More

    ನಾಲ್ಕೈದು ತಿಂಗಳಲ್ಲಿ ಸಮಸ್ಯೆ ಹೋಗಲಾಡಿಸಿ

    ಕಲಘಟಗಿ: ಸಾರ್ವಜನಿಕರು ನೀಡಿದ ಹತ್ತಾರು ಮನವಿ ಮತ್ತು ಸಮಸ್ಯೆಗಳನ್ನು ನಾಲ್ಕೈದು ತಿಂಗಳೊಳಗೆ ಸರಿಪಡಿಸಿ ಜನಸಾಮಾನ್ಯರು ಹಾಗೂ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

    ತಾಲೂಕಿನ ಹಿರೇಹೊನ್ನಿಹಳ್ಳಿ ಹಾಗೂ ಕುರುವಿನಕೊಪ್ಪ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕರ ಕುಂದು-ಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಸರ್ಕಾರ ಈಗಾಗಲೇ ನಾಲ್ಕು ಭರವಸೆಗಳನ್ನು ಪೂರೈಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿದೆ. ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ಮೂರ್ನಾಲ್ಕು ತಿಂಗಳಿಗೊಮ್ಮೆ ಸಾರ್ವಜನಿಕ ಸಂಪರ್ಕ ಸಭೆ ನಡೆಸಿ ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

    ಈಗಾಗಲೇ ತಾಲೂಕಿನಾದ್ಯಂತ ರೈತರಿಗೆ ಬೋರವೆಲ್​ನಿಂದ ಕೃಷಿ ಚಟುವಟಿಕೆಗಳಿಗೆ ನೀರುಣಿಸಲು ಸಾಕಷ್ಟು ತೊಂದರೆ ಉಂಟಾಗುತ್ತಿದ್ದು, ಟಿ.ಸಿ ಸಮಸ್ಯೆ ಎದುರಿಸುತ್ತಿರುವ ರೈತರಿಗೆ ಸರ್ಕಾರದಿಂದ ಅಕ್ರಮ-ಸಕ್ರಮ ಅಡಿಯಲ್ಲಿ ಸೋಲಾರ್ ಮೋಟರ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆದ್ದರಿಂದ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಭಾಗಿಯಾಗಿ ಗೃಹಲಕ್ಷ್ಮಿ ಬಂದಿಲ್ಲ ಸರ್ ಎಂದ ಮಹಿಳೆಯರಿಂದ ಮಾಹಿತಿ ಪಡೆದುಕೊಂಡು ಸಿಡಿಪಿಒ ಅವರೊಂದಿಗೆ ಸ್ಥಳದಲ್ಲಿಯೇ ರ್ಚಚಿಸಿ ಯಾರಿಗೆ ಗೃಹಲಕ್ಷ್ಮಿ ಬಂದಿಲ್ಲವೋ ಅವರಿಂದ ಎಲ್ಲ ಮಾಹಿತಿ ಪಡೆದು ಕೂಡಲೆ ಅವರ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

    ದುರ್ಗಪ್ಪಣ್ಣ ಗ್ಯಾರಂಟಿ ಮಾಡಸ್ತೀನಿ: ಗ್ರಾಮದ ಹಿರಿಯ ದುರ್ಗಪ್ಪ ವಡ್ಡರ ಎಂಬುವವರು ಧೂಳಿಕೊಪ್ಪ ಕ್ರಾಸ್​ಗೆ ಬಸ್ ನಿಲ್ದಾಣ ಮಾಡಿಸಿ ಕೊಡ್ರಿ ಸಾಹೇಬ್ರ ಎಂಬ ಪ್ರಶ್ನೆಗೆ ಸಚಿವ ಲಾಡ್ ದುರ್ಗಪ್ಪಣ್ಣ ಬೇಗ ಮಾಡಿಸಿಕೊಡ್ತೀನಿ ಎಂದು ಉತ್ತರಿಸಿದರು.

    ಸ್ಥಳದಲ್ಲೇ ಪರಿಹಾರ ನೀಡಿ

    ಹಿರೇಹೊನ್ನಿಹಳ್ಳಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಸಾರ್ವಜನಿಕರ 10ಕ್ಕೂ ಅಧಿಕ ಬೇಡಿಕೆಗಳನ್ನು ಹಿರೇಹೊನ್ನಿಹಳ್ಳಿ ಗ್ರಾಪಂ ಅಧ್ಯಕ್ಷ ವಿನಾಯಕ ಧನಿಗೊಂಡ ಪ್ರಸ್ತಾಪಿಸಿದರು. ಹಿರೇಹೊನ್ನಿಹಳ್ಳಿ ಗ್ರಾಮದಲ್ಲಿನ ರುದ್ರಭೂಮಿಗೆ ಚಿತಾಗಾರ ಹಾಗೂ ಸುತ್ತುಗೋಡೆ ನಿರ್ವಣ, ರೈತರ ಹೊಲಗಳಿಗೆ ನೀಡಲಾಗುತ್ತಿರುವ ತ್ರೀ ಫೇಸ್ ವಿದ್ಯುತ್ ಸಮಸ್ಯೆ, ಹಿರೇಹೊನ್ನಿಹಳ್ಳಿಯಿಂದ ಉಗ್ಗಿನಕೇರಿ ಗ್ರಾಮದವರೆಗಿನ 3.75 ಕಿಮೀ ರಸ್ತೆ ವಿಸ್ತರಣೆ, ಆರೋಗ್ಯ ಇಲಾಖೆಯಲ್ಲಿ ಪಿಎಚ್​ಇ ಹಾಗೂ ಎಎನ್​ಎಂ ಸಿಬ್ಬಂದಿ ನೇಮಕ, ನೂತನ ಬಸ್ ನಿಲ್ದಾಣ, 25 ಲಕ್ಷ ರೂ. ವೆಚ್ಚದ ಕುಡಿಯುವ ನೀರಿನ ಹೊಂಡ ನಿರ್ವಣ, ಪಿ.ಯು ಕಾಲೇಜು ನಿರ್ವಣ, ಅಂಗನವಾಡಿ ಕೇಂದ್ರಕ್ಕೆ ಶಾಶ್ವತ ಜಾಗ, ಕ್ರೀಡಾಂಗಣ, ಕೆರೆಗಳ ಮೇಲೆ ಬ್ರಿಜ್ ಕಮ್ ಬ್ಯಾರೇಜ್ ನಿರ್ವಣ, ಶಾಲಾ ಕೊಠಡಿಗಳ ನಿರ್ಮಾಣ ಸೇರಿ ಹತ್ತಾರು ಸಮಸ್ಯೆಗಳನ್ನು ಆಲಿಸಿದ ಸಚಿವರು, ಸ್ಥಳದಲ್ಲಿಯೇ ಆಯಾ ಅಧಿಕಾರಿಗಳಿಂದ ಮಾಹಿತಿ ಪಡೆದು ಈ ಎಲ್ಲ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸುವಂತೆ ಸೂಚಿಸಿದರು. ಕುರುವಿನಕೊಪ್ಪ ಗ್ರಾಪಂ ಅಧ್ಯಕ್ಷೆ ನೇತ್ರಾವತಿ ಜಿನ್ನಮ್ಮನವರ, ಉಪಾಧ್ಯಕ್ಷ ಪರಸಪ್ಪ ದಾನವೇನವರ, ಹಿರೇಹೊನ್ನಿಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಗಂಗಮ್ಮ ಮಾದಿ, ಪಿಡಿಒಗಳಾದ ಉಮೇಶ ಚಿಕ್ಕಣ್ಣವರ, ರವೀಂದ್ರ ರಾಠೋಡ, ಜಿಪಂ ಮಾಜಿ ಸದಸ್ಯ ವೈ.ಬಿ. ದಾಸನಕೊಪ್ಪ, ಜಿಪಂ ಮಾಜಿ ಸದಸ್ಯೆ ಈರವ್ವ ದಾಸನಕೊಪ್ಪ, ಮಹಾದೇವಪ್ಪ ಜಮ್ಮಿಹಾಳ, ಮಂಜುನಾಥ ಲಂಗೂಟಿ, ಪ್ರಭು ರಾಮನಾಳ, ನಿಂಗಪ್ಪ ಬೆಳ್ಳಿವಾಲಿ, ರಫೀಕ್ ಸುಂಕದ, ಸಹದೇವಪ್ಪ ಧನಿಗೊಂಡ, ದ್ಯಾಮಣ್ಣ ಬಡಿಗೇರ, ಶಂಕರ್ ರಾಮನಾಳ, ಬಸವರಾಜ ದಾಸನಕೊಪ್ಪ, ಸಿದ್ದಪ್ಪ ಪಟ್ಟಣಶೆಟ್ಟಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts