More

    ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ

    ಕೊರಟಗೆರೆ: ಕಾಂಗ್ರೆಸ್ ಹಿರಿಯ ಧುರೀಣ ಡಾ.ಜಿ.ಪರಮೇಶ್ವರ್, ಸ್ವಕ್ಷೇತ್ರ ಕೊರಟಗೆರೆಗೆ ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರೆಸಿ ಬೃಹತ್ ಸಮಾವೇಶ ನಡೆಸುವ ಮೂಲಕ ಭಾನುವಾರ ಶಕ್ತಿ ಪ್ರದರ್ಶನ ನಡೆಸಿದರು.

    ತಾಲೂಕು ಮಟ್ಟದಲ್ಲಿ ನಿರ್ಮಿಸಿರುವ ಪಕ್ಷದ ಕಚೇರಿ ಉದ್ಘಾಟನೆಗೆ ಎಐಸಿಸಿ ಅಧ್ಯಕ್ಷರು ಆಗಮಿಸಿದ ಉದಾಹರಣೆ ಕಡಿಮೆ. ಆದರೆ, ಕಾಂಗ್ರೆಸ್ ಪಾಳಯದಲ್ಲಿ ಡಾ.ಜಿ.ಪರಮೇಶ್ವರ್ ಅವರಿಗಿರುವ ಪ್ರಭಾವದಿಂದ ಖರ್ಗೆ ಆಗಮಿಸಿ ಪರಮೇಶ್ವರ್‌ಗೆ ಬಲ ತುಂಬಿದರು.

    ಸಾವಿರಾರು ಸಂಖ್ಯೆಯಲ್ಲಿ ಸಮಾವೇಶಗೊಂಡಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಬಿಜೆಪಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಸಂವಿಧಾನ ದುರುಪಯೋಗ ಮಾಡಿಕೊಂಡು ಎಲ್ಲೆಡೆಯೂ ಅವರ ಸರ್ಕಾರ ತರುವುದನ್ನೇ ಗುರಿಯಾಗಿಸಿಕೊಂಡಿದ್ದಾರೆ ಎಂದು ದೂರಿದರು.

    ನನ್ನ ರಾಜಕೀಯ ಜೀವನದಲ್ಲಿ ಇಂತಹ ಪ್ರಧಾನಿಯನ್ನು ನೋಡಿಲ್ಲ, ದೇಶದ ಅಭಿವೃದ್ಧಿ ಬಗ್ಗೆ ಚಿಂತಿಸದೆ ನಮ್ಮನ್ನು ಟೀಕಿಸುವುದನ್ನೇ ಕೆಲಸವಾಗಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ 40 ಪರ್ಸೆಂಟ್ ಭ್ರಷ್ಟಾಚಾರದ ಸಾಕ್ಷೃಗಳು ಸಿಕ್ಕಿವೆ. ಆದರೆ, ಈ ಬಗ್ಗೆ ಮಾತನಾಡಬೇಕು ಎಂದು ಹರಿಹಾಯ್ದರು.

    ಕಾಂಗ್ರೆಸ್ ವಿರುದ್ಧ ನಿರಂತರವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ನರೇಂದ್ರಮೋದಿ ಆಡಳಿತಕ್ಕೆ ಬರುವ ಮುಂಚೆ ದೇಶದಲ್ಲಿ ಏನೂ ಇರಲಿಲ್ಲ, ನಾವೇ ಬಂದು ಮಾಡಿಕೊಟ್ಟಿದ್ದು ಎಂದು ಮಾತನಾಡಲಾರಂಭಿಸಿದ್ದಾರೆ. ಆದರೆ, ಮಾಡದ ಕೆಲಸದ ಬಗ್ಗೆ ಹೇಳಕೊಳ್ಳಲು ನಾಚಿಕೆಯಾಗುವುದಿಲ್ಲವೇ ಎಂದು ಟೀಕಿಸಿದರು. ಸೂಜಿಯೂ ತಯಾರಿಸದ ದೇಶದಲ್ಲಿ ರಾಕೆಟ್ ತಯಾರಿಸುವ ಕೆಲಸ ಮಾಡಿದ್ದು ಕಾಂಗ್ರೆಸ್ ಸರ್ಕಾರ, ದೇಶದಲ್ಲಿ ಶಿಕ್ಷಣ, ಕೈಗಾರಿಕೆ, ಮೂಲ ಸೌಕರ್ಯಗಳ ಕ್ಷೇತ್ರದಲ್ಲಿ ಸಾಧನೆಗೆ ಕಾಂಗ್ರೆಸ್ ಕಾರಣ ಎಂದರು.

    ವಿರೋಧ ಪಕ್ಷದ ನಾಯಕರಾದ ಬಿ.ಕೆ ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕೇಂದ್ರ ಸಚಿವ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಅಲಂ ವೀರಭದ್ರಪ್ಪ, ರಾಣಿಸತೀಶ್, ಟಿ.ಬಿ.ಜಯಚಂದ್ರ, ಎಚ್.ಆಂಜನೇಯ, ಮಾಜಿ ಸಂಸದ ಚಂದ್ರಪ್ಪ, ವಿ.ಎಸ್.ಉಗ್ರಪ್ಪ, ಪಾವಗಡ ಶಾಸಕ ವೆಂಕಟರಮಣ್ಣಪ್ಪ, ಮಾಜಿ ಶಾಸಕ ಕೆ.ಎನ್.ರಾಜಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ಕೌಶಲಾಭಿವೃದ್ಧಿ ನಿಮಗದ ಮಾಜಿ ಅಧ್ಯಕ್ಷ ಮುರಳೀಧರ್ ಹಾಲಪ್ಪ, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಕೊರಟಗೆರೆ ನಗರ ಅಧ್ಯಕ್ಷ ಅಶ್ವತ್ಥನಾರಾಯಣ, ಗ್ರಾಮಾಂತರ ಅಧ್ಯಕ್ಷ ಅರಕೆರೆ ಶಂಕರ, ಮಹಿಳಾ ಅಧ್ಯಕ್ಷ ಜಯಮ್ಮ, ಯುವ ಅಧ್ಯಕ್ಷ ವಿನಯ್ ಕುಮಾರ್ ಇತರರಿದ್ದರು.

    ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ

    ನಾನು ಬಿಸಿಲಿನಲ್ಲಿ ನಿಂತಿದ್ದು ಕಂಡಿದೆ, ನಮ್ಮ ನಿರ್ಣಯಗಳು ಕಾಣಿಸಿಲ್ಲ!: ನಾವು ಕಾಂಗ್ರೆಸ್ ರಾಷ್ಟ್ರೀಯ ಅಧಿವೇಶನದಲ್ಲಿ ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಆದರೆ, ಪ್ರಧಾನಿ ನರೇಂದ್ರ ಮೋದಿಗೆ ಕಂಡಿದ್ದು ನನ್ನ ತಲೆಯ ಮೇಲೆ ಕೊಡೆ ಇರಲಿಲ್ಲ ಎಂಬುದಷ್ಟೇ ಎಂದು ಇತ್ತೀಚೆಗೆ ಪ್ರಧಾನಿ ಅವರು ಪ್ರಸ್ತಾಪಿಸಿದ್ದ ವಿಷಯದ ಬಗ್ಗೆ ಖರ್ಗೆ ಪ್ರತ್ಯುತ್ತರ ಕೊಟ್ಟರು. ತುಮಕೂರಿನಲ್ಲಿ ಎಚ್‌ಎಂಟಿ ಆರಂಭಿಸಿದ್ದು ಕಾಂಗ್ರೆಸ್, ಈಗ ಎಚ್‌ಎಎಲ್ ನೀಡಿದ್ದು ಯುಪಿಎ ಸರ್ಕಾರ. ಆದರೆ, ನಾವು ಮಾಡಿದ್ದು ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಿದ್ದಾರೆ. ದೇಶದಲ್ಲಿ ನರೇಂದ್ರಮೋದಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ, ಮೋದಿ, ಷಾ ಜೋಡಿ ಮಾತ್ರ ಕಾಂಗ್ರೆಸ್ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ಅವರ ಪ್ರಕಾರ ದೇಶಕ್ಕೆ 2014ರಲ್ಲಿ ಸ್ವಾತಂತ್ರ್ಯ ಬಂದಿದೆ, 1947ರಿಂದ ಸ್ವಾತಂತ್ರ್ಯ ಬಂದಿರುವ ಬಗ್ಗೆ ಅವರಿಗೆ ಅರಿವೇ ಇಲ್ಲ ಎಂದು ಟೀಕಿಸಿದರು.

    ಅಚ್ಚರಿ ಮೂಡಿಸಿದ ಸಿದ್ದರಾಮಯ್ಯ ಗೈರು!: ಎಐಸಿಸಿ ಅಧ್ಯಕ್ಷರು ಭಾಗವ ಹಿಸಿದ್ದ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಗೈರಿನ ಬಗ್ಗೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಗುಸುಗುಸು ಕೇಳಿಬಂತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿಡಬ್ಲೂೃಸಿ ಸದಸ್ಯ ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿ ಪಕ್ಷದ ಪ್ರಮುಖ ನಾಯಕರು ಭಾಗವಹಿಸಿದ್ದರು. ಅರಸೀಕೆರೆ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸುವ ಕಾರಣ ಸಿದ್ದರಾಮಯ್ಯ ಬಂದಿಲ್ಲ ಎಂದು ಪರಮೇಶ್ವರ್ ಆಪ್ತರು ಸ್ಪಷ್ಟನೆ ನೀಡಿದರಾದರೂ ವಿಶ್ಲೇಷಣೆಗಳು ಮಾತ್ರ ತರಹೇವಾರಿಯಾಗಿವೆ.

    ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ

    ಬಿಜೆಪಿ ಮುಖಂಡರು ಮೌನ: ಯುಪಿಎ ಸರ್ಕಾರದಲ್ಲಿ ಇಂಧನ ಬೆಲೆ ಪೈಸೆ ಹೆಚ್ಚಾದರೂ ಬೀದಿಯಲ್ಲಿ ಬಂದು ಬಾಯಿಬಡಿದುಕೊಳ್ಳುತ್ತಿದ್ದ ಬಿಜೆಪಿ ಮುಖಂಡರು ಇಂದು ಮೌನವಾಗಿದ್ದಾರೆ. ಪೆಟ್ರೋಲ್ ಬಂಕ್‌ಗಳಲ್ಲಿ ಮೋದಿ ೆಟೋ, ನಟರನ್ನೂ ಮೀರಿಸುವಂತೆ ಜಾಹೀರಾತು ನೀಡುವ ಮೋದಿಗೆ ಜನರು ಅಧಿಕಾರ ಏಕೆ ಕೊಟ್ಟಿದ್ದಾರೆ ಎಂಬುದೇ ಅರಿವಿಲ್ಲ ಎಂದರು.ಬಿಜೆಪಿ ಮುಖಂಡರು ಮೌನ
    ಯುಪಿಎ ಸರ್ಕಾರದಲ್ಲಿ ಇಂಧನ ಬೆಲೆ ಪೈಸೆ ಹೆಚ್ಚಾದರೂ ಬೀದಿಯಲ್ಲಿ ಬಂದು ಬಾಯಿಬಡಿದುಕೊಳ್ಳುತ್ತಿದ್ದ ಬಿಜೆಪಿ ಮುಖಂಡರು ಇಂದು ಮೌನವಾಗಿದ್ದಾರೆ. ಪೆಟ್ರೋಲ್ ಬಂಕ್‌ಗಳಲ್ಲಿ ಮೋದಿ ೆಟೋ, ನಟರನ್ನೂ ಮೀರಿಸುವಂತೆ ಜಾಹೀರಾತು ನೀಡುವ ಮೋದಿಗೆ ಜನರು ಅಧಿಕಾರ ಏಕೆ ಕೊಟ್ಟಿದ್ದಾರೆ ಎಂಬುದೇ ಅರಿವಿಲ್ಲ ಎಂದರು.

    ಸಂಸ್ಥೆಗಳ ದುರುಪಯೋಗ: ತುಮಕೂರಿನಲ್ಲಿ ಕೆ.ಮಲ್ಲಣ್ಣ ಸಂಸದರಾಗಿದ್ದಾಗ ಕೊರಟಗೆರೆಯ ಅಕ್ಕಿರಾಂಪುರದಲ್ಲಿ ಹೈಸ್ಕೂಲ್, ಅಕ್ಕಿಗಿರಣಿ, ಕೆ.ಲಕ್ಕಪ್ಪ ಸಂಸದರಾಗಿದ್ದಾಗ ಎಚ್‌ಎಂಟಿ ಕಾರ್ಖಾನೆ, ದೇವರಾಜ ಅರಸು ಕಾಲದಲ್ಲಿ ಹೇಮಾವತಿ, ಸಿದ್ದರಾಮಯ್ಯ ಕಾಲದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಮಾಡಿದ್ದೇವೆ. ಆದರೆ, ನಿಮ್ಮ ಸಾಧನೆ ಏನು ಎಂದು ಬಿಜೆಪಿಗೆ ಪ್ರಶ್ನಿಸಿದರು. ದೇಶದಲ್ಲಿ ಭ್ರಷ್ಟರಿಗಷ್ಟೇ ರಕ್ಷಣೆ, ಸಣ್ಣ-ಪುಟ್ಟ ಜನರಿಗೆ ಸರ್ಕಾರದ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಬೆದರಿಸುತ್ತಿದ್ದಾರೆ. ಬಿಜೆಪಿ ಶಾಸಕರ ಮನೆಗಳಲ್ಲಿ ಕೋಟಿ ಕೋಟಿ ರೂ. ಹಣ ಸಿಗುತ್ತಿದೆ, ಈಗ ಎಲ್ಲಿವೆ ನಿಮ್ಮ ಇಡಿ, ಐಟಿ, ಸಿಬಿಐ ಎಂದು ಪ್ರಶ್ನಿಸಿದರು. ಬಹುಮತ ಇಲ್ಲದ ರಾಜ್ಯಗಳಲ್ಲಿ ವಾಮಮಾರ್ಗದಲ್ಲಿ ಬಿಜೆಪಿ ಸರ್ಕಾರಗಳನ್ನು ರಚಿಸಲು ಇಂತಹ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಭ್ರಷ್ಟ ಸರ್ಕಾರಗಳನ್ನು ಕಿತ್ತೊಗೆಯಲು ಕಾರ್ಯಕರ್ತರು ಪ್ರಚಾರ ನಡೆಸಬೇಕು ಎಂದು ಕರೆ ನೀಡಿದರು.

    ಕ್ಷೇತ್ರದಲ್ಲಿ ಡಾ.ಜಿ.ಪರಮೇಶ್ವರ್ ಮಾಡಿರುವ ಅಭಿವೃದ್ಧಿ ಹೆಜ್ಜೆ ಗುರುತು ಮೂಡಿಸಿದೆ. ಪರಮೇಶ್ವರ್ ಸರಳತೆ ಗಮನಿಸಿದ್ದ ಸೋನಿಯಾಗಾಂಧಿ ಸತತ 8 ವರ್ಷ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದ್ದರು. ನಮ್ಮಂಥ ಹತ್ತಾರು ಜನ ನಾಯಕರನ್ನು ಬೆಳೆಸುವ ನಾಯಕತ್ವ ಗುಣ ಅವರಿಗಿದೆ. ಶಾಸಕರನ್ನು ಗೆಲ್ಲಿಸಿಕೊಡುವ ಶಕ್ತಿವಂತ ನಾಯಕ, ಇವರನ್ನು ಮತ್ತೆ ಕ್ಷೇತ್ರದಿಂದ ಗೆಲ್ಲಿಸಬೇಕು.
    | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

    ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಕಾಲ ಸನ್ನಿಹಿತವಾಗಿದೆ. ಮತದಾರರು ಜಾಗರೂಕರಾಗಿ ಮತ ಚಲಾಯಿಸಬೇಕು. ತುಮಕೂರು ಜಿಲ್ಲೆಯಿಂದಲೇ ಬದಲಾವಣೆ ಆಗಬೇಕು.11 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಶಾಸಕರೇ ಆಯ್ಕೆಯಾಗಬೇಕು.
    |ರಂದೀಪ್‌ಸಿಂಗ್ ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ

    ಕಾಂಗ್ರೆಸ್‌ನಿಂದಲೇ ದೇಶ ಅಭಿವೃದ್ಧಿಯೆಡೆ ಸಾಗುತ್ತಿದೆ: ತುಮಕೂರು: ದೇಶದ ಬಹುದೊಡ್ಡ ಪ್ರಗತಿಯ ಬುನಾದಿ ಹಾಕಿದ್ದು ಕಾಂಗ್ರೆಸ್, ಇದರಿಂದಲೇ ದೇಶ ಇಂದು ಅಭಿವೃದ್ಧಿಯೆಡೆಗೆ ಸಾಗುತ್ತಿದೆ ಎಂದು ಶಾಸಕ ಡಾ.ಜಿ ಪರಮೇಶ್ವರ್ ಹೇಳಿದರು.
    ಇಂದಿರಾ ಗಾಂಧಿ, ನೆಹರು ಸೇರಿದಂತೆ ಬಹುತೇಕ ಕಾಂಗ್ರೆಸ್ ಹಿರಿಯ ನಾಯಕರ ಭವನಗಳು ರಾಜ್ಯದಲ್ಲಿವೆ. ಆದರೆ, ಎಲ್ಲಿಯೂ ರಾಜೀವ್ ಗಾಂಧಿಯವರ ಭವನ ಇರಲಿಲ್ಲ. ಆದ್ದರಿಂದ ಕೊರಟಗೆರೆ ಕಾಂಗ್ರೆಸ್ ಭವನಕ್ಕೆ ರಾಜೀವ್ ಭವನ ಎಂದು ನಾಮಕರಣ ಮಾಡಿರುವುದಾಗಿ ಹೇಳಿದರು. ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ನಾನು ಅಭಿವೃದ್ಧಿಯನ್ನು ಮಾಡಿದ್ದೇನೆ, ನಾನು ಮಾಡಿವಂತಹ ಪ್ರತಿಯೊಂದು ಅಭಿವೃದ್ಧಿ ಕೆಲಸದ ಮಾಹಿತಿಯನ್ನು ಪುಸ್ತಕದಲ್ಲಿ ದಾಖಲಿಸಿ ಕ್ಷೇತ್ರದ ಮನೆ ಮನೆ ನೀಡುತ್ತಿದ್ದೇನೆ ಎಂದು ಹೇಳಿದರು.
    ಖರ್ಗೆ ಬಗ್ಗೆ ಮೆಚ್ಚುಗೆ: ಕರ್ನಾಟಕದ ಇತಿಹಾಸಲ್ಲಿ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ನಂತರದಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನವನ್ನು 30 ವರ್ಷಗಳ ನಂತರ ಖರ್ಗೆ ಅಲಂಕರಿಸಿದ್ದಾರೆ. ಇದು ಕರ್ನಾಟಕ ರಾಜ್ಯದ ಹೆಮ್ಮೆ, ಕೆಪಿಸಿಸಿ ಅಧ್ಯಕ್ಷರಾಗಿ ಕಳಂಕರಹಿತ, ಆರೋಪಮುಕ್ತ ಆಡಳಿತ ನಡೆಸುವುದರ ಮೂಲಕ ದೇಶದ ಅತ್ಯುನ್ನತ ಸ್ಥಾನ ಪಡೆದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts