More

    ಚಿನಕುರಳಿ ಹಾಲು ಉತ್ಪಾದಕರ ಸಂಘಕ್ಕೆ ಜೆಡಿಎಸ್ ಬೆಂಬಲಿತರ ಆಯ್ಕೆ

    ಪಾಂಡವಪುರ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಸ್ವಗ್ರಾಮ ಚಿನಕುರಳಿ ಹಾಲು ಉತ್ಪಾದಕರ ಸಹಕಾರ ಸಂಘ ಜೆಡಿಎಸ್ ಬೆಂಬಲಿತರ ಪಾಲಾಗಿದೆ.

    ಡೇರಿ ಆಡಳಿತ ಮಂಡಳಿಯ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಭಾನುವಾರ ನೂತನ ಆಡಳಿತ ಮಂಡಳಿ ಆಯ್ಕೆಗೆ ಚುನಾವಣೆ ನಿಗದಿಯಾಗಿತ್ತು. ಒಟ್ಟು 12 ಸ್ಥಾನಗಳ ಪೈಕಿ ಪರಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಹೇಮಾ ಪುಟ್ಟಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದಂತೆ 11 ಸ್ಥಾನಗಳಿಗೆ ನಡೆದಿದ್ದ ಚುನವಣೆಯಲ್ಲಿ ಜೆಡಿಎಸ್ ಬೆಂಬಲಿತರು 11 ಸ್ಥಾನಗಳಿಗೂ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ಮತ್ತು ರೈತಸಂಘ ಬೆಂಬಲಿತರು 7 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರು. ಈ ಪೈಕಿ ಎಲ್ಲ 11 ಸ್ಥಾನಗಳಲ್ಲೂ ಜೆಡಿಎಸ್ ಬೆಂಬಲಿತರು ಜಯಗಳಿಸಿದ್ದಾರೆ. ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ನಿರ್ಮಲಾ ಘೋಷಿಸಿದರು.

    ಚುನಾಯಿತ ನಿರ್ದೇಶಕರು : ಒಟ್ಟು ಚಲಾವಣೆಗೊಂಡ 368 ಮತಗಳ ಪೈಕಿ ಜೆಡಿಎಸ್ ಬೆಂಬಲಿತರಾಗಿ ಸಾಮಾನ್ಯ ವರ್ಗದಿಂದ ಸ್ಪರ್ಧಿಸಿದ್ದ ಸಿ.ಶಿವಕುಮಾರ್(311), ಸಿ.ಎಂ.ರಮೇಶ್(285), ಸಿ.ಎಸ್.ಲೋಕೇಶ್(284), ಸಿ.ಎ.ಮಂಜುನಾಥ್(283), ಕೆಂಪೇಗೌಡ(282), ವರದರಾಜು(272), ಸಿ.ಆರ್.ರಮೇಶ್(268) ಮತಗಳಿಸಿದರೆ ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ವರಲಕ್ಷ್ಮೀ ಸೋಮಶೇಖರ್(275), ಯಶೋದಮ್ಮ(264) ಹಾಗೂ ಬಿ ಕ್ಯಾಟಗರಿಯಿಂದ ಲಿಂಗಾಪುರ ಯೋಗೇಂದ್ರ(255) ಎ ಕ್ಯಾಟಗರಿಯಿಂದ ನಾರಾಯಣಚಾರಿ(273) ಮತ ಪಡೆದು ಗೆಲುವಿನ ನಗೆ ಬೀರಿದರು.

    ಮೈತ್ರಿಕೂಟ ಅಭ್ಯರ್ಥಿಗಳು ಪಡೆದ ಮತ : ಕಾಂಗ್ರೆಸ್ ಮತ್ತು ರೈತಸಂಘ ಬೆಂಬಲಿತರಾಗಿ ಸ್ಪರ್ಧಿಸಿದ್ದ ಸಿ,ಕೆ.ಪುಟ್ಟೇಗೌಡ 121, ಸಿ.ಎಲ್.ರಾಜು 94, ಶೀಲಾ ಕುಮಾರ್ 78, ಪೂರ್ಣಿಮ ನಾರಾಯಣ 96, ಲಲಿತಾ ಅಶೋಕ್ 71 ಹಾಗೂ ಭಾರತಿ ಕುಮಾರ್ 96 ಮತ ಪಡೆದು ಹೀನಾಯ ಸೋಲು ಕಂಡರು.

    ನೂತನ ನಿರ್ದೇಶಕರ ಆಯ್ಕೆಯಾಗುತ್ತಿದ್ದಂತೆ ಜೆಡಿಎಸ್ ಬೆಂಬಲಿಗರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು. ನೂತನ ನಿರ್ದೇಶಕರನ್ನು ಅಭಿನಂದಿಸಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಉತ್ತಮವಾಗಿ ಕೆಲಸ ನಿರ್ವಹಿಸುವಂತೆ ಸಲಹೆ ನೀಡಿದರು. ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಅಶೋಕ್, ಮೈಕ್ ಮಹದೇವ, ಸಿ.ಎಸ್.ಗೋಪಾಲ, ಸಿ.ಎ.ಲೋಕೇಶ್, ತಮ್ಮಣ್ಣ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸಿ.ಪ್ರಕಾಶ್, ಜೆಡಿಎಸ್ ಮುಖಂಡರಾದ ರಾಮಕೃಷ್ಣೇಗೌಡ, ಗ್ರಾಪಂ ಅಧ್ಯಕ್ಷ ಪಾಪಣ್ಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts