More

    ಆನ್‌ಲೈನ್ ವಹಿವಾಟಿನ ಮೇಲೆ ಆಯೋಗ ಹದ್ದಿನ ಕಣ್ಣು: ಕಳ್ಳ ವ್ಯವಹಾರ ನಡೆಯದಂತೆ ಎಚ್ಚರಿಕೆ

     | ವಿಲಾಸ ಮೇಲಗಿರಿ ಬೆಂಗಳೂರು

    ವಿಧಾನಸಭೆ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ಚುನಾವಣಾ ಆಯೋಗ ಕಣ್ಗಾವಲಿಟ್ಟಿದೆ. ಮುಂದುವರಿದು, ಆನ್‌ಲೈನ್‌ ಫ್ಲಾಟ್ ಫಾರ್ಮ್ ಆಧಾರಿತ ವಹಿವಾಟನ್ನೂ ವಿಚಕ್ಷಣೆಗೆ ಒಳಪಡಿಸಿದೆ. ಅಭ್ಯರ್ಥಿಯ ವೆಚ್ಚ ಮಿತಿ 40 ಲಕ್ಷ ರೂ.ಗೆ ನಿಗದಿಪಡಿಸಿ, ಈ ವೆಚ್ಚದ ನಿರ್ವಹಣೆ ಮೇಲೆ ನಿಗಾವಹಿಸಿದೆ.

    ಹಣ ಹಂಚಿಕೆ, ಉಚಿತ ಉಡುಗೊರೆ ವಿತರಣೆ ಭರ್ಜರಿಯಾಗಿ ನಡೆಯುತ್ತಿದ್ದು, ಈವರೆಗೆ ನಗದು ಸೇರಿ ಸುಮಾರು 174 ಕೋಟಿ ರೂ. ಮೌಲ್ಯದ ಗಿಫ್ಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. 1410 ಎಫ್ ಐಆರ್ ದಾಖಲಿಸಲಾಗಿದೆ. ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮದಿಂದ ಗಿಫ್ಟ್’ ಪಾಲಿಟಿಕ್ಸ್ ಈಗ ಕದ್ದು ಮುಚ್ಚಿ ನಡೆಯುತ್ತಿದೆ. ಹಾಗಾಗಿ ಪೇಟೆಯಂ, ಗೂಗಲ್ ಪೇ, ರೂಪ, ಯುಪಿಐ… ಮತ್ತಿತರ ಆನ್‌ಲೈನ್ ವರ್ಗಾವಣೆಗಳು ಆಯೋಗದ ವಿಚಕ್ಷಣೆಗೆ ಒಳಪಡುತ್ತಿವೆ!

    ಇದನ್ನೂ ಓದಿ: ಚನ್ನಪಟ್ಟಣದ ಜತೆಗೆ ಮಂಡ್ಯದಿಂದಲೂ ಎಚ್​ಡಿಕೆ ಸ್ಪರ್ಧೆ ಸಾಧ್ಯತೆ: ಕುತೂಹಲ ಮೂಡಿಸಿದ ಮಾಜಿ ಸಿಎಂ ನಡೆ

    ಒಂದು ಖಾತೆ, ಒಬ್ಬ ವ್ಯಕ್ತಿಯಿಂದ ಹತ್ತಾರು ಜನರಿಗೆ ಬ ಆಗಿ ವರ್ಗಾವಣೆ ಮಾಡುತ್ತಿದ್ದರೆ ಅವುಗಳನ್ನು ಅವಲೋಕನ ಮಾಡಲಾಗುತ್ತಿದೆ. ನ್ಯಾಷನಲ್‌ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಸಂಸ್ಥೆ ಇಂತಹ ವಹಿವಾಟು ನಿಯಂತ್ರಣ ಮಾಡುತ್ತಿದ್ದು, ಆನ್‌ಲೈನ್ ಎಲ್ಲ ಫ್ಲಾಟ್ ಫಾರ್ಮ್ ಮೇಲೂ ನಿಗಾ ಇಡಲಾಗಿದೆ. ಆರ್‌ಬಿಐ ಮಾರ್ಗಸೂಚಿ ಅನ್ವಯ ಈ ಪಕ್ರಿಯೆ ನಡೆಯುತ್ತಿದೆ. ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ(ಲೀಡ್‌ ಬ್ಯಾಂಕ್‌) ಆನ್‌ಲೈನ್ ವರ್ಗಾವಣೆಯನ್ನು ಪರೀಕ್ಷೆಗೆ ಒಳಪಡಿಸುತ್ತಿದೆ. ಸಂಶಯಾಸ್ಪದ ವರ್ಗಾವಣೆಯ ಮಾಹಿತಿ ಕೊಡುವಂತೆ ಲೀಡ್‌ಬ್ಯಾಂಕ್‌ ಕೋರಲಾಗಿದೆ. ಅದರ ಅನ್ವಯ ಬ್ಯಾಂಕರ್ಸ್‌ ಕಮಿಟಿಯಿಂದ ನಿತ್ಯ ದೊಡ್ಡ ಪಟ್ಟಿಯೇ ಚುನಾವಣಾ ಆಯೋಗ ರಚಿಸಿರುವ ಸಮಿತಿಯ ಕೈಸೇರುತ್ತಿದೆ. ಸಮಿತಿ ಸಂಶಯಾಸ್ಪದ ವರ್ಗಾವಣಾ ಖಾತೆಗಳನ್ನು ತನಿಖೆಗೆ ಒಳಪಡಿಸಿ ಕ್ರಮ ಕೈಗೊಳ್ಳುತ್ತಿದೆ.

    ದೊಡ್ಡ ಪಟ್ಟಿ ಪರಿಶೀಲನೆ: ಆನ್‌ಲೈನ್‌ ವರ್ಗಾವಣಿಗೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಡೇಟಾ ನಿತ್ಯ ಬರುತ್ತಿದೆ. ಅದಕ್ಕಾಗಿಯೇ ಸಾಕಷ್ಟು ಸಂಖ್ಯೆಯ ಸಿಬ್ಬಂದಿ ಒಳಗೊಂಡ ತಂಡವೊಂದು ಚುನಾವಣಾ ಆಯೋಗದಡಿ ಕಾರ್ಯನಿರ್ವಹಿಸುತ್ತಿದೆ.

    160 ವೆಚ್ಚ ವೀಕ್ಷಕರ ನೇಮಕ: ರಾಜ್ಯದಲ್ಲಿ ಒಂದು ಅಥವಾ ಕೆಲವೆಡೆ ಎರಡು ಕ್ಷೇತ್ರಕ್ಕೆ ಒಬ್ಬ ವೆಚ್ಚ ವೀಕ್ಷಕರಿದ್ದಾರೆ. ಈವರೆಗೆ 160 ವೆಚ್ಚ ವೀಕ್ಷಕರನ್ನು ಚುನಾವಣಾ ಆಯೋಗ ನೇಮಕ ಮಾಡಿದೆ.

    ಬಲ್ಕ್​ ವ್ಯವಹಾರ ಬ್ಲಿಂಕ್: ಸ್ವಿಗ್ಗಿ, ಅಮೆಜಾನ್, ಪ್ಲಿಪ್‌ಕಾರ್ಟ್, ಜೊಮ್ಯಾಟೋ, ಮಿಂತ್ರಾ, ಆಜಿಯೋ, ಬ್ಲಿಂಕ್‌ಇಟ್, ಡಂಜೊ, ಫಾರ್ಮ್ ಈಜಿ… ಯಾವ ರೀತಿಯ ವಸ್ತು/ಸರಕು ಸಾಗಿಸುತ್ತಿವೆ. ಒಬ್ಬ ವ್ಯಕ್ತಿಯಿಂದಲೇ ಬಹಳ ಜನರಿಗೆ ರವಾನೆ ಆಗುತ್ತಿದೆಯೇ ಎಂಬುದನ್ನೂ ತನಿಖೆಗೆ ಒಳಪಡಿಸಲಾಗಿದೆ. ಫೋನ್, ಫ್ಯಾನ್, ಎಲೆಕ್ಟ್ರಾನಿಕ್ ವಸ್ತುಗಳು, ಸೀರೆ, ಕುಕ್ಕರ್, ಆಹಾರ ಪದಾರ್ಥ… ಒಬ್ಬ ವ್ಯಕ್ತಿ/ಒಂದು ವಿಳಾಸದಿಂದಲೇ ಗುಂಪು ಗುಂಪು ಜನರಿಗೆ ಹೋದರೆ ಅದನ್ನು ಪರೀಕ್ಷಿಸುವ ಪ್ರಯತ್ನವೂ ನಡೆದಿದೆ.

    ಗಡಿ ಜಿಲ್ಲೆಗಳಲ್ಲಿ ಜಾಸ್ತಿ ಜಪ್ತಿ ಬೆಳಗಾವಿ, ಬಾಗಲಕೋಟೆ, ಕೋಲಾರ, ತುಮಕೂರು ಸೇರಿ ಗಡಿ ಜಿಲ್ಲೆಗಳಲ್ಲಿ ಸೀಜ್ ಜಾಸ್ತಿ ಆಗುತ್ತಿವೆ. ಮಿಕ್ಕ ಜಿಲ್ಲೆಗಳಲ್ಲಿ ಸಣ್ಣಪುಟ್ಟ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬ್ಯಾಟರಾಯನಪುರ 3.50 ಕೋಟಿ, ಶಿವಮೊಗ್ಗ 4.50 ಕೋಟಿ ರೂ. ಮೌಲ್ಯದ ಗಿಫ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅವು ದೊಡ್ಡ ಮೊತ್ತದ ಗಿಫ್ಟ್ ವಶಕ್ಕೆ ಪಡೆದ ಪ್ರಕರಣಗಳಾಗಿವೆ

    ಆನ್‌ಲೈನ್ ವರ್ಗಾವಣೆ ಹಾಗೂ ಮೊಬೈಲ್‌ ಆಫ್ ಆಧಾರಿತ ವಸ್ತು ಪೂರೈಕೆ ಕಂಪನಿಗಳ ಚಲನ-ವಲನದ ಮೇಲೂ ನಿಗಾ ಇಡಲಾಗಿದೆ. ಮತದಾರರಿಗೆ ಇಂತಹ ಕಂಪನಿಗಳ ಮೂಲಕ ಆಮಿಷ ಒಡ್ಡುವುದನ್ನು ಪರಿಶೀಲಿಸಿ ಪಾರದರ್ಶಕ ಚುನಾವಣೆ ನಡೆಸಲು ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

    | ವೆಂಕಟೇಶ ಕುಮಾರ್ ಅಪರ ಮುಖ್ಯ ಚುನಾವಣಾಧಿಕಾರಿ

    ಅಭ್ಯರ್ಥಿ ಹೆಸರಲ್ಲೇ ಖಾತೆ ನಿರ್ವಹಣೆ

    ಅಭ್ಯರ್ಥಿಗಳು ಸ್ಪರ್ಧಿಸುವಾಗ ಚುನಾವಣಾ ವೆಚ್ಚ ನಿರ್ವಹಣೆಗೆಂದೇ ಬ್ಯಾಂಕ್ ಖಾತೆಯೊಂದನ್ನು ತೆರೆಯಬೇಕು. ಸಾಲ ಮತ್ಯಾವುದೇ ರೂಪದ ಹಣವಾದರೂ ಆ ಖಾತೆ ಮೂಲಕವೇ ನಿರ್ವಹಿಸಬೇಕು. ಅಭ್ಯರ್ಥಿಯ ಪತ್ನಿ / ಪತಿ/ಪುತ್ರ ಹೀಗೆ ಕುಟುಂಬದ ಯಾರದೋ ಹೆಸರಿನಲ್ಲಿ ಚುನಾವಣಾ ವೆಚ್ಚ ನಿರ್ವಹಣೆ ಮಾಡುವಂತಿಲ್ಲ.

    ಇದನ್ನೂ ಓದಿ: ರಾಮದಾಸ್ ಕೂಡ ಬಿಜೆಪಿಗೆ ರಾಜೀನಾಮೆ?; ಮನೆಗೆ ಬಂದ ಸಂಸದ-ಅಭ್ಯರ್ಥಿಯನ್ನು ಭೇಟಿಯಾಗದೆ ವಾಪಸ್ ಕಳಿಸಿದ್ರು!

    ಕಡಿಮೆ ದರ ನಮೂದಿಸುವಂತಿಲ್ಲ
    ಚುನಾವಣಾ ಆಯೋಗ ಅಭ್ಯರ್ಥಿಗಳ ವೆಚ್ಚದ ರೇಟ್ ಕಾರ್ಡ್ ಪ್ರಕಟಿಸಿದೆ. ಆ ಪ್ರಕಾರವೇ ವೆಚ್ಚ ಮಾಡಬೇಕು. ಕಡಿಮೆ ದರ ನಮೂದಿಸುವಂತಿಲ್ಲ.

    ಮೂರು ಬಾರಿ ಲೆಕ್ಕ ಹೊಂದಾಣಿಕೆ
    ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯಿಂದ ಮತದಾನ ಮುಕ್ತಾಯವಾಗುವ ದಿನದ ಒಳಗಾಗಿ 3 ಬಾರಿ ಲೆಕ್ಕ ಹೊಂದಾಣಿಕೆ ಮಾಡಿಸಿಕೊಳ್ಳಬೇಕು. ವೆಚ್ಚ ವೀಕ್ಷಕರು ಮೂರು ಬಾರಿ ಸಭೆ ನಡೆಸಲಿದ್ದು, ಈ ಸಭೆಗೆ ತಮ್ಮ ಲೆಕ್ಕಪತ್ರ ತಂದು ಮಂಡಿಸಿ, ವೆಚ್ಚ ವೀಕ್ಷಕರು ಮಾಡಿರುವ ಅಂದಾಜಿನ ಜತೆ ತಾಳೆ ಆಗಬೇಕು. ಪ್ರತಿ ಕಾರ್ಯಕ್ರಮ, ಸಭೆ, ಸಮಾರಂಭಕ್ಕೂ ಅನುಮತಿ ಪಡೆದೇ ಮಾಡುವುದರಿಂದ ವೆಚ್ಚ ವೀಕ್ಷಕರು ಅಂತಹ ವೆಚ್ಚಗಳನ್ನು ವೆಚ್ಚ ಪಟ್ಟಿಯಂತೆ ಪರಿಗಣಿಸುತ್ತಾರೆ. ಅಭ್ಯರ್ಥಿ ತೋರಿಸುವ ವೆಚ್ಚ ವೀಕ್ಷಕರು ಅಂದಾಜಿಸುವ ಖರ್ಚು ತಾಳೆಯಾಗಬೇಕು.ತಾಳೆ ಆಗದೇ ಇದ್ದರೆ, ತಪ್ಪಿದ್ದರೆ ಸರಿಪಡಿಸಿಕೊಳ್ಳಬೇಕು. ತಾಳೆ ಆಗಿರುವುದಕ್ಕೆ ವೆಚ್ಚ ವೀಕ್ಷಕರ ಸಹಿ ಪಡೆಯಬೇಕು. ಅಭ್ಯರ್ಥಿ ಗೆದ್ದರೂ ಸೋತರೂ ಚುನಾವಣೆ ಆಗಿ 1 ತಿಂಗಳೊಳಗೆ ಆಯೋಗಕ್ಕೆ ವೆಚ್ಚದ ಪಟ್ಟಿ ಕೊಡಬೇಕು. ಚುನಾವಣೆ ಬಳಿಕವೂ ವೆಚ್ಚ ವೀಕ್ಷಕರು ಸಭೆ ಕರೆದು ವೆಚ್ಚ ಲೆಕ್ಕ ಹಾಕುತ್ತಾರೆ. 40 ಲಕ್ಷಕ್ಕೂ ಹೆಚ್ಚು ಖರ್ಚಾಗಿದ್ದು ದೃಢಪಟ್ಟರೆ ಅನರ್ಹಗೊಳಿಸಲು ಕಾನೂನಿನಲ್ಲಿ ಅವಕಾಶವಿದೆ.

    ‘ಮಳೆಯಲ್ಲಿ ಸಾಂಗ್​ ಶೂಟಿಂಗ್​ ವೇಳೆ ಒಳ ಉಡುಪು ಧರಿಸಿರಲಿಲ್ಲ: ಮೇಲಕ್ಕೆತ್ತಿದಾಗ ರಜನಿ ಸರ್ ಗಲಿಬಿಲಿಗೊಂಡಿದ್ದರು’

    ನನಗೆ ಪೂರ್ಣಾ ಜೊತೆ ಲವ್ ಅಫೇರ್ ಇದೆ ಆದರೆ… ನಟ, ನಿರ್ದೇಶಕ ರವಿಬಾಬು ಶಾಕಿಂಗ್​ ಹೇಳಿಕೆ

    ಮಹಿಳೆಯರ ಖಾಸಗಿ ಅಂಗಗಳ ಬಗ್ಗೆ ಮಾತಾಡಿದ್ರೆ ಗುಂಡು ಹಾರಿಸುತ್ತೇನೆಂದ ನಟಿ ರಾಧಿಕಾ ಆಪ್ಟೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts