More

    ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಸ್ವೀಕಾರ

    ಬೆಳಗಾವಿ: ಸವದತ್ತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರ ನಾಮಪತ್ರ ಸ್ವೀಕೃತವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ರತ್ನಾ ಮಾಮನಿ ಅವರು ಸಲ್ಲಿಸಿದ್ದ ​ಉಮೇದುವಾರಿಕೆ​ಗೆ ಕಾಂಗ್ರೆಸ್​, ಆಮ್​ ಆದ್ಮಿ ಪಕ್ಷದ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ನಾಮಪತ್ರದಲ್ಲಿ ಲೋಪದೋಷವಿದೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರು.

    ಇದನ್ನೂ ಓದಿ: ಪದವಿ ವ್ಯಾಸಂಗ ಮುಗಿದರೂ ಸಿಗದ ಉದ್ಯೋಗ; ಮನನೊಂದು ಪ್ರಾಣಬಿಟ್ಟ ಯುವಕ

    ಲೋಪದೋಷ ಕಂಡು ಬಂದಿಲ್ಲ

    ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಚುನಾವಣಾ ಅಧಿಕಾರಿಗಳು ಯಾವುದೇ ಲೋಪದೋಷ ಕಂಡು ಬಂದಿಲ್ಲ. ರತ್ನಾ ಮಾಮನಿ ಅವರ ನಾಮಪತ್ರ ಸ್ವೀಕೃತಗೊಂಡಿದೆ ಎಂದು ತಿಳಿಸಿದ್ದಾರೆ. ರತ್ನಾ ಮಾಮನಿ ನಾಮಪತ್ರ ಸ್ವೀಕಾರವಾಗುತ್ತಿದ್ದಂತೆ ಸವದತ್ತಿ ಮಾಮನಿ ಕಲ್ಯಾಣ ಮಂಟಪದಲ್ಲಿ ನೂರಾರು ಕಾರ್ಯಕರ್ತರು, ಬೆಂಬಲಿಗರು ಭಾಗಿಯಾಗಿ ಸಂಭ್ರಮಾಚರಣೆ‌ ಮಾಡಿದ್ದಾರೆ.

    ಹೊಲಸು ರಾಜಕಾರಣ ಮಾಡಿಲ್ಲ

    ನಾಮಪತ್ರ ಸ್ವೀಕಾರ ಬಳಿಕ ಸಭೆಯಲ್ಲಿ ರತ್ನಾ ಮಾಮನಿ ಮಾತನಾಡುತ್ತಾ, ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ. ನಾಮಪತ್ರ ಸ್ವೀಕಾರ ಆಗಿದೆ. ನಾವು ನೇರಾನೇರ ರಾಜಕೀಯ ಮಾಡಿದ್ದೇವೆ‌ಯೇ ಹೊರತು, ಇಂತಹ ಹೊಲಸು ರಾಜಕಾರಣ ಮಾಡಿಲ್ಲ. ನಮ್ಮ ಯಜಮಾನರು ಮೂರು ಬಾರಿ ಚುನಾವಣೆ ಮಾಡಿದರು ಅನ್ಯಯ ಮಾಡಿಲ್ಲ. ನಿಮ್ಮ ಉತ್ಸಾಹ ಪ್ರೀತಿ ಹೀಗೆ ಇರಲಿ ಎಂದು ಕಾರ್ಯಕರ್ತರಲ್ಲಿ ಕೇಳಿಕೊಂಡರು. ಚುನಾವಣೆಯ ಸಮಯದಲ್ಲಿ ಯಾವುದೇ ತಪ್ಪು ಮಾಡಬೇಡಿ. ವಿರೋಧಿಗಳ ಬಗ್ಗೆ ನಾವು ಪ್ರಚಾರ ಮಾಡುವುದು ಬೇಡ. ನಮ್ಮ ಪ್ರಚಾರ ಅವರು ಮಾಡಲಿ ಎಂದು ವಿರೋಧಿ ಬಣದ ಅಭ್ಯರ್ಥಿಗಳಿಗೆ ಟಾಂಗ್ ನೀಡಿದರು.

    ಇದನ್ನೂ ಓದಿ: ನಮಗೆ ಸಿದ್ದರಾಮಯ್ಯ ಜತೆ ಒಳ ಒಪ್ಪಂದದ ಅವಶ್ಯಕತೆ ಇಲ್ಲ: ಬಿ.ವೈ. ವಿಜಯೇಂದ್ರ

    ಏನಿದು ಗೊಂದಲ?

    ರತ್ನಾ ಮಾಮನಿ ಅವರು ಏ.18 ಹಾಗೂ ಏ.19ರಂದು ಎರಡು ಬಾರಿ ನಾಮಪತ್ರ ಸಲ್ಲಿಸಿದ್ದರು. ಎರಡೂ ಬಾರಿಯೂ ಪ್ರಜಾಪ್ರತಿನಿಧಿ ಕಾಯ್ದೆ 2019ರ ತಿದ್ದುಪಡಿ ಪ್ರಕಾರ ಪರಿಷ್ಕೃತ ಫಾರ್ಮ್ ಸಂಖ್ಯೆ 26 ಸಲ್ಲಿಸದೆ, 2018ರ ಮಾದರಿಯ ಫಾರ್ಮ್ ಸಂಖ್ಯೆ 26 ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್​ ಮತ್ತು ಆಮ್​ ಆದ್ಮಿ ಪಕ್ಷದ​ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರ ನಾಮಪತ್ರವನ್ನು ತಿರಸ್ಕರಿಸುವಂತೆ ವಿಪಕ್ಷಗಳು ಆಗ್ರಹಿಸಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts