More

    ತೋಟದ ಕೆರೆಗಿಳಿದು ಸಿಕ್ಕಿಬಿದ್ದ ಕಾಡಾನೆ ಹಿಂಡು

    ಸುಳ್ಯ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ನಾಲ್ಕು ಕಾಡಾನೆ ಕೃಷಿ ತೋಟದ ಕೆರೆಯಲ್ಲಿ ಬಿದ್ದು ಇಕ್ಕಟ್ಟಿಗೆ ಸಿಲುಕಿದ ಘಟನೆ ಗುರುವಾರ ಅಜ್ಜಾವರದಲ್ಲಿ ನಡೆದಿದೆ. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳ ಎರಡು ತಾಸುಗಳ ಕಾರ್ಯಾಚರಣೆಯಿಂದ ಮರಳಿ ಕಾಡಿಗೆ ಬಿಡಲಾಯಿತು.

    ಘಟನೆ ಬುಧವಾರ ರಾತ್ರಿಯೇ ಸಂಭವಿಸಿದರೂ ಪ್ರಕರಣ ಬೆಳಕಿಗೆ ಬಂದದ್ದು ಮಾತ್ರ ಗುರುವಾರ ಬೆಳಗ್ಗೆ. ಅಜ್ಜಾವರದ ತುದಿಯಡ್ಕದ ಸಂತೋಷ್ ರೈ ಎಂಬುವರ ತೋಟದ ಕೆರೆಗೆ ಮೂರು ದೊಡ್ಡ ಹಾಗೂ ಎರಡು ಮರಿ ಆನೆಗಳು ಇಳಿದಿವೆ. ತುಂಬಾ ಆಳ ಹಾಗೂ ಕೆಸರು ತುಂಬಿದ ಕೆರೆಗಿಳಿದ ಆನೆಗಳು ಮರಳಿ ಹೋಗಲಾರದೆ ಪೇಚಾಟಕ್ಕೆ ಸಿಲುಕಿವೆ. ಘಟನೆ ಬೆಳಗ್ಗಿನ ಜಾವ ಬೆಳಕಿಗೆ ಬಂದಿದ್ದು ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಯಿತು.

    ಕಾಡಾನೆ ಮರಳಿ ಕಾಡಿಗೆ

    ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸ್ಥಳೀಯರು ಸೇರಿ ಕಾರ್ಯಾಚರಣೆ ನಡೆಸಿದರು. ಈ ಸಂದರ್ಭ ಗಜಪಡೆ ಕೆರೆ ಸುತ್ತಲೂ ತಿರುಗಿ ಮೇಲೆ ಬರಲು ಪ್ರಯತ್ನ ನಡೆಸುತ್ತಿದ್ದವು. ವಿಷಯ ತಿಳಿದ ಜನ ಕೆರೆಯ ಸುತ್ತ ಜಮಾಯಿಸಿದ್ದರು. ಕೆರೆಯ ಒಂದು ಮೂಲೆಯಲ್ಲಿ ಅಗೆದು ಆನೆಗಳು ಮೇಲೆ ಬರುವಂತೆ ಮಾಡಲಾಯಿತು. ಸುಮಾರು ಎರಡು ಗಂಟೆಗಳ ಕಾರ್ಯಾಚರಣೆ ಕೊನೆಗೂ ಫಲ ನೀಡಿತು. ಮೂರು ಆನೆಗಳು ಏರಿ ಬಚಾವಾದವಾದರೂ ಮರಿಯಾನೆಯೊಂದು ಮೇಲೇಳಲೂ ಸಾಧ್ಯವಾಗದಷ್ಟು ಬಸವಳಿದಿತ್ತು. ಬಳಿಕ ಹಗ್ಗದ ಸಹಾಯದಿಂದ ಎಳೆದು ಹಾಗೂ ಹಿಂದಿನಿಂದ ದೂಡಿ ಮೇಲೆ ಬರುವಂತೆ ಮಾಡಲಾಯಿತು.ಆದರೂ ನಡೆಯಲಾರದೆ ಅಸಹಾಯಕ ಸ್ಥಿತಿಯಲ್ಲಿದ್ದ ಮರಿಯಾನೆಯನ್ನು ಸ್ಥಳಿಯರೂ ಕಾಡಿನಂಚಿನವರೆಗೆ ತಳ್ಳಿಕೊಂಡು ಹೋಗಿ ಬಿಟ್ಟು ಬಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts