More

    ಮೊಬೈಲ್ ಬಳಕೆಯಿಂದ ಏಕಾಗ್ರತೆ ಕುಸಿತ

    ಕೊಟ್ಟೂರು: ಪಾಲಕರು ಮಕ್ಕಳಿಗೆ ಮೊಬೈಲ್ ಕೊಡಿಸದೆ, ಅವರ ಶೈಕ್ಷಣಿಕ ಪ್ರಗತಿಗೆ ಬೇಕಾದ ಸಾಮಗ್ರಿಗಳನ್ನು ಪೂರೈಸಬೇಕು ಎಂದು ಗೊರ್ಲಿ ಶರಣಪ್ಪ ಸರ್ಕಾರಿ ಪಪೂ ಕಾಲೇಜ್ ಪ್ರಾಚಾರ್ಯ ಡಾ.ಜಿ. ಸೋಮಶೇಖರ್ ಹೇಳಿದರು. ಕಾಲೇಜ್‌ನಲ್ಲಿ ಗುರುವಾರ ಪಾಲಕರ ಸಭೆಯಲ್ಲಿ ಮಾತನಾಡಿ, ಮೊಬೈಲ್ ಬಳಸುವುದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಕಡಿಮೆಯಾಗುತ್ತದೆ. ನೆನಪಿನ ಶಕ್ತಿಯೂ ಕುಂದುತ್ತದೆ ಎಂದು ಎಚ್ಚರಿಸಿದರು. ಉಪನ್ಯಾಸಕ ಜಗದೀಶ ಚಂದ್ರಬೋಷ ಮಾತನಾಡಿ, ಪಾಲಕರು ನಿರಂತರ ಕಾಲೇಜ್ ಸಂಪರ್ಕವಿದ್ದು, ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸುತ್ತಿರಬೇಕು ಎಂದರು. ಉಪನ್ಯಾಸಕರಾದ ಮುದೇಗೌಡ್ರು ಮತ್ತು ಶರಬಯ್ಯ ಮಾತನಾಡಿದರು. ಉಪನ್ಯಾಸಕ ಕೆ.ಎಂ. ರೇಣುಕಸ್ವಾಮಿ, ಸಿದ್ದಲಿಂಗನಗೌಡ, ಶೋಭಾ, ಜಯಣ್ಣ, ಉಪನ್ಯಾಸಕ ಅಂಜಿನಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts