More

    ಸಶಕ್ತ ಭಾರತಕ್ಕೆ ಯುವಜನರ ಸಹಭಾಗಿತ್ವ ಅಗತ್ಯ: ವಿಎಸ್‌ಕೆ ವಿವಿ ಕುಲಪತಿ ಸಿದ್ದು ಪಿ.ಅಲಗೂರು ಹೇಳಿಕೆ

    ಬಳ್ಳಾರಿ: ಜ್ಞಾನಾರ್ಜನೆಯ ಸಾಧನೆಗೆ ನಮಗೆ ನಾವೇ ಗುರುವಾಗಬೇಕು ಎಂದು ವಿಎಸ್‌ಕೆ ವಿವಿಯ ಕುಲಪತಿ ಸಿದ್ದು ಪಿ.ಅಲಗೂರು ಹೇಳಿದರು.

    ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 158ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೀವನದಲ್ಲಿ ಹೊಸ ಸಾಹಸಕ್ಕೆ ಕೈ ಹಾಕಬೇಕು. ನಮ್ಮ ಸಾಹಸ ಯಶಸ್ವಿಯಾದರೆ ನಾವು ನಾಯಕರಾಗಬಹುದು. ಇಲ್ಲದಿದ್ದರೆ ಇತರರಿಗೆ ವಾರ್ಗದರ್ಶಕರಾಗಬಹುದು ಎಂಬ ಸ್ವಾಮಿ ವಿವೇಕಾನಂದ ಅವರ ನುಡಿ ಪ್ರಸ್ತುತ ಸ್ಥಿತಿಗತಿಗೆ ಸಮಂಜಸವಾಗಿದೆ ಎಂದರು.

    ಸಕಾರಾತ್ಮಕ ಯೋಚನೆಗಳ ಮೂಲಕ ಯುವ ಸಮೂಹ ನವಭಾರತ ನಿರ್ವಾಣಕ್ಕೆ ಶ್ರಮಿಸಬೇಕು. ಆತ್ಮನಿರ್ಭರ ಭಾರತದ ಪರಿಕಲ್ಪನೆಯಲ್ಲಿ ಯುವಶಕ್ತಿಯ ಪಾತ್ರ ದೊಡ್ಡದಾಗಿದೆ. ಯುವ ಸಮೂಹದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅಚಲ ವಿಶ್ವಾಸವಿಟ್ಟಿದ್ದಾರೆ. ವಿವೇಕಾನಂದರ ಕನಸಾದ ಸಶಕ್ತ ಭಾರತ ಕಟ್ಟಲು ಯುವ ಸಮೂಹದ ಸಹಭಾಗಿತ್ವ ಅಗತ್ಯ ಎಂದು ಕುಲಪತಿ ಸಿದ್ದು ಅಲಗೂರು ತಿಳಿಸಿದರು.

    ಕುಲಸಚಿವರಾದ ಬಿ.ಕೆ.ತುಳಸಿವಾಲಾ, ಶಶಿಕಾಂತ ಉಡಿಕೇರಿ, ಸಿಂಡಿಕೇಟ್ ಸದಸ್ಯರಾದ ನರಸಿಂಹ ರಾಯಚೂರು, ಮಲ್ಲಿಕಾರ್ಜುನ ಮರ್ಚೇಡ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts