More

    ಓಡಿಹೋಗಿದ್ದ ಪ್ರೇಮಿಗಳನ್ನು ಹಿಡಿದುತಂದ ಪೊಲೀಸ್​; ಯುವತಿ ಮನೆಗೆ, ಯುವಕ ಮಸಣಕ್ಕೆ !

    ಲಖನೌ : ತನ್ನ ಪ್ರೇಯಸಿಯೊಂದಿಗೆ ಊರುಬಿಟ್ಟು ಓಡಿಹೋಗಿದ್ದ, ಸಿಕ್ಕಿಬಿದ್ದು ಪೊಲೀಸ್​ ಗಿರಫ್ತಿನಲ್ಲಿದ್ದ ಯುವಕನು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆಯು ಉತ್ತರಪ್ರದೇಶದ ಬುಲಂದ್​ಶಹರ್ ಜಿಲ್ಲೆಯಿಂದ ವರದಿಯಾಗಿದೆ. ಚೌದೇರಾ ಗ್ರಾಮದ ನಿವಾಸಿಯಾಗಿದ್ದ 22 ವರ್ಷದ ವಿಕ್ಕಿ ಸಿಂಗ್​ ಮೃತಪಟ್ಟಿದ್ದು, ಗ್ರಾಮ ಠಾಣೆಯ ಸಬ್​ಇನ್ಸ್​ಪೆಕ್ಟರ್​ ಸೇರಿದಂತೆ ಎಂಟು ಜನರ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ.

    ಏಪ್ರಿಲ್ 5 ರಂದು ವಿಕ್ಕಿ ಸಿಂಗ್, ಅದೇ ಊರಿನ ತನ್ನ ಪ್ರೇಯಸಿಯೊಂದಿಗೆ ಮನೆ ಬಿಟ್ಟು ಓಡಿಹೋಗಿದ್ದ. ಏಪ್ರಿಲ್ 11 ರಂದು ಅವರಿಬ್ಬರನ್ನೂ ಹಿಡಿದುತಂದ ಚೌದೇರಾ ಪೊಲೀಸರು ಯುವತಿಯನ್ನು ಆಕೆಯ ಮನೆಯವರಿಗೆ ಒಪ್ಪಿಸಿದರು. ಆದರೆ ಯುವಕನ ಮೇಲೆ ಅಪಹರಣದ ಕೇಸು ದಾಖಲಿಸಿ ಜೈಲಿನಲ್ಲಿಟ್ಟುಕೊಂಡರು. ಏಪ್ರಿಲ್ 16 ರಂದು ಸಂಜೆ ಅವನ ಮೃತ ದೇಹವು ಗ್ರಾಮದ ಹೊರಗಿನ ಮಾವಿನ ತೋಪಿನಲ್ಲಿ ಮರಕ್ಕೆ ನೇತಾಡುತ್ತಿತ್ತು ಎಂದು ಮೃತ​ನ ತಂದೆ ಗೌತಮ್ ಸಿಂಗ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ರಾಜ್ಯದಲ್ಲಿ ನಾಳೆಯಿಂದ ಲಾಕ್​ಡೌನ್​ ಆಗೋದು ನಿಜನಾ? ಸಚಿವ ಸುಧಾಕರ್​ ಏನು ಹೇಳಿದ್ರು ಕೇಳಿ…

    ಮೃತ ಸಿಂಗ್​​ನ​ ಕುಟುಂಬದವರು ಪೊಲೀಸ್​ ಕಸ್ಟಡಿಯಲ್ಲಿ ಆತ ಸಾವಪ್ಪಿದ್ದಾನೆ ಎಂದು ಆರೋಪಿಸಿದ್ದರೆ, ಪೊಲೀಸರು ಮುಂಚಿನ ದಿನವೇ ಆತನನ್ನು ಬಿಡುಗಡೆ ಮಾಡಿದ್ದುದಾಗಿ ಹೇಳಿದ್ದಾರೆ. ಇದು ಮರ್ಯಾದಾ ಹತ್ಯೆಯ ಪ್ರಕರಣವೇ ? ಪೊಲೀಸರು ಕಾರಣವಾಗಿದ್ದಾರಾ ಅಥವಾ ಶಾಮೀಲಾಗಿದ್ದಾರಾ ? ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದರೂ, ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎನ್ನಲಾಗಿದೆ.

    “ಚೌದೇರಾ ಸಬ್​​ಇನ್ಸ್​ಪೆಕ್ಟರ್ ರಾಜಕುಮಾರ್ ಮಿಶ್ರ ಮತ್ತು ಯುವತಿಯ ಕುಟುಂಬದ 7 ಜನರ ಮೇಲೆ ಕೊಲೆ ಮತ್ತು ಅಪರಾಧಿಕ ಸಂಚಿನ ಪ್ರಕರಣಗಳನ್ನು ದಾಖಲಿಸಲಾಗಿದೆ. ಪೊಲೀಸ್​ ಕಸ್ಟಡಿಯಲ್ಲಿ ಸಿಂಗ್​ ಸಾವಪ್ಪಿದನೇ ಅಥವಾ ಯುವತಿಯ ಕುಟುಂಬದವರು ಅವನನ್ನು ಸಾಯಿಸಿ ಮರಕ್ಕೆ ನೇತು ಹಾಕಿದರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತಪ್ಪಿತಸ್ಥರನ್ನು ಆದಷ್ಟು ಬೇಗ ಬಂಧಿಸಲಾಗುವುದು” ಎಂದು ಈ ನಿಗೂಢ ಸಾವಿನ ತನಿಖೆ ನಡೆಸುತ್ತಿರುವ ಛತರಿ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ಯೋಗೇಂದ್ರ ಕುಮಾರ್ ಹೇಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts