More

    ಮುರಡಿ ಗ್ರಾಪಂಗೆ ಚುನಾವಣೆ

    ಮುಂಡರಗಿ: ತಾಲೂಕಿನ ಮುರಡಿ ವ ಮುರಡಿ ತಾಂಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ 14 ಸ್ಥಾನಗಳಿಗೆ ಭಾನುವಾರ ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ ಜರುಗಿ, ಶೇ. 86.74ರಷ್ಟು ಮತದಾನವಾಗಿದೆ.

    ಬೆಳಗ್ಗೆ 7 ರಿಂದಲೇ ಮತದಾನ ಪ್ರಕ್ರಿಯೆ ಶುರುವಾದರೂ ಪ್ರಾರಂಭದಲ್ಲಿ ನಿಧಾನಗತಿ ಸಾಗಿ 9 ಗಂಟೆ ನಂತರ ಚುರುಕುಗೊಂಡಿತು. ಜಿಟಿಜಿಟಿ ಮಳೆ ನಡುವೆಯೂ ಮತದಾರರು ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಮುರಡಿ, ಮುರಡಿ ತಾಂಡಾ (ಮಾರುತಿ ನಗರ), ಚಿಕ್ಕವಡ್ಡಟ್ಟಿ, ಗುಡ್ಡದಬೂದಿಹಾಳ ಗ್ರಾಮಗಳಲ್ಲಿ ಒಟ್ಟು 6 ಮತಗಟ್ಟೆ ಸ್ಥಾಪಿಸಲಾಗಿತ್ತು.

    ಮತಗಟ್ಟೆಗೆ ಕೆಲವಡೆ ವೃದ್ಧರು ನಡೆದುಕೊಂಡು ಮತ ಚಲಾಯಿಸಿದರೆ, ನಡೆಯಲು ಸಾಧ್ಯವಾಗದ ವೃದ್ಧರು ವೀಲ್‌ಚೇರ್ ಸಹಾಯದಿಂದ ಮತಗಟ್ಟೆಯೊಳಗೆ ಹೋಗಿ ಮತ ಹಾಕಿದರು.

    ಬಹುತೇಕ ಕಡೆಗಳಲ್ಲಿ ಮತಗಟ್ಟೆಗೆ ಹೋಗುವ ದಾರಿ ಬದಿಯಲ್ಲಿ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ನಿಂತುಕೊಂಡು ಕೈ ಮುಗಿದು ಮತ ಹಾಕುವಂತೆ ಮನವಿ ಮಾಡಿಕೊಳ್ಳುತ್ತಿರುವುದು ಕಂಡುಬಂತು.

    ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡರ ಅವರು ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಚುನಾವಣಾ ಅಧಿಕಾರಿಯಾಗಿ ದುರ್ಗಾಪ್ರಸಾದ ಡಿ. ಕಾರ್ಯನಿರ್ವಹಿಸಿದರು. ಪ್ರತಿ ಮತಗಟ್ಟೆಗೆ ಸೂಕ್ತ ಸಿಬ್ಬಂದಿ ಹಾಗೂ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts