More

    ಬೊಮ್ಮಾಯಿ ನೇತೃತ್ವದಲ್ಲೇ ಎಲೆಕ್ಷನ್​, ಪಠ್ಯದಲ್ಲಿ ಹೆಡಗೆವಾರ್ ವಿಷಯ ಯಾಕೆ ಸೇರ್ಪಡೆ ಆಗಬಾರದು: ಸಿ.ಟಿ. ರವಿ

    ಕಲಬುರಗಿ: ರಾಜ್ಯದ ಹೈಸ್ಕೂಲ್ ಪಠ್ಯಪುಸ್ತಕದಲ್ಲಿ ಆರ್ ಎಸ್ಎಸ್ ಮುಖ್ಯಸ್ಥರಾಗಿದ್ದ ಕೇಶವ ಬಲಿರಾಮ ಹೆಡಗೆವಾರ್ ಅವರ ಭಾಷಣವನ್ನು ಪಠ್ಯವಾಗಿ ಯಾಕೆ ಸೇರಿಸಬಾರದು, ಸೇರ್ಪಡೆಯಾದರೆ ತಪ್ಪೇನು ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ‌ಸಿ.ಟಿ. ರವಿ ಪ್ರಶ್ನಿಸಿದರು.

    ನಗರದಲ್ಲಿ ಸೋಮವಾರ ಪತ್ರಕರ್ತರರೊಂದಿಗೆ ಮಾತನಾಡಿ, ಅವರು ರಾಷ್ಟ್ರವಾದಿಯಾಗಿದ್ದರು. ಇಲ್ಲಿಯವರೆಗೆ ಆಳ್ವಿಕೆ ನಡೆಸಿದ್ದ ಕಾಂಗ್ರೆಸ್ ಹಾಗೂ ಎಡಪಂಥೀಯರು ರಾಷ್ಟ್ರೀಯ ವಿಚಾರಧಾರೆಗಳನ್ನು ಮುಚ್ಚಿಟ್ಟಿದ್ದರು. ನಾವು ಈಗ ಮಕ್ಕಳಿಗೆ ತಿಳಿಸುತ್ತಿದ್ದೇವೆ ಎಂದರು.

    ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ: ತ್ರಿಪುರಾದಲ್ಲಿ ಬದಲಾವಣೆಯಾದಂತೆ ಕರ್ನಾಟಕದಲ್ಲಿಯೂ ಮುಖ್ಯಮಂತ್ರಿ ಬದಲಾವಣೆ ‌ಆಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರವಿ, ಮುಂದಿ‌ನ ವಿಧಾನಸಭೆ ಚುನಾವಣೆ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಯಲಿದೆ. ಇದರಲ್ಲಿ ಯಾವುದೇ ಗೊಂದಲ ಬೇಡ. ಸಚಿವ ಸಂಪುಟ ವಿಸ್ತರಣೆ ಮಾಡಬೇಕೋ ಬೇಡವೋ‌ ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದರು.

    ಪಿಐಎಲ್ ಹೋಗಲಿ: ಪಿಎಸ್ಐ ‌ಅಕ್ರಮ ನೇಮಕಾತಿಯ ತನಿಖೆ ಬಗ್ಗೆ ವಿರೋಧ ಪಕ್ಷದವರಿಗೆ ತೃಪ್ತಿ ಇಲ್ಲದಿದ್ದರೆ ಅವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಿ. ನಾವು ಯಾರನ್ನೂ ಬಿಟ್ಟಿಲ್ಲ. ಇಲ್ಲಿಯವರೆಗೆ 200ಕ್ಕೂ ಹೆಚ್ಚು ಜನರನ್ನು ವಿಚಾರಣೆ ಮಾಡಿದ್ದೇವೆ. 40 ಜನರನ್ನು ವಶಕ್ಕೆ ಪಡೆದಿದ್ದೇವೆ ಎಂದರು.

    ಈ ವೇಳೆ ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ‌ಪಾಟೀಲ ರೇವೂರ, ಶಾಸಕರಾದ ಬಸವರಾಜ ಮತ್ತಿಮೂಡ, ಸುಭಾಷ್ ಗುತ್ತೇದಾರ, ಶಶೀಲ್ ಜಿ. ನಮೋಶಿ ಇದ್ದರು.(ದಿಗ್ವಿಜಯ ನ್ಯೂಸ್​)

    ಕುಡುಕ ಪ್ಯಾಸೆಂಜರ್​​ನ ಅವಾಂತರದಿಂದ ಮಾರ್ಗ ಬದಲಿಸಿದ ವಿಮಾನ!

    8ನೇ ಮಹಡಿಯಲ್ಲಿ ನೇತಾಡುತ್ತಿದ್ದ ಮಗುವಿನ ರಕ್ಷಣೆ ಮಾಡಿದ ಯುವಕನ ಧೈರ್ಯಕ್ಕೆ ಭಾರೀ ಮೆಚ್ಚುಗೆ: ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts