More

    ವಿದ್ಯುತ್ ಕಂಬಕ್ಕೆ ಮರಳು ಸಾಗಣೆ ಟಿಪ್ಪರ್ ಡಿಕ್ಕಿ, ತಪ್ಪಿದ ಅನಾಹುತ

    ದೇವದುರ್ಗ: ಕೃಷ್ಣಾ ನದಿದಂಡೆಯಿಂದ ಮರಳು ಸಾಗಣೆ ಮಾಡುತ್ತಿರುವ ಟಿಪ್ಪರ್‌ಗಳು ತಾಲೂಕಿನಲ್ಲಿ ಒಂದಿಲ್ಲೊಂದು ಅವಘಡ ಮಾಡುತ್ತಿದ್ದು, ಸೋಮವಾರ ತಡರಾತ್ರಿ ತಾಲೂಕಿನ ಚಿಂಚೋಡಿ ಗ್ರಾಮದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ.

    ಮರಳು ತುಂಬಿಕೊಂಡು ಅತಿವೇಗದಿಂದ ಬಂದ ಟಿಪ್ಪರ್ ಗ್ರಾಮದ ಮುಖ್ಯರಸ್ತೆ ಪಕ್ಕದಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಕಂಬ ಅರ್ಧಕ್ಕೆ ಕಟ್ ಆಗಿ ಟಿಪ್ಪರ್ ಮೇಲೆ ಬಿದ್ದಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮದಲ್ಲಿ ವಿದ್ಯುತ್ ಪೂರೈಕೆ ಕಡಿತವಾಗಿ, ಗ್ರಾಮಸ್ಥರು ರಾತ್ರಿಯಿಡಿ ಜಾಗರಣೆ ಮಾಡುವಂತಾಯಿತು. ಈ ಹಿಂದೆ ಮರಳು ತುಂಬಿದ ಲಾರಿಗಳು ಅತಿವೇಗದ ಚಾಲನೆಯಿಂದ ಕುರಿಗಳ ಹಿಂಡಿನ ಮೇಲೆ ಹರಿದಿತ್ತು. ಇಂಥ ಘಟನೆಗಳು ಪದೇಪದೆ ನಡೆಯುತ್ತಿವೆ.

    ಆಕ್ರೋಶ: ಸಹಾಯಕ ಆಯುಕ್ತ ಸಂತೋಷ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಮರಳು ಸಮಿತಿ ಸಭೆಯಲ್ಲಿ ರಾತ್ರಿ ವೇಳೆ ಮರಳು ಸಾಗಣೆಗೆ ಅವಕಾಶ ನೀಡಬೇಡಿ. ಬೆ.6ರಿಂದ ಸಂಜೆ 6ರವರೆಗೆ ಮಾತ್ರ ಪರವಾನಗಿ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ, ಇಲ್ಲಿ ನಿಯಮ ಪಾಲನೆಯಾಗಿಲ್ಲ. ಹಗಲು ರಾತ್ರಿ ಎನ್ನದೆ ನದಿದಂಡೆಯಿಂದ ಮರಳು ಸಾಗಣೆ ಮಾಡಲಾಗುತ್ತಿದೆ. ಕೂಡಲೇ ರಾತ್ರಿ ವೇಳೆ ಮರಳು ಸಾಗಣೆಗೆ ಕಡಿವಾಣ ಹಾಕಿ, ಅತಿವೇಗದ ಚಾಲನೆ ನಿಯಂತ್ರಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts