More

    ಗಂಗಾವತಿಯ 35 ವಾರ್ಡ್‌ಗಳಲ್ಲಿ ನಗರಸಭೆಯಿಂದ ಆಪರೇಷನ್ ಡಾಗ್ ಶುರು

    ಗಂಗಾವತಿ: ಬೀದಿ ನಾಯಿಗಳ ಸಂಖ್ಯೆ ಕ್ಷೀಣಕ್ಕಾಗಿ ನಗರಸಭೆಯಿಂದ ಆಪರೇಷನ್ ಡಾಗ್ ಕಾರ್ಯಾಚರಣೆ ಶುರುವಾಗಿದ್ದು, ನಾಯಿಗಳ ಸಂತಾನಹರಣ ಚಿಕಿತ್ಸೆಗೆ ಮಂಗಳವಾರ ಚಾಲನೆ ನೀಡಲಾಯಿತು.

    ನಗರದ 35 ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಪ್ರಮುಖ ವೃತ್ತಗಳಲ್ಲಿ ಗುಂಪುಗುಂಪಾಗಿ ನಿಂತು ವಾಹನ ಸವಾರರು ಮತ್ತು ದಾರಿಹೋಕರ ಮೇಲೆ ದಾಳಿ ನಡೆಸುತ್ತಿದ್ದವು. ಮಕ್ಕಳ ಮೇಲೆ ದಾಳಿ ನಡೆಸಿ, ಗಾಯಗೊಳಿಸಿದ ಪ್ರಕರಣಗಳಿದ್ದವು. ನಿಯಂತ್ರಣಕ್ಕಾಗಿ ಸಂತಾನ ಹರಣ ಚಿಕಿತ್ಸೆಗೆ ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ನೀಡಿದ್ದು, ಜನವರಿಯಿಂದ ಇಲ್ಲಿವರೆಗೂ 3 ಬಾರಿ ಟೆಂಡರ್ ಕರೆದಿದ್ದರೂ ಪ್ರಯೋಜನವಾಗಿರಲಿಲ್ಲ.

    ಬಳ್ಳಾರಿ ಮೂಲದ ಕಾಂಪೇಶನ್ ಾರ್ ಎನಿಮಲ್ ವೆಲ್‌ೇರ್ ಸಂಸ್ಥೆಗೆ ಸಂತಾನಹರಣ ಗುತ್ತಿಗೆ ನೀಡಿದ್ದು, ಮೊದಲ ದಿನದಂದು 20 ನಾಯಿಗಳಿಗೆ ಚಿಕಿತ್ಸೆ ನೀಡಲಾಗಿದೆ. ನಾಯಿಗಳನ್ನು ಹಿಡಿಯುವುದು ಹರಸಾಹಸವಾಗಿದ್ದು, ಸಂತಾನಹರಣ ಚಿಕಿತ್ಸೆಗಾಗಿ ವಿಶೇಷ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಕಾರ್ಯಾಚರಣೆ ವೇಳೆ ಸಾಕುನಾಯಿಗಳನ್ನು ಹಿಡಿಯಲಾಗಿದ್ದು, ಮಾಲೀಕರು ಗೋಳಾಡಿದರು.

    ಈ ಬಗ್ಗೆ ಪರಿಸರ ಇಂಜಿನಿಯರ್ ಚೇತನಕುಮಾರ ಮಾತನಾಡಿ, ಸಂತಾನಹರಣ ಚಿಕಿತ್ಸೆ ಕಾರ್ಯಾಚರಣೆ ತಿಂಗಳ ಪರ್ಯಂತ ನಡೆಯಲಿದ್ದು, ನಾಯಿಗಳು ಹೆಚ್ಚಾಗದಂತೆ ನೋಡಿಕೊಳ್ಳಲಾಗುವುದು. ನಾಯಿಗಳ ಆರೋಗ್ಯ ಪರೀಕ್ಷಿಸಿದ ನಂತರ ಸಂತಾನಹರಣ ಮಾಡಲಾಗುವುದು. ಕಾರ್ಯಾಚರಣೆ ಸಂದರ್ಭದಲ್ಲಿ ಸಾರ್ವಜನಿಕರ ಸಹಕಾರ ಮುಖ್ಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts