More

    ತ್ರೈಮಾಸಿಕ ಕಾರ್ಯನಿರ್ವಹಣೆ: ಮೇ.24 ಮತ್ತು 25ರಂದು ಹಲವೆಡೆ ಕರೆಂಟ್ ಇರಲ್ಲ

    ಮಂಡ್ಯ: ತ್ರೈಮಾಸಿಕ ಕಾರ್ಯನಿರ್ವಹಣೆ ಹಿನ್ನೆಲೆಯಲ್ಲಿ ಮೇ.24 ಹಾಗೂ 25ರಂದು ಬೆಳಗ್ಗೆ 9ಗಂಟೆಯಿಂದ ಸಂಜೆ 5ರವರೆಗೆ ತಾಲೂಕಿನ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
    ಜಿ.ಮಲ್ಲಿಗೆರೆ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಜಿ.ಮಲ್ಲಿಗೆರೆ, ಹೊನ್ನೆಮಡು, ಹುನಗನಹಳ್ಳಿ, ನಂಜೇನಹಳ್ಳಿ, ಮುತ್ತೆಗೆರೆ, ತಿಪ್ಪಾಪುರ, ಬುಂಡಾರೆಕೊಪ್ಪಲು, ಎಂ.ಹಟ್ನ, ಸಂಗಾಪುರ ಜವನಹಳ್ಳಿ, ಮಲ್ಲೇನಹಳ್ಳಿ, ಛತ್ರನಹಳ್ಳಿ , ಬಿಲ್ಲೇನಹಳ್ಳಿ, ಬಂಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.
    25ರಂದು ನಗರ ಪ್ರದೇಶಗಳಾದ ಗುತ್ತಲು, ಫ್ಯಾಕ್ಟರಿ ವೃತ್ತ, ಕೈಗಾರಿಕ ಬಡಾವಣೆಗಳು, ಎಂ.ಸಿ ರಸ್ತೆ, ತಾವರೆಗೆರೆ, ನೆಹರುನಗರ, ಉದಯಗಿರಿ, ಸಾದತ್ ಮೊಹಲ್ಲಾ, ಚನ್ನಯ್ಯ ಬಡಾವಣೆ, ಸಿದ್ದಾರ್ಥ ಬಡಾವಣೆ, ಬೆಂಗಳೂರು ಮುಖ್ಯರಸ್ತೆಯ ಹೆಬ್ಬಾಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಗ್ರಾಮಾಂತರ ಪ್ರದೇಶಗಳಾದ ಶ್ರೀನಿವಾಸಪುರ ಗೇಟ್, ಹನಕೆರೆ ಐ.ಪಿ ವ್ಯಾಪ್ತಿ, ಬಸವನಪುರ ಐ.ಪಿ. ವ್ಯಾಪ್ತಿ, ಬೂದನೂರು, ಬೂತನಹೊಸೂರು, ಚನ್ನಪ್ಪನ ದೊಡ್ಡಿ, ಹಂಬರಹಳ್ಳಿ, ತುಂಬಕೆರೆ ವಿದ್ಯುತ್ ವಿತರಣಾ ಕೇಂದ್ರದ ಗ್ರಾಮಾಂತರ ಪ್ರದೇಶಗಳಾದ ಹೊಡಾಘಟ್ಟ, ಕೀಲಾರ, ಹನಕೆರೆ, ಹಳೆ ಬೂದನೂರು, ಹೊಸಬೂದನೂರು, ಈಚಗೆರೆ, ಅಂಬರಹಳ್ಳಿ, ಆಲಕೆರೆ, ನಲ್ಲಹಳ್ಳಿ, ಕಚ್ಚಿಗೆರೆ, ಹೊನಗಾನಹಳ್ಳಿಮಠ, ತುಂಬಕೆರೆ, ಚಾಮಲಾಪುರ, ಉಮ್ಮಡಹಳ್ಳಿ, ಬಸವನಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳು ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts