More

    ಜತೆಗಾರನ ದಹನ ಮಾಡಿದ ಸ್ಥಳದಲ್ಲಿ

    ಸುಬ್ರಹ್ಮಣ್ಯ/ಕಡಬ: ತಮ್ಮ ಬಳಗದ ಸದಸ್ಯನೊಬ್ಬನನ್ನು ಕಳೆದುಕೊಂಡ ಕಾಡಾನೆಗಳು ಹುಡುಕಿಕೊಂಡು ಬಂದು ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲಿ ರೋದಿಸುತ್ತಿರುವ ಮನ ಕಲಕುವ ಘಟನೆ ಸುಬ್ರಹ್ಮಣ್ಯ ಅರಣ್ಯ ವಲಯ ವ್ಯಾಪ್ತಿಯಲ್ಲಿ ನಡೆದಿದೆ.

    ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಪುತ್ತಿಲ ಎಂಬಲ್ಲಿ ಸುಮಾರು 40 ವರ್ಷ ಪ್ರಾಯದ ಗಂಡಾನೆಯೊಂದು ಬೈನೆ ಮರವನ್ನು ಎಳೆದಾಗ ಅದರ ಗರಿಗಳು ವಿದ್ಯುತ್ ತಂತಿಗೆ ಸ್ಪರ್ಶಗೊಂಡು ಸ್ಥಳದಲ್ಲೇ ಮೃತಪಟ್ಟಿತ್ತು. ಅರಣ್ಯ ಇಲಾಖೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಗುಂಡಿ ತೋಡಿ ಮೃತದೇಹದ ದಹನ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಕೆಲವು ದಿನಗಳಿಂದ ಇದು ಸಾಗಿತ್ತು.

    ಈ ನಡುವೆ, ಮೂರು ಕಾಡಾನೆಗಳು ಆನೆಯನ್ನು ದಹನ ಮಾಡುತ್ತಿದ್ದ ಸ್ಥಳಕ್ಕೆ ಪ್ರತಿದಿನ ರಾತ್ರಿ ಬಂದು ಘೀಳಿಡುತ್ತಿದ್ದವು. ಸ್ಥಳದಲ್ಲಿ ಸುತ್ತಾಡುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾಡಾನೆಗಳು ಕೊಂಬಾರಿನ ಬೊಟ್ಟಡ್ಕ ಮೂಲಕ ಸ್ಥಳೀಯರ ತೋಟಕ್ಕೆ ಬಂದು ಕಾಡಾನೆ ಮೃತಪಟ್ಟ ಜಾಗಕ್ಕೆ ಬಂದಿವೆ. ಅಲ್ಲಿ ಘೀಳಿಡುತ್ತಾ ತಮ್ಮ ಬೇಸರ ವ್ಯಕ್ತಪಡಿಸುತ್ತಿವೆ. ಮುಗೇರಡ್ಕ ಶಾಲಾ ವಠಾರದ ತೆಂಗಿನಮರವನ್ನು ಉರುಳಿಸಿ ತಿಂದಿದ್ದು, ಉರುಂಬಿ, ಪುತ್ತಿಲ, ಬೊಟ್ಟಡ್ಕ ಭಾಗದಲ್ಲಿ ಸಂಚರಿಸಿವೆ.
    ಭಾನುವಾರ ಸಂಪೂರ್ಣ ದಹನವಾದ ಬಳಿಕ ಜೆಸಿಬಿ ಮೂಲಕ ಗುಂಡಿಗೆ ಮಣ್ಣು ಹಾಕಿ ಮುಚ್ಚಲಾಗಿತ್ತು. ಹಾಗಾಗಿ ಭಾನುವಾರ ರಾತ್ರಿ ಆನೆಗಳು ಬಂದು ಘೀಳಿಡುವ ಶಬ್ದ ಕೇಳಿಸಿಲ್ಲ ಎನ್ನುತ್ತಾರೆ ಸ್ಥಳೀಯರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts