More

    ಅರ್ಹ ಫಲನುಭವಿಗಳಿಗೆ ವಸತಿ ಸೌಕರ್ಯ

    ಚಿತ್ರದುರ್ಗ: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಲು ಬದ್ಧನಿದ್ದೇನೆ. ಪಕ್ಷಭೇದ ಮರೆತು ಎಲ್ಲ ಬಡವರಿಗೂ ಮನೆ ಹಂಚಿಕೆ ಮಾಡಲಾಗುವುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

    ತಾಲೂಕಿನ ಭೀಮಸಮುದ್ರದಲ್ಲಿ ಶುಕ್ರವಾರ ಅಂಬೇಡ್ಕರ್ ಮತ್ತು ಬಸವ ವಸತಿ ಯೋಜನೆ ಫಲಾನುಭವಿಗಳ ಆಯ್ಕೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಗ್ರಾಮಸಭೆಗಳಲ್ಲಿ ಮಾತನಾಡಿದರು.

    ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ತಲಾ 2.48 ಲಕ್ಷ ರೂ, ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 1.60 ಲಕ್ಷ ರೂ. ನೀಡಲಾಗುತ್ತಿದೆ. ಸಾಮಾನ್ಯ ವರ್ಗದವರ ಮೊತ್ತ ಹೆಚ್ಚಿಸಲು ಸಿಎಂ ಪ್ರಯತ್ನಿಸಿದ್ದಾರೆ. ಕ್ಷೇತ್ರದ 183 ಹಳ್ಳಿಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ವಿ.ವಿ.ಸಾಗರದಿಂದ ಕುಡಿಯುವ ನೀರು ಪೂರೈಕೆ ಕಾಮಗಾರಿ ನಡೆಯುತ್ತಿದೆ ಎಂದರು.
    ತಾಲೂಕಿನ ಸಿದ್ದಾಪುರ, ಹಿರೇಗುಂಟನೂರು, ಬೊಮ್ಮೇನಹಳ್ಳಿಯಲ್ಲಿಯೂ ಗ್ರಾಮ ಸಭೆ ನಡೆದವು. ಕುಡಾ ಅಧ್ಯಕ್ಷ ಜಿ.ಟಿ.ಸುರೇಶ್, ಸಿದ್ದಾಪುರ ಗ್ರಾಪಂ ಅಧ್ಯಕ್ಷ ವಿಷ್ಣುವರ್ಧನ್, ಹಿರೇಗುಂಟನೂರು ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ, ಭೀಮಸಮುದ್ರ ಗ್ರಾ.ಪಂ. ಅಧ್ಯಕ್ಷೆ ಕಾವ್ಯ, ತಾಪಂ ಇಒ ಹನುಮಂತಪ್ಪ, ಸಹಾಯಕ ನಿರ್ದೇಶಕ ಧನಂಜಯ, ಪಿಡಿಒ ದೀಪಾ, ಗ್ರಾಮಸ್ಥರು ಇದ್ದರು.

    *ಅಂಗನವಾಡಿ ಉದ್ಘಾಟನೆ:
    ತಾಲೂಕಿನ ವಿವಿಧೆಡೆ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಮತ್ತು ಶಾಲಾ ಕೊಠಡಿಗಳನ್ನು ಶಾಸಕರು ಉದ್ಘಾಟಿಸಿದರು. ತಾಲೂಕಿನಲ್ಲಿ ರಾಜ್ಯ ಸರ್ಕಾರದ ಅನುದಾನ, ಡಿಎಂಎಫ್ ಶಾಸಕರ ಅನುದಾನ ಬಳಸಿ 187 ಕೊಠಡಿಗಳನ್ನು ನಿರ್ಮಿಸಲಾಗಿದೆ. ಕುರುಬರಹಳ್ಳಿಯ ಸರ್ಕಾರಿ ಉನ್ನತೀಕರಿಸಿದ ಕನ್ನಡ ಮತ್ತು ಆಂಗ್ಲ ಶಾಲೆಯಲ್ಲಿ 32 ಲಕ್ಷ ರೂ. ವೆಚ್ಚದಲ್ಲಿ 3 ಕೊಠಡಿ, 64 ಲಕ್ಷ ರೂ. ವೆಚ್ಚದಲ್ಲಿ ಆಲಘಟ್ಟದ ಸರ್ಕಾರಿ ಪ್ರೌಢಶಾಲೆಯಲ್ಲಿ 4 ಕೊಠಡಿ, ಹಳಿಯೂರು, ಕುರುಬರಹಳ್ಳಿಯಲ್ಲಿ ತಲಾ 16.50 ಲಕ್ಷ ರೂ. ವೆಚ್ಚದಲ್ಲಿ ಹಾಗೂ ಬೊಮ್ಮೇನಹಳ್ಳಿಯಲ್ಲಿ 32 ಲಕ್ಷ ರೂ. ವೆಚ್ಚದಲ್ಲಿ 2 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

    ಬಿಇಒ ತಿಪ್ಪೇಸ್ವಾಮಿ, ಬಿಆರ್‌ಸಿ ಸಂಪತ್, ಸಿಡಿಪಿಒ ಲೋಕೇಶಪ್ಪ, ಹುಲ್ಲೂರು ಗ್ರಾ.ಪಂ. ಅಧ್ಯಕ್ಷೆ ಚಂದ್ರಮ್ಮ, ಬೊಮ್ಮೇನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ, ಸದಸ್ಯರಾದ ಮಂಜಣ್ಣ, ಕುಮಾರ್, ತಿಪ್ಪೇಶ್ ಇತರರು ಇದ್ದರು.

    * ತಿಂಗಳೊಳಗೆ ಕಾಮಗಾರಿ ಪೂರ್ಣ *
    ತಿಂಗಳೊಳಗೆ ಗ್ರಾಮೀಣ, ನಗರ ಪ್ರದೇಶದ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪೂರ್ಣವಾಗಲಿವೆ ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು. ಚಿತ್ರದುರ್ಗ ಜಯಲಕ್ಷ್ಮಿ ಬಡಾವಣೆಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕುರುಬರಹಳ್ಳಿ, ಹಳಿಯೂರು, ಹಿರೇಗುಂಟನೂರು, ಭೀಮಸಮುದ್ರ, ಹಿರೇಗುಂಟನೂರು ಗೊಲ್ಲರಹಟ್ಟಿ, ವಡ್ಡರಸಿದ್ದವ್ವನಹಳ್ಳಿ, ಹುಣಸೇಕಟ್ಟೆ ಗೊಲ್ಲರಹಟ್ಟಿ, ಚಿಕ್ಕಾಲಗಟ್ಟ, ದೊಡ್ಡಾಲಘಟ್ಟ, ಓಬವ್ವನಾಗತಿ ಹಳ್ಳಿ, ಸಿಸಿ ರಸ್ತೆ ಹಾಗೂ ಮಾನಂಗಿ-ಈಚನಾಗೇನಹಳ್ಳಿವರೆಗೆ ರಸ್ತೆ ಅಭಿವೃದ್ಧಿ ಸೇರಿ ಒಟ್ಟು 7.30 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ ಎಂದು ಮಾಹಿತಿ ನೀಡಿದರು.

    ತಾಪಂ ಇಒ ಹನುಮಂತಪ್ಪ, ಹಿರೇಗುಂಟನೂರು ಗ್ರಾಪಂ ಅಧ್ಯಕ್ಷೆ ಜ್ಯೋತಿ, ಭೀಮಸಮುದ್ರ ಗ್ರಾ.ಪಂ. ಅಧ್ಯಕ್ಷೆ ಕಾವ್ಯಾ, ಮುಖಂಡರಾದ ಮಂಜಣ್ಣ, ರಮೇಶ್, ಮಹಾಂತೇಶ್, ಮೂರ್ತಣ್ಣ, ತಿಪ್ಪೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts