More

    ಚುನಾವಣಾ ಹಬ್ಬದಲ್ಲಿ ಪ್ರತಿಯೊಬ್ಬರು ಹಕ್ಕು ಚಲಾಯಿಸಿ

    ಗಂಗಾವತಿ: ಮತದಾನದ ಮಹತ್ವದ ಕುರಿತು ತಾಲೂಕಾದ್ಯಂತ ಅಭಿಯಾನದ ಮೂಲಕ ಜನರಲ್ಲಿ ತಿಳಿವಳಿಕೆ ಮೂಡಿಸಲಾಗುತ್ತಿದೆ ಎಂದು ತಾಪಂ ಇಒ ಮಹಾಂತಗೌಡ ಪಾಟೀಲ್ ಹೇಳಿದರು.

    ಮತದಾನ ಜಾಗೃತಿ ಅಭಿಯಾನ

    ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ತಾಲೂಕು ಸ್ವೀಪ್ ಸಮಿತಿ, ತಾಪಂ ಮತ್ತು ಗ್ರಾಪಂ ಶುಕ್ರವಾರ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. ಮತದಾನ ಜಾಗೃತಿ ಮೂಡಿಸಲು ಬೈಕ್ ರ‌್ಯಾಲಿ ಸೇರಿ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

    ನಮ್ಮ ಮತ, ನಮ್ಮ ಹಕ್ಕು

    ನಮ್ಮ ಮತ, ನಮ್ಮ ಹಕ್ಕು ಆಗಿದ್ದು, ಎಲ್ಲರೂ ಕಡ್ಡಾಯವಾಗಿ ಚಲಾಯಿಸಬೇಕು. ಮೇ 10 ರಂದು ನಡೆಯುವ ಚುನಾವಣಾ ಹಬ್ಬದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಮತ ಚಲಾಯಿಸಬೇಕು. ಮತಗಟ್ಟೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದರು. ಕಡ್ಡಾಯ ಮತದಾನದ ಬಗ್ಗೆ ಸಿಬ್ಬಂದಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

    ಯಾವುದೇ ಆಮಿಷಕ್ಕೆ ಒಳಗಾಗಬಾರದು

    ಇದಕ್ಕೂ ಮುನ್ನ ಜಾಗೃತಿ ಬೈಕ್ ರ‌್ಯಾಲಿಗೆ ನಗರ ಪಿಐ ಅಡಿವೇಶನ್ ಎನ್.ಗುದಿಗೊಪ್ಪ ಚಾಲನೆ ನೀಡಿದರು. ವಿಧಾನಸಭಾ ಚುನಾವಣೆಯಲ್ಲಿ ಶೇ.100 ಮತದಾನ ಆಗಬೇಕು. ಯಾವುದೇ ಆಮಿಷಕ್ಕೆ ಒಳಗಾಗಬಾರದು. ನೆಪ ಹೇಳಿ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಬಾರದು ಎಂದರು.

    ನಗರದಿಂದ ಆರಂಭವಾದ ಬೈಕ್ ರ‌್ಯಾಲಿ ಶ್ರೀರಾಮನಗರ, ಹೊಸಕೇರಾ, ಜಂಗಮರ ಕಲ್ಗುಡಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸಂಚರಿಸಿತು. ರ‌್ಯಾಲಿಯಲ್ಲಿ ಮತದಾನ ಜಾಗೃತಿ ಗೀತೆಗಳ ಗಾಯನ ಹಮ್ಮಿಕೊಳ್ಳಲಾಗಿತ್ತು.


    ತಾಪಂ ಸಹಾಯಕ ನಿರ್ದೇಶಕರಾದ ಸುರೇಶ ಉಪ್ಪಾರ್, ನಾಗೇಶ ಕುರ್ಡಿ, ಪಿಡಿಒಗಳಾದ ಬಸವರಾಜ ನಾಯಕ, ಮಲ್ಲಿಕಾರ್ಜುನ ಕಡಿವಾಳ, ವತ್ಸಲಾ, ಶರಣಮ್ಮ, ಕೃಷ್ಣಪ್ಪ, ಕಾಶಿನಾಥ ಹಂಚಿನಾಳ, ರವಿಶಾಸ್ತ್ರಿ, ಕಿರಣ್ ಕುಮಾರ್, ಕೃಷ್ಣ, ಲಕ್ಷ್ಮೀಬಾಯಿ, ಜುಬೇರ್ ಅಹ್ಮದ್ ನಾಯ್ಕ, ವಿಷಯ ನಿರ್ವಾಹಕ ಶ್ರೀನಿವಾಸ, ಭೀಮಣ್ಣ, ರಮೇಶ ಇತರರಿದ್ದರು.


    ಇದನ್ನೂ ಓದಿ: ಸುಳ್ಳು ಹೇಳಿ ಮತದಾರರಿಗೆ ವಂಚನೆ matadararige mosa

    ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts