More

    ಜಿಲ್ಲಾ, ತಾಲೂಕು ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿ ನಿರ್ಣಯ: 24ರೊಳಗೆ ಆಕ್ಷೇಪಣೆ ಸಲ್ಲಿಸಲು ಡಿಸಿ ಸೂಚನೆ

    ದಾವಣಗೆರೆ: ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದಿಂದ 2011ರ ಜನಗಣತಿಯನ್ವಯ ಜನಸಂಖ್ಯೆ ಆಧರಿಸಿ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರ ಸ್ಥಾನಗಳ ವ್ಯಾಪ್ತಿಯನ್ನು ಮರು ನಿಗದಿಪಡಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳಿದ್ದರೆ ಜುಲೈ 24ರೊಳಗೆ ಲಿಖಿತವಾಗಿ ಸಲ್ಲಿಸಲು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ 2011ರ ಜನಗಣತಿಯಂತೆ 1024705 ಗ್ರಾಮೀಣ ಜನಸಂಖ್ಯೆಯಿದ್ದು, 98 ತಾಲೂಕು ಪಂಚಾಯಿತಿ ಮತ್ತು 29 ಜಿಲ್ಲಾ ಪಂಚಾಯಿತಿ ಸದಸ್ಯ್ಕ ಸ್ಥಾನಗಳಿವೆ.

    ತಾಲೂಕುವಾರು ಗ್ರಾಮೀಣ ಜನಸಂಖ್ಯೆ: ನ್ಯಾಮತಿ ತಾಲೂಕಿನಲ್ಲಿ 75846 ಗ್ರಾಮೀಣ ಜನಸಂಖ್ಯೆಯಿದ್ದು, 9 ತಾಪಂ ಹಾಗೂ 2 ಜಿಪಂ ಸದಸ್ಯ ಸ್ಥಾನ. ಹೊನ್ನಾಳಿ 125957 ಜನಸಂಖ್ಯೆ ಹೊಂದಿದ್ದು 13 ತಾಪಂ, 4 ಜಿಪಂ ಸ್ಥಾನ.

    ಹರಿಹರ 140355 ಜನಸಂಖ್ಯೆಗೆ 15 ತಾಪಂ, 4 ಜಿಪಂ ಸ್ಥಾನ. ಜಗಳೂರು 154565 ಜನಸಂಖ್ಯೆಗೆ 16 ತಾಪಂ, 4 ಜಿಪಂ ಸ್ಥಾನ. ದಾವಣಗೆರೆ 247008 ಜನಸಂಖ್ಯೆಗೆ 21 ತಾಪಂ ಮತ್ತು 7 ಜಿಪಂ ಸ್ಥಾನ ಹಾಗೂ ಚನ್ನಗಿರಿ ತಾಲೂಕಿನಲ್ಲಿ 281004 ಗ್ರಾಮೀಣ ಜನಸಂಖ್ಯೆಗೆ 24 ತಾಪಂ ಮತ್ತು 8 ಜಿಲ್ಲಾ ಪಂಚಾಯಿತಿ ಸ್ಥಾನ ನಿಗದಿ ಮಾಡಲಾಗಿದೆ.

    ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೀಮಾ ನಿರ್ಣಯ ನಿರ್ಧರಿಸುವ ಕುರಿತು ಸಲಹೆ, ಸೂಚನೆ ಮತ್ತು ಆಕ್ಷೇಪಣೆಗಳಿದ್ದಲ್ಲಿ ಸಂಬಂಧಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ತಹಸೀಲ್ದಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅಥವಾ ಜಿಲ್ಲಾಧಿಕಾರಿಗೆ ಜು.24ರ ಸಂಜೆ 5 ಗಂಟೆಯೊಳಗೆ ಸಲ್ಲಿಸಲು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts