More

    ಜಾತ್ರೋತ್ಸವದಂದು ಮತ್ಸ್ಯ ಬೇಟೆ, ಮಿತ್ತಡಿಗೆ ಮೀನು ಪಲ್ಯ ವಿಶೇಷ ಭಕ್ಷ್ಯ

    ಮೂಲ್ಕಿ: ಹಬ್ಬ ಹರಿದಿನಗಳಲ್ಲಿ ಮೀನು, ಮಾಂಸ ವರ್ಜ್ಯ. ಆದರೆ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವ ದಿನದಂದು ಸಾರ್ವಜನಿಕ ವಲಯದಲ್ಲಿ ಮೀನು ಪಲ್ಯಕ್ಕೆ ವಿಶೇಷ ಆದ್ಯತೆ.

    ಅಗಲಿದ ಹಿರಿಯರಿಗೆ ಉಣ ಬಡಿಸಲು (ಮಿತ್ತಡಿ) ಮೀನು ಪಲ್ಯ ವಿಶೇಷ ಭಕ್ಷ್ಯವಾಗಿ ಬಳಕೆಯಲ್ಲಿರುವ ಕಾರಣ ಬಪ್ಪನಾಡು ಜಾತ್ರೆ ಸಂದರ್ಭ ಮೂಲ್ಕಿ ಪರಿಸರದ ಹಲವಾರು ಪ್ರದೇಶಗಳಲ್ಲಿ ಮೀನು ಹಿಡಿಯುವ ಸಂಪ್ರದಾಯ ಜಾರಿಯಲ್ಲಿದೆ. ಮುಲ್ಕಿ ಸಮೀಪದ ಚಿತ್ರಾಪು ಮರ್ಕುಂಜ ಕಲ್ಸಂಕ ಬಳಿಯ ಕೊಂಕಣ ತೋಡು ಹಾಗೂ ತಂಕರ ನಾಗ ಕೊಳದಲ್ಲಿ ಬೆಳಗ್ಗಿನಿಂದಲೇ ಮತ್ಸ್ಯಬೇಟೆ ಆರಂಭವಾಗುತ್ತದೆ. ಸಣ್ಣ ಮಕ್ಕಳಿನಿಂದ ಹಿಡಿದು ಮಹಿಳೆಯರು ಹಾಗೂ ಗ್ರಾಮಸ್ಥರು ಇಲ್ಲಿ ಬಲೆ ಹಾಕಿ ಮೀನು ಹಿಡಿದು ಸಂಭ್ರಮಿಸುತ್ತಾರೆ.

    ಜಾತ್ರೋತ್ಸವದಂದು ಮತ್ಸ್ಯ ಬೇಟೆ

    ಅನಾದಿ ಕಾಲದಿಂದಲೂ ಜಾತ್ರಾ ಸಮಯದಲ್ಲಿ ಸ್ಥಳೀಯ ಪರಿಸರದವರು ಮತ್ಸ್ಯಬೇಟೆ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದ್ದು ಜಾತ್ರಾ ಮಹೋತ್ಸವ ದಿನ ಅಗಲಿದ ಹಿರಿಯರನ್ನು ನೆನಪಿಸಿಕೊಂಡು ಉಣ ಬಡಿಸಿ ಬಳಿಕ ಮುಂಬೈ ಸಹಿತ ವಿದೇಶದಿಂದ ಆಗಮಿಸುತ್ತಿರುವ ತಮ್ಮ ನೆಂಟರು, ಸಂಬಂಧಿಕರಿಗೆ ಮೀನಿನ ಭಕ್ಷ್ಯ ಬಡಿಸಿ, ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಹೊಳೆ ನೀರು ಕಲುಶಿತಗೊಳ್ಳುವ ಕಾರಣ ಮೀನು ಮರಿಗಳು ನಾಶವಾಗಿ ಮೀನು ಸಿಗುವುದು ಬಹಳ ಕಡಿಮೆಯಾಗಿದೆ.

    ಹೊಳೆ ಮೀನು ಬಹಳ ರುಚಿ ಹೊಂದಿದೆ. ಬಪ್ಪನಾಡು ಜಾತ್ರಾ ಸಮಯದಲ್ಲಿ ಮೀನು ಖಾದ್ಯ ಬಹಳ ಮುಖ್ಯ ಇತ್ತೀಚಿನ ದಿನಗಳಲ್ಲಿ ಕೆರೆಯಲ್ಲಿ ಅಧಿಕ ಹೂಳು ಹಾಗೂ ನೀರು ಕಲುಶಿತ ಗೊಂಡಿರುವ ಕಾರಣ ಮೀನುಗಾರಿಕೆಗೆ ತೀವ್ರ ತೊಂದರೆಯಾಗಿದೆ.
    – ದಿನೇಶ್ ಕೋಟ್ಯಾನ್, ಸ್ಥಳೀಯರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts