More

    ಅಮಿತ್ ಷಾ ಸಾಕಷ್ಟು ಸಲಹೆ ನೀಡಿದ್ದಾರೆ… ಬಿಜೆಪಿ ಖಂಡಿತ ಅಧಿಕಾರಕ್ಕೆ ಬರುತ್ತದೆ; ಬಿಎಸ್​ವೈ

    ಬೆಂಗಳೂರು: ಶಿವಮೊಗ್ಗಕ್ಕೆ ತೆರಳಿ, ಹಿಂತಿರುಗುತ್ತಿದ್ದಂತೆ ಚುನಾವಣೆಯ ದೃಷ್ಟಿಯಿಂದ ಪ್ರವಾಸ ಆರಂಭಿಸುತ್ತೇನೆ. ಈಗಾಗಲೇ ಚುನಾವಣೆ ಸಂಬಂಧ ಅಮಿತ್ ಷಾ ಅವರೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದೇವೆ ಎಂದು ಮಾಜಿ ಸಿಎಂ ಬಿಎಸ್​​ ಯಡಿಯೂರಪ್ಪ ಹೇಳಿದ್ದಾರೆ.

    ಇದನ್ನೂ ಓದಿ: ನಾಟಕದ ಮಾತಿಗೆ ಜನ ಮರುಳಾಗುವುದಿಲ್ಲ;ಶಾಸಕ ಎಂ. ಸತೀಶ್ ರೆಡ್ಡಿ

    ಅಮಿಷಾ ಮಾರ್ಗದರ್ಶನ ಮಾಡಿದ್ದಾರೆ

    ಬೆಂಗಳೂರಿನಲ್ಲಿ ಸುದ್ದಿಗಾರರೊಂಗೆ ಬಿಎಸ್​​ವೈ ಮಾತನಾಡುತ್ತಾ, ರಾಜ್ಯದಲ್ಲಿ ಚುನಾವಣೆಯನ್ನು ಎದುರಿಸುವುದರ ಬಗ್ಗೆ ಅಮಿತ್ ಷಾ ಅವರು ಸಾಕಷ್ಟು ಸಲಹೆ, ಮಾರ್ಗದರ್ಶನ ನೀಡಿದ್ದಾರೆ. ಪ್ರಚಾರಕ್ಕಾಗಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬರಲಿದ್ದಾರೆ. ಈ ಬಾರಿ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಖಂಡಿತವಾಗಿಯೂ 130 ಸ್ಥಾನ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

    ಅಮಿತ್ ಷಾ ಸೂತ್ರ

    • ಸರ್ಕಾರ ಕೈಗೊಂಡ ಕ್ರಾಂತಿಕಾರಕ ಮೀಸಲು ಪರಿಷ್ಕರಣೆ ಮತ್ತು ಎಸ್ಸಿ ಮೀಸಲು ವರ್ಗೀಕರಣ ನಿರ್ಣಯವನ್ನು ಹೆಚ್ಚೆಚ್ಚು ಮುನ್ನಲೆಗೆ ತಂದು ಚರ್ಚೆಗೆ ಬಿಡಿ
    • ಬಿಟ್ಟು ಹೋದವರ ಬಗ್ಗೆ ಚರ್ಚೆಯೂ ಬೇಡ, ವೀರಶೈವವ ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯಕೊಟ್ಟ ಹೆಮ್ಮೆ ಇದೆ.
    • ಪ್ರತಿಪಕ್ಷಗಳಿಗೆ ಪ್ರಸ್ತಾವಿಸಲು ಯಾವುದೇ ವಿಷಯವಿಲ್ಲ. ಅಭಿವೃದ್ಧಿ ಪ್ರಧಾನ ಕಾರ್ಯಸೂಚಿ, ಅದನ್ನರಿತು ಡಬಲ್ ಇಂಜಿನ್ ಸರ್ಕಾರ ಪ್ರಯೋಜನವೇ ಅಸ್ತ್ರವಾಗಲಿ

    ಇದನ್ನೂ ಓದಿ: ಕಳುವಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ರಿಕೆಟ್ ಕಿಟ್ ಪತ್ತೆ; ಬೆಂಗಳೂರಿನಲ್ಲಿ ಇಬ್ಬರ ಬಂಧನ

    ಕ್ಷೇತ್ರ ವಿಸ್ತಾರಕರ ರಿಪೋರ್ಟ್

    ಅಧಿಕೃತ ಅಭ್ಯರ್ಥಿಗಳ ಹೆಸರು ಘೋಷಣಿ ಬಳಿಕ ಕ್ಷೇತ್ರ ವಿಸ್ತಾರಕರು ಆಯಾ ವಿಧಾನಸಭೆ ಕ್ಷೇತ್ರದ ‘ಗ್ರೌಂಡ್ ರಿಪೋರ್ಟ್’ ಅಮಿತ್ ಷಾ ಮುಂದಿಟ್ಟಿದ್ದಾರೆ. ಪ್ರಮುಖ ನಾಯಕರೊಂದಿಗೆ ವಿಚಾರ ವಿನಿಮಯ ನಡೆಸಿದ ಬಳಿಕ ಕ್ಷೇತ್ರ ವಿಸ್ತಾರಕರ ಸಭೆ ನಡೆಸಿದ ಷಾ, ಪ್ರತಿಯೊಂದು ಕ್ಷೇತ್ರದ ವಸ್ತುಸ್ಥಿತಿ ವರದಿ ಪಡೆದು ಪರಿಶೀಲಿಸಿದ್ದಾರೆ. ಬೇರೆ ರಾಜ್ಯಗಳಿಂದ ನಿಯುಕ್ತರಾಗಿರುವ 54 ಜನ ವಿಸ್ತಾರಕರು ‘ಗ್ರೌಂಡ್ ರಿಪೋರ್ಟ್’ ಸಲ್ಲಿಸುವ ಜತೆಗೆ ಕೈಗೊಳ್ಳಬೇಕಾದ ಮಾರ್ಗೋಪಾಯಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಹಲವರ ಬದಲಾವಣಿ, ಹೊಸ ಪ್ರಯೋಗ, ಹೊಸಮುಖಗಳಿಗೆ ಅವಕಾಶ ಲಭಿಸಿದ್ದರ ಬಗ್ಗೆ ಪಕ್ಷಕ್ಕೆ ಪ್ಲಸ್, ಮೈನಸ್ ಪಾಯಿಂಟ್‌ಗಳನ್ನು ಕ್ಷೇತ್ರ ವಿಸ್ತಾರಕರು ಈ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts