ದುಬೈ: ಭಾರತದಲ್ಲಿ ಕರೊನಾವೈರಸ್ನ ಎರಡನೇ ಅಲೆ ವ್ಯಾಪಕವಾಗಿರುವುದರಿಂದ ಎಮಿರೇಟ್ಸ್ ಏರ್ಲೈನ್ಸ್ ಸಂಸ್ಥೆ ಭಾರತಕ್ಕೆ ತನ್ನ ಎಲ್ಲ ವಿಮಾನಸೇವೆಯನ್ನು ಸ್ಥಗೀತಗೊಳಿಸಿದೆ. ಭಾನುವಾರದಿಂದಲೇ ಈ ನಿರ್ಧಾರ ಜಾರಿಗೆ ಬರಲಿದೆ. ದುಬೈ ಮತ್ತು ಭಾತರದ ನಡುವೆ ವಿಮಾನ ಹಾರಾಟ ಮೇ 4 ವರೆಗೆ ಸ್ಥಗೀತಗೊಳ್ಳಲಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ತಿಳಿಸಿದೆ.
ಬ್ರಿಟನ್ ನಂತರ ಭಾರತಕ್ಕೆ ಅಂತಾರಾಷ್ಟ್ರೀಯ ವಿಮಾನಸೇವೆಯನ್ನು ರದ್ದು ಮಾಡಿದ ಎರಡನೇ ದೇಶ ಯಎಇ ಆಗಿದೆ. ಯುಎಇ ದೇಶದ ಅತಿದೊಡ್ಡ ಏರ್ಲೈನ್ಸ್ ಸಂಸ್ಥೆ ಅರಬ್ ಎಮಿರೇಟ್ಸ್ ಆಗಿದೆ.
ಯುಎಇ ದೇಶದಲ್ಲಿ ಈಗಾಗಲೇ 45 ವರ್ಷ ಮೇಲ್ಪಟ್ಟ ಸುಮಾರು 10 ಲಕ್ಷ ಜನರಿಗೆ ಕರೊನಾ ಲಸಿಕೆಯನ್ನು ವಿತರಿಸಲಾಗಿದೆ. ಯಾರು ಲಸಿಕೆ ಪಡೆದಿಲ್ಲವೋ ಅಂತವರ ಓಡಾಟದ ಮೇಲೆ ಕಠಿಣ ನಿರ್ಬಂಧ ಹೇರಲಾಗಿದೆ.
ಯುಎಇ ದೇಶದಲ್ಲಿ ಕೂಡ ಕರೊನಾವೈರಸ್ ಹರಡುತಿದ್ದು ಇಲ್ಲಿಯವರೆಗೆ ಸುಮಾರು 5.5 ಲಕ್ಷ ಜನರಲ್ಲಿ ಮಾರಕ ಸೋಂಕು ಕಾಣಿಸಿಕೊಂಡಿದೆ. ಭಾರತದಲ್ಲಿ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ದಿನವೊಂದಕ್ಕೆ ಸುಮಾರು 3.5 ಲಕ್ಷ ಪಾಸಿಟಿವ್ ಕೇಸುಗಳು ಕಂಡು ಬರುತ್ತಿವೆ.
ಕರೊನಾ ಎರಡನೇ ಅಲೆ ತಡೆಗಟ್ಟಲು ಭಾರತಕ್ಕೆ ಸಹಾಯ ನೀಡುವುದಾಗಿ ಘೋಷಿಸಿದ ಚೀನಾ