More

    ಗ್ರಾಪಂ ನೌಕರರಿಂದ ಧರಣಿ ಸತ್ಯಾಗ್ರಹ

    ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರು ಸೋಮವಾರ ಜಿಪಂ ಕಾರ್ಯಾಲಯ ಮುಂದೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿ, ಸಿಇಒ ಕಾರ್ಯಾಲಯದ ಸುಪರ್‌ಇನ್‌ಟೆಂಡೆಂಟ್ ಸೋಮಲು ನಾಯಕ ಅವರಿಗೆ ಮನವಿ ಸಲ್ಲಿಸಿದರು.
    ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ರಾಜ್ಯದ 6025 ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 65 ಸಾವಿರ ಸಿಬ್ಬಂದಿಗೆ ಕಳೆದ 2 ವರ್ಷಗಳಿಂದ ವೇತನ ಬಾಕಿ ಉಳಿದಿದೆ. ಮೂರು ತಿಂಗಳಿಗೊಮ್ಮೆ ಬಿಡುಗಡೆಯಾದ ಕಂತಿನ ಹಣದಲ್ಲಿ 2 ತಿಂಗಳು ವೇತನಕ್ಕಾಗಿ ಮಾತ್ರ ಹಣ ಸಾಕಾಗುತ್ತದೆ. ಸಮಯಕ್ಕೆ ಸರಿಯಾಗಿ ವೇತನ ಸಿಗದೆ ಬಾದಾಮಿ ತಾಲೂಕಿನಲ್ಲಿ ಇಬ್ಬರು, ಚಿಂತಾಮಣಿ ತಾಲೂಕಿನಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ವೇತನ ನೀಡಬೇಕೆಂದು ಆಗ್ರಹಿಸಿದರು.
    ಅಣ್ಣಾರಾಯ ಈಳಗೇರ ಮಾತನಾಡಿ, ಎಲ್ಲ ಸಿಬ್ಬಂದಿ ವೇತನಕ್ಕಾಗಿ ಅವಶ್ಯಕತೆ ಇರುವ 382 ಕೋಟಿ ರೂ. 2020-2021ನೇ ಬಜೆಟ್‌ನಲ್ಲಿ ಹಣ ಮಂಜೂರು ಮಾಡಿಸಬೇಕು. ಕಂಪ್ಯೂಟರ್ ಆಪರೇಟರ್‌ಗಳಿಗೆ ಬಡ್ತಿ ನೀಡಲು ವೃಂದ ಮತ್ತು ನೇಮಕಾತಿಗಳಿಗೆ ತಿದ್ದುಪಡಿ ಮಾಡಬೇಕು. ಕರ ವಸೂಲಿಗಾರ ಹುದ್ದೆಗೆ ಶೇ.70 ರಿಂದ ಶೇ.ನೂರರಷ್ಟು ಕೋಟಾ ಹೆಚ್ಚಿಸಬೇಕು. ಲೆಕ್ಕ ಸಹಾಯಕ ಹುದ್ದೆಗಳ ಕೋಟಾವನ್ನು ಶೇ.50ಕ್ಕೆ ಹೆಚ್ಚಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗಳಿಗೆ ಒತ್ತಾಯಿಸಿದರು.
    ವಿಠಲ ಹೊನಮೊರೆ, ಕುಮಾರ ರಾಠೋಡ, ಎಂ.ಕೆ. ಚಳಗಿ, ರಾಜು ಬನ್ನಟ್ಟಿ, ಎಂ.ಎಸ್. ಶೇಕರಣಿ, ಶೇಖು ಲಮಾಣಿ, ರಾಜು ಜಾಧವ, ಮುರುಗೇಂದ್ರ ಹುಣಚಾಳ, ಸುರೇಖಾ ರಜಪೂತ, ನೀಲವ್ವ ಮಾದರ, ಭೀಮಾಬಾಯಿ ಬಾನಿ, ಸುನೀಲ ಚಲವಾದಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts