೆ. ಆದ್ದರಿಂದ ಪಾಲಕರು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಮೂಲಕ ಉತ್ತಮ ಫಲಿತಾಂಶ ಹೊಂದುವುದಕ್ಕೆ ಸಹಕಾರಿಯಾಗಬೇಕು ಎಂದು ಶಾಲಾ ಮೇಲ್ವಿಚಾರಣಾ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಹೇಳಿದರು.

    ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಇತ್ತೀಚೆಗೆ ಆಯೋಜಿಸಿದ್ದ ಪಾಲಕರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

    ಕ್ಷೇತ್ರ ಸಮನ್ವಯಾಧಿಕಾರಿ ಜಿ.ಎಸ್.ಅಣ್ಣಗೇರಿ ಮಾತನಾಡಿ, ಗುಣಾತ್ಮಕ ಫಲಿತಾಂಶ ಬರಲು ಪಾಲಕರೂ ಶ್ರಮಿಸಬೇಕು ಎಂದರು.
    ಅಧ್ಯಕ್ಷತೆ ವಹಿಸಿದ್ದ ಶಾಲಾ ಮೇಲ್ವಿಚಾರಣಾ ಕಮಿಟಿ ಉಪಾಧ್ಯಕ್ಷ ಎಸ್.ಬಿ. ಹಿರೇಮಠ, ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ, ರಾಯಚೂರಿನ ಶ್ರಮಜೀವಿ ಸಂಘದ ಅಧ್ಯಕ್ಷ ಮಲ್ಲಯ್ಯ ಗೊರಕಲ್ ಮಾತನಾಡಿದರು.

    ವಸತಿ ನಿಲಯ ಮೇಲ್ವಿಚಾರಕ ಶ್ರೀಕಾಂತ ಅರಹುಣಸಿ, ನಿವೃತ್ತ ಪ್ರಾಚಾರ್ಯ ವಿ.ಎಂ. ತಿಮ್ಮಾಪೂರ, ಹನುಮರಡ್ಡಿ ಇಟಗಿ, ಎಂ.ಎಸ್. ಶಿವಶೆಟ್ಟರ, ಪಾಲಕರ ಪ್ರತಿನಿಧಿಯಾದ ರಾಮಚಂದ್ರ ಕಲಾಲ, ಶಾಲಾ ಮುಖ್ಯಶಿಕ್ಷಕ ಎಸ್.ಸಿ. ಚಕ್ಕಡಿಮಠ, ರಾಜಾಭಕ್ಷಿ ಬೆಟಗೇರಿ, ಯಲ್ಲಪ್ಪ ಕುಕನೂರ, ನಿತೀಶ ರಾಠೋಡ, ರಘುನಾಥ ಲಮಾಣಿ ಉಪಸ್ಥಿತರರು ಇದ್ದರು.

    ಶಿಕ್ಷಕ ಪಿ.ಟಿ.ಉಳ್ಳಾಗಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ದೀಪುಶ್ರೀ ಎಸ್.ಆರ್. ಸ್ವಾಗತಿಸಿದರು. ಶಿಕ್ಷಕರಾದ ಎಸ್.ಆರ್.ರಿತ್ತಿ, ಎಂ.ಎಸ್. ನರೇಗಲ್ಲ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts