More

    7 ತಿಂಗಳಿಂದ ಸಂಬಳ ನೀಡದ ಕಂಪನಿ ವಿರುದ್ಧ ಪ್ರತಿಭಟಿಸಲು ಟವರ್​ ಏರಿದ ನೌಕರ!

    ಧಾರವಾಡ: ಇತ್ತೀಚೆಗೆ ಜಾವಿದ್​​ ಎನ್ನುವ ಕಳ್ಳನೋರ್ವ ಟವರ್ ಏರಿ ಹೈಡ್ರಾಮಾ ಮಾಡಿದ್ದ. ಈಗ ಅದೇ ಟಾವರ್ ಏರಿರುವ ಪ್ರತಿಭಟನಕಾರ ಕೈಯಲ್ಲಿ ಬೇಡಿಕೆ ಫಲಕ ಹಿಡಿಯುವ ಮೂಲಕ ತಮ್ಮ ಬೇಡಿಕೆಗಳನ್ನು ಮುಂದಿರಿಸಿದ್ದಾರೆ.

    ಅಷ್ಟಕ್ಕೂ ಈ ಹೈಡ್ರಾಮಾಗೆ ಕಾರಣವಾಗಿದ್ದು ಒಂದು ಗಂಭೀರ ಸಮಸ್ಯೆ. ನೀರು ಸರಬರಾಜು ನೌಕರರಿಗೆ ಕಳೆದ ಏಳು ತಿಂಗಳಿಂದ ಸಂಬಳವನ್ನು ಪಾವತಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಬಾಕಿ ಸಂಬಳವನ್ನು ಕೂಡಲೇ ನೀಡುವಂತೆ ಆಗ್ರಹಿಸಿದ್ದ ನೌಕರರು ಎಲ್ ಆ್ಯಂಡ್ ಟೀ ಕಂಪನಿ ವಿರುದ್ಧ ಮುಷ್ಕರ ನಡೆಸಿದ್ದರು.

    ನೀರು ಸರಬರಾಜು ನೌಕರರ ಮುಷ್ಕರ ತೀವ್ರ ಸ್ವರೂಪಕ್ಕೆ ತಿರುಗಿದ್ದು ಹೋರಾಟ 13ನೇ ದಿನಕ್ಕೆ ಕಾಲಿಟ್ಟಿದೆ. ಪಾಲಿಕೆ ಕಚೇರಿ ಮುಂದೆ ನೌಕರರು ಪ್ರತಿಭಟಿಸುತ್ತಿದ್ದಾರೆ. ಬಹುಷಃ ಈ ಯಾವುದೇ ವಿಧಾನಗಳಿಂದ ಫಲ ಸಿಗುವುದಿಲ್ಲ ಎಂದುಕೊಂಡ ನೌಕರನೋರ್ವ ಬೇಡಿಕೆ‌ ಈಡೇರಿಕೆಗೆ ಆಗ್ರಹಿಸಿ ಮೊಬೈಲ್ ಟವರ್ ಏರಿದ್ದಾರೆ.

    ನಗರದ ಆಲೂರು ವೆಂಕಟರಾವ್ ವೃತ್ತದ ಬಳಿ ಈ ಘಟನೆ ನಡೆದಿದೆ. ವೃತ್ತದ ಬಳಿ ನೌಕರರು ಪ್ರತಿಭಟನೆಗೆ ಮುಂದಾದಾಗ ಓರ್ವ ನೌಕರ ಟವರ್ ಏರಿದ್ದಾರೆ. ಟವರ್​ ಏರಿರುವವರನ್ನು ಮಲ್ಲಿಕಾರ್ಜುನ ಗುಮ್ಮಗೋಳ ಎಂದು ಗುರುತಿಸಲಾಗಿದೆ. ಸದ್ಯ ಪ್ರತಿಭಟನೆ ಹಾಗೂ ನೌಕರನೋರ್ವ ಫಲಕ ಹಿಡಿದು ಟವರ್​ ಏರಿರುವ ಕಾರಣ ಸ್ಥಳದ ಬಳಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts