More

    ಅರ್ಹರ ಪಟ್ಟಿಗೆ ಶೀಘ್ರ ಅನುಮೋದನೆ: ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಹೇಳಿಕೆ

    ಗಂಗಾವತಿ: ಆಟೋನಗರದ ವಿನ್ಯಾಸ ಪರಮಾರ್ಶಿಸಲಾಗುತ್ತಿದ್ದು, ಲಾನುಭವಿಗಳ ಅಧಿಕೃತ ಪಟ್ಟಿ ಮತ್ತು ಹೊಸ ವಿನ್ಯಾಸವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿ ಅನುಮೋದನೆ ಪಡೆಯಲಾಗುವುದು ಎಂದು ನಗರಸಭೆ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಹೇಳಿದರು.


    1998ರಿಂದಲೂ ಆಟೋನಗರ ಯೋಜನೆ ಪ್ರಸ್ತಾವನೆಯಲ್ಲಿದ್ದು, ಈ ಹಿಂದೆ ರೂಪಿಸಿರುವ ವಿನ್ಯಾಸ ಮತ್ತು ಲಾನುಭವಿಗಳ ಪಟ್ಟಿಗೆ ನಗರಾಡಳಿತ ಮತ್ತು ಜಿಲ್ಲಾಡಳಿತದಿಂದ ಅನುಮೋದನೆ ಸಿಕ್ಕಿಲ್ಲ. ನಿವೇಶನಗಳ ನೋಂದಣೆಗಾಗಿ ಕೆಲ ಕಾರ್ಮಿಕರು ಕೋರ್ಟ್ ಮೊರೆ ಹೋಗಿದ್ದಾರೆ. ಯೋಜನೆ ಪರಾಮರ್ಶಿಸುವಂತೆ 2015ರಲ್ಲಿ ಅಂದಿನ ಡಿಸಿ ಕೆಲ ಷರತ್ತುಗಳನ್ನು ವಿಧಿಸಿ ಆದೇಶಿಸಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಇದನ್ನೂ ಓದಿ: ಗಂಗಾವತಿಯ 35 ವಾರ್ಡ್‌ಗಳಲ್ಲಿ ನಗರಸಭೆಯಿಂದ ಆಪರೇಷನ್ ಡಾಗ್ ಶುರು


    ಕಾರ್ಮಿಕ ಮುಖಂಡರ ಸಮಕ್ಷಮದಲ್ಲಿ 90 ನಿವೇಶನಗಳನ್ನು ರೂಪಿಸಿ, ಪಟ್ಟಿ ತಯಾರಿಸುವಂತೆ ಸೂಚಿಸಿದ್ದರು. ಹಂಚಿಕೆ ವಿಳಂಬ ಹಿನ್ನೆಲೆಯಲ್ಲಿ 2022ರಲ್ಲಿ ನ್ಯಾಯಾಂಗ ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್ ತಿಳಿಸಿತ್ತು. ಇದರ ಬಗ್ಗೆ ಮಾಹಿತಿ ಇರದ ಕೆಲ ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆ ಮುಖಂಡರು ಅನಗತ್ಯ ಹೇಳಿಕೆ ನೀಡುತ್ತಿದ್ದು, ಅಂಥವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧರಿಸಿದ್ದೇನೆ ಎಂದರು.


    ಆಟೋನಗರದಲ್ಲಿರುವ ಕೆಲವರು ಕಟ್ಟಡ ಮತ್ತು ಉದ್ಯಮಿ ಪರವಾನಗಿ ಪಡೆಯದೇ ಗ್ಯಾರೇಜ್‌ಗಳನ್ನು ಹಾಕಿಕೊಂಡಿದ್ದಾರೆ. ನಿವೇಶನ ಅಳತೆಯಲ್ಲೂ ವ್ಯತ್ಯಾಸವಿದ್ದು, ಅವರು ಬಯಸಿದ ಅಳತೆಯಲ್ಲಿ ನಿವೇಶನ ವಿತರಿಸಲಾಗುವುದಿಲ್ಲ. ಎಲ್ಲ ಕಟ್ಟಡ ತೆರವುಗೊಳಿಸಿದ ಮರು ವಿನ್ಯಾಸ ರೂಪಿಸಿ ಲಾನುಭವಿಗಳಿಗೆ ವಿತರಿಸಲಾಗುವುದು.


    ಕೋರ್ಟ್ ಮತ್ತು ಜಿಲ್ಲಾಡಳಿತದ ಪ್ರತಿಯೊಂದು ಆದೇಶ, ತೀರ್ಪು ಮತ್ತು ಸೂಚನೆ ಪಾಲಿಸುತ್ತಿದ್ದು, ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿಲ್ಲ. ಮಾಹಿತಿಯಿಲ್ಲದ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ವಿನ್ಯಾಸ, ಲಾನುಭವಿಗಳ ಪಟ್ಟಿ, ನಯೋಪ್ರಾದಿಂದ ವಿನ್ಯಾಸ ಅನುಮೋದನೆ ಸೇರಿ ಪೌರಾಡಳಿತ ಕಾಯ್ದೆಯಂತೆ ಸಮಗ್ರ ವರದಿ ತಯಾರಿಸಿ, ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ವಿಷಯ ನಿರ್ವಾಹಕರಾದ ಆಂಜನೇಯ, ಬಸವರಾಜ್, ಬಿಲಾಲ್ ಪಾಶಾ ಇತರರಿದ್ದರು.

    ಈ ಹಿಂದಿದ್ದ ಪೌರಾಯುಕ್ತರು ಏನೂ ಮಾಡಿದ್ದಾರೆ ಎಂಬುದರ ಬಗ್ಗೆ ಚರ್ಚೆ ಬೇಡ. 2015ರ ಜಿಲ್ಲಾಡಳಿತ ಸೂಚನೆಯಂತೆ ಆಟೋನಗರ ಸಮಸ್ಯೆ ಇತ್ಯರ್ಥ ಪಡಿಸಲಾಗುತ್ತಿದ್ದು, ವಿನ್ಯಾಸಕ್ಕಾಗಿ ಎಲ್ಲ ಶೆಡ್‌ಗಳ ತೆರವು ಅನಿವಾರ್ಯ.
    ಆರ್. ವಿರೂಪಾಕ್ಷಮೂರ್ತಿ,ಪೌರಾಯುಕ್ತ , ಗಂಗಾವತಿ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts