More

    ದಕ್ಷಿಣ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ ಆರಂಭ

    ಗುಂಡ್ಲುಪೇಟೆ: ಮಾನವ ವನ್ಯಜೀವಿ ಸಂಘರ್ಷ ತಪ್ಪಿಸುವ ಸಲುವಾಗಿ ಬಂಡೀಪುರದ 13 ವಲಯಗಳ 113 ಬೀಟುಗಳಲ್ಲಿ ಅರಣ್ಯ ಇಲಾಖೆ ಗುರುವಾರದಿಂದ ಆನೆ ಗಣತಿ ಆರಂಭಿಸಿತು.


    ಈ ವರ್ಷದ ಮಾರ್ಚ್ ತಿಂಗಳಲ್ಲಿ ಬಂಡೀಪುರದಲ್ಲಿ ನಡೆದ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳ ಅಧಿಕಾರಿಗಳನ್ನೊಳಗೊಂಡ ಅಂತರಾಜ್ಯ ಸಮನ್ವಯ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಈ ಬಾರಿ ದಕ್ಷಿಣ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಮಾತ್ರ ಆನೆಗಳ ಗಣತಿ ನಡೆಸಲಾಗುತ್ತಿದೆ.
    ಇದಕ್ಕಾಗಿ ಅರಣ್ಯ ಇಲಾಖೆ ಎಲ್ಲ ಸಿಬ್ಬಂದಿಗೂ ತರಬೇತಿ ನೀಡಿದ್ದು, ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಗಣತಿ ಕಾರ್ಯ ಕೈಗೊಂಡರು. ಆಯಾ ವಲಯಗಳ ಅಧಿಕಾರಿಗಳ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಮೂರು- ನಾಲ್ಕು ಜನರ ತಂಡದಂತೆ ಮಧ್ಯಾಹ್ನದವರೆಗೂ ಕಾಲ್ನಡಿಗೆಯಲ್ಲಿ ಸಾಗಿದ ಸಿಬ್ಬಂದಿ ತಮಗೆ ಎದುರಾದ ಆನೆಗಳ ಲಿಂಗ, ವಯಸ್ಸು, ದಂತ, ದಂತರಹಿತ ಆನೆಗಳ ಸಂಖ್ಯೆಯನ್ನು ದಾಖಲಿಸಿ ಸಂಜೆ ವೇಳೆಗೆ ವಾಪಸಾದರು. ಆಗಾಗ್ಗೆ ಬಿಳುತ್ತಿದ್ದ ಮಳೆಯಿಂದ ರಕ್ಷಣೆ ಪಡೆಯಲು ಮರಗಳ ಕೆಳಗೆ ನಿಂತುಕೊಳ್ಳಬೇಕಾಯಿತು ಎಂದು ಸಿಬ್ಬಂದಿ ತಿಳಿಸಿದ್ದಾರೆ.


    ಎರಡನೇ ದಿನ ಲೈನ್ ಟ್ರ್ಯಾನ್ಸೆಕ್ಟ್ ಮಾದರಿಯಲ್ಲಿ ಆನೆಗಳ ಲದ್ದಿಯ ಮೂಲಕ ಎಣಿಕೆ ಮತ್ತು ಮೂರನೇ ದಿನ ವಾಟರ್ ಹೋಲ್ ಮಾದರಿಯಲ್ಲಿ ಕೆರೆಕಟ್ಟೆಗಳು ಹಾಗೂ ನೀರಿನ ಮೂಲಗಳ ಬಳಿ ಕಂಡುಬರುವ ಆನೆಗಳ ಗಣತಿ ನಡೆಸಲಾಗುತ್ತದೆ. ಗಣತಿಯ ಆಧಾರದ ಮೇಲೆ ಆನೆಗಳ ಆವಾಸ ಸ್ಥಾನ, ಕಾಡಂಚಿನಲ್ಲಿ ಹೆಚ್ಚುತ್ತಿರುವ ಮಾನವ-ಪ್ರಾಣಿ ಸಂಘರ್ಷವನ್ನು ಕಡಿಮೆಗೊಳಿಸುವ ಬಗ್ಗೆ ನಿರ್ವಹಣಾ ತಂತ್ರ ರೂಪಿಸಲು ನೆರವಾಗಲಿದೆ ಎಂದು ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts