More

    ಕಾಲಿಲ್ಲದ ಶರಣೇಗೌಡ ಪೊಲೀಸ್ ಪಾಟೀಲಗೆ ಕೈ ಹಿಡಿದ ನರೇಗಾ

    ಕುಷ್ಟಗಿ: ಕಾಲಿಲ್ಲದ ಅಂಗವಿಕಲನಿಗೆ ಜೀವನ ನಿರ್ವಹಣೆಗೆ ನರೇಗಾ ಯೋಜನೆ ಕೈ ಹಿಡಿದಿದೆ. ತಾಲೂಕಿನ ಬಚನಾಳ ಗ್ರಾಮದ ಅಂಗವಿಕಲ ಶರಣೇಗೌಡ ಪೊಲೀಸ್ ಪಾಟೀಲ್ ಉದ್ಯೋಗ ಖಾತ್ರಿ ಕೂಲಿಯಿಂದ ಸ್ವಾವಲಂಬಿ ಜೀವನ ಕಟ್ಟಿಕೊಂಡಿದ್ದಾರೆ.

    ಹುಟ್ಟಿನಿಂದಲೇ ಎರಡೂ ಕಾಲುಗಳನ್ನು ಶರಣೇಗೌಡ ಕಳೆದುಕೊಂಡಿದ್ದರು. ಜೀವನಕ್ಕಾಗಿ ಹಿಟ್ಟಿನ ಗಿರಣಿ ಉದ್ಯಮವನ್ನು ಮಾಡಿಕೊಂಡಿದ್ದರು. ಅದರಿಂದ ಬಂದ ಆದಾಯದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಮನೆಗೆ ಹಿರಿಮಗನಾಗಿ ತಾಯಿ ಹಾಗೂ ಸಹೋದರಿಯರ ಜವಾಬ್ದಾರಿ ಹೊತ್ತಿರುವ ಇವರು ಹಿಟ್ಟಿನ ಗಿರಣಿ ಒಂದರಿಂದಲೇ ಖರ್ಚು ನಿಭಾಯಿಸುವುದು ಕಷ್ಟವಾಗಿದೆ. ಹಾಗಾಗಿ ನರೇಗಾ ಯೋಜನೆಯ ಮೊರೆ ಹೋಗಿದ್ದು, ಜಾಬ್ ಕಾರ್ಡ್ ಪಡೆದು ನಿತ್ಯ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

    ಅಂಗವಿಕಲರಿಗೆ ನರೇಗಾ ಯೋಜನೆಯ ಕೆಲಸದಲ್ಲಿ ಶೇ.50 ವಿನಾಯತಿ ನೀಡಲಾಗಿದೆ. ಜತೆಗೆ ಕೂಲಿಕಾರರಿಗೆ ಕುಡಿಯಲು ನೀರು ತಂದುಕೊಡುವುದು, ಕೂಲಿಕಾರರ ಮಕ್ಕಳನ್ನು ನೋಡಿಕೊಳ್ಳುವುದು, ಕೂಲಿಕಾರರ ಅಂಕಿ ಸಂಖ್ಯೆ ಪರಿಶೀಲಿಸುವುದು ಇತ್ಯಾದಿ ಕೆಲಸಗಳಿಗೆ ಕೂಲಿ ನೀಡಬೇಕೆಂಬ ನಿಯಮವಿದೆ. ಅದರಂತೆ ಶರಣೇಗೌಡ ಕೆಲಸ ಮಾಡಿ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ.

    ಹಿಟ್ಟಿನ ಗಿರಣಿಯಿಂದ ಜೀವನ ನಡೆಸುವುದು ಕಷ್ಟವಾಗಿದೆ. ಗ್ರಾಪಂ ಅಧಿಕಾರಿಗಳನ್ನು ಸಂಪರ್ಕಿಸಿ ಕೆಲಸ ನೀಡುವಂತೆ ಮನವಿ ಮಾಡಿದಾಗ ಪ್ರತ್ಯೇಕ ಜಾಬ್ ಕಾರ್ಡ್ ನೀಡಿ ಕೆಲಸ ನೀಡಿದರು. ಕುಟುಂಬ ಸದಸ್ಯರಿಗೆ ನೂರು ದಿನ ಹಾಗೂ ನನಗೆ ನೂರು ದಿನಗಳ ಕೆಲಸ ಕುಟುಂಬ ನಿರ್ವಹಣೆಗೆ ಆಸರೆಯಾಗಿದೆ.
    ಶರಣೇಗೌಡ ಪೊಲೀಸ್‌ಪಾಟೀಲ್
    ಅಂಗವಿಕಲ, ಬಚನಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts