More

    ಉಡುಪಿಯಲ್ಲಿ ಇ ಟಾಯ್ಲೆಟ್

    ಗೋಪಾಲಕೃಷ್ಣ ಪಾದೂರು ಉಡುಪಿ
    ಉಡುಪಿ ನಗರ ವ್ಯಾಪ್ತಿಯಲ್ಲಿ ಮೊದಲ ಬಾರಿ ಇಲೆಕ್ಟ್ರಾನಿಕ್ ಪಬ್ಲಿಕ್ ಟಾಯ್ಲೆಟ್ (ಇ.ಪಿ. ಶೌಚಗೃಹ) ವ್ಯವಸ್ಥೆ ಜಾರಿಯಾಗಿದ್ದು, ಬೋರ್ಡ್ ಹೈಸ್ಕೂಲ್ ಸಮೀಪ ಹಾಗೂ ಸಿಟಿ ಬಸ್ ನಿಲ್ದಾಣ ಬಳಿ ಎರಡು, ಮಣಿಪಾಲ ಭಾರತ್ ಪೆಟ್ರೋಲ್ ಪಂಪ್ ಬಳಿ ಒಂದು ಶೌಚಗೃಹ ತಲಾ 6.8 ಲಕ್ಷ ರೂ. ವೆಚ್ಚದಲ್ಲಿ ಪೌರಾಡಳಿತ ಇಲಾಖೆ ಅನುದಾನದಲ್ಲಿ ನಿರ್ಮಿಸಲಾಗಿದೆ. ಇ-ಶೌಚಗೃಹಗಳು ಹೊಸ ತಂತ್ರಜ್ಞಾನ ಹೊಂದಿದ್ದು, ಬಳಕೆದಾರರು 2, 5 ಮತ್ತು 10 ರೂ. ನಾಣ್ಯಗಳನ್ನು ಹಾಕಿದರೆ ಸ್ವಯಂ ಚಾಲಿತವಾಗಿ ಬಾಗಿಲು ತೆರೆದುಕೊಳ್ಳಲಿದೆ. ಶೌಚಗೃಹದ ಒಳಗೆ ಮತ್ತು ಹೊರಗಡೆ ್ಯಾನ್, ಲೈಟ್ ವ್ಯವಸ್ಥೆಗೆ ಸೆನ್ಸಾರ್ ಅಳವಡಿಸಿದ್ದು, ಇದರಿಂದ ವಿದ್ಯುಚ್ಛಕ್ತಿ ಉಳಿತಾಯವಾಗಲಿದೆ. ಜತೆಗೆ ಸ್ವಯಂಚಾಲಿತ ್ಲಶ್ ವ್ಯವಸ್ಥೆ ಇದೆ. ಪ್ರತಿ ಐದು ಮಂದಿ ಬಳಸಿದ ನಂತರ ನೆಲವನ್ನು ಸ್ವಯಂ ಸ್ವಚ್ಛತೆ ಮಾಡಿಕೊಳ್ಳಲಿದೆ. ನೀರಿನ ವ್ಯವಸ್ಥೆಗಾಗಿ 300 ಲೀಟರ್ ಸಾಮರ್ಥ್ಯದ ಟ್ಯಾಂಕ್ ಅಳವಡಿಸಲಾಗಿದೆ. ಇ.ಪಿ. ಶೌಚಗೃಹಗಳ ಸ್ಥಾಪನೆ ಮತ್ತು ಮುಂದಿನ ಐದು ವರ್ಷಗಳ ಕಾಲ ನಿರ್ವಹಣೆಗೆ ಬೆಂಗಳೂರಿನ ಎನ್.ಕೆ. ಮೆಟಲ್‌ಶೀಟ್ ಸಂಸ್ಥೆಗೆ ಒಟ್ಟು 27 ಲಕ್ಷ ರೂಪಾಯಿಗೆ ಗುತ್ತಿಗೆ ನೀಡಲಾಗಿದೆ. ಈಗಾಗಲೇ ಶೌಚಗೃಹ ನಿರ್ಮಾಣ ಕಾರ್ಯ ಮುಗಿದಿದ್ದು, ನೀರಿನ ಸಂಪರ್ಕ ಮತ್ತು ಒಳಚರಂಡಿ ವ್ಯವಸ್ಥೆ ಸಂಪರ್ಕಗಳನ್ನು ಕಲ್ಪಿಸಲಾಗುತ್ತಿದೆ.

    ಬಯೋ ಡೈಜೆಸ್ಟರ್ ವ್ಯವಸ್ಥೆ: ಇ.ಪಿ. ಶೌಚಗೃಹಗಳು ಬಯೋ ಡೈಜೆಸ್ಟರ್ ವ್ಯವಸ್ಥೆ ಒಳಗೊಂಡಿವೆ. ಡೈಜೆಸ್ಟರ್ ವ್ಯವಸ್ಥೆಯಲ್ಲಿ ತ್ಯಾಜ್ಯ ಅದರಷ್ಟಕ್ಕೆ ಜೈವಿಕವಾಗಿ ವಿಲೇವಾರಿಯಾಗಲಿದೆ. ಇದಕ್ಕಾಗಿ ಬಯೋ ಡೈಜೆಸ್ಟರ್ ಶೌಚದ ಗುಂಡಿ ನಿರ್ಮಿಸಲಾಗುತ್ತದೆ. ಅದಕ್ಕೆ ಸೇರಿಸುವ ಇನಾಕ್ಯುಲಂ ಎಂಬ ಬ್ಯಾಕ್ಟೀರಿಯಾ ಕಲ್ಮಶ ಶುದ್ಧೀಕರಿಸುತ್ತದೆ. ಶೌಚಗೃಹದ ಸೇಫ್ಟಿ ಟ್ಯಾಂಕ್ ಒಳಗೆ ಇದನ್ನು ಸೇರಿಸುವುದರಿಂದ ಕಲ್ಮಶಗಳು ಶೇ.100ರಷ್ಟು ಕರಗಿ, ನೀರು ಮಾತ್ರ ಉಳಿಯುತ್ತದೆ. ಈ ನೀರು ವಾಸನೆಯೂ ಇರುವುದಿಲ್ಲ.

    ಸೂಚನಾ ದೀಪ: ಶೌಚಗೃಹದ ಹೊರಬಾಗಿಲಲ್ಲಿ ಹಸಿರು ಬಣ್ಣ ಇದ್ದರೆ ಬಳಕೆಗೆ ಮುಕ್ತ ಎಂದರ್ಥ. ಕೆಂಪು ಬಣ್ಣ ಇದ್ದರೆ ಒಳಗೆ ಇನ್ನೊಬ್ಬರು ಇದ್ದಾರೆ ಎಂಬುದನ್ನು ಸೂಚಿಸುತ್ತದೆ. ನೀರಿನ ಪ್ರಮಾಣ ಕಡಿಮೆ ಇದೆ ಅಥವಾ ಶೌಚಗೃಹ ಸ್ವಚ್ಛಗೊಳ್ಳುವ ಹಂತದಲ್ಲಿದ್ದರೆ ಹಳದಿ ಬಣ್ಣದ ದೀಪ ಉರಿಯುತ್ತದೆ. ಒಳಗಡೆ ಒಬ್ಬರು ಇದ್ದಾಗ ಹೊರಗಿನಿಂದ ನಾಣ್ಯ ಹಾಕಿದರೂ ಅದು ತೆಗೆದುಕೊಳ್ಳುವುದಿಲ್ಲ ಮತ್ತು ಬಾಗಿಲು ತೆರೆದುಕೊಳ್ಳುವುದಿಲ್ಲ. ವಿದ್ಯುತ್ ಸಂಪರ್ಕ ಕಡಿತವಾದರೆ ಯುಪಿಎಸ್ ವ್ಯವಸ್ಥೆಯಲ್ಲಿ ಇ.ಪಿ. ಶೌಚಗೃಹ ಕಾರ್ಯನಿರ್ವಹಿಸಲಿದೆ. ಕನಿಷ್ಠ ಐದು ತಾಸುಗಳ ಬ್ಯಾಕ್ ಅಪ್ ವ್ಯವಸ್ಥೆ ಇದೆ.

    ಉಡುಪಿ ನಗರದಲ್ಲಿ ಮೂರು ಕಡೆಗಳಲ್ಲಿ ಇಲೆಕ್ಟ್ರಾನಿಕ್ ಪಬ್ಲಿಕ್ ಟಾಯ್ಲೆಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಸದ್ಯ ವಿದ್ಯುತ್, ನೀರು ಮತ್ತು ಒಳಚರಂಡಿ ಸಂಪರ್ಕ ಕಾರ್ಯ ನಡೆಯುತ್ತಿದೆ. 15 ದಿನದಲ್ಲಿ ಬಾಕಿ ಕೆಲಸ ಪೂರ್ಣಗೊಂಡು ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ.
    -ಮೋಹನ್‌ರಾಜ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್, ಉಡುಪಿ ನಗರಸಭೆ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts