More

    ಗಾಂಧಿನಗರದಲ್ಲಿ ಸಪ್ತಗಿರಿಗೌಡ ರೋಡ್ ಶೋ: ದತ್ತಾತ್ರೇಯ ವಾರ್ಡ್​ನಲ್ಲಿ ಭರ್ಜರಿ ಪ್ರಚಾರ, ಅಶ್ವತ್ಥನಾರಾಯಣ ಸಾಥ್

    ಬೆಂಗಳೂರು: ಗಾಂಧಿನಗರ ವಿಧಾನಸಭಾ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ದತ್ತಾತ್ರೇಯ ವಾರ್ಡ್​ನಲ್ಲಿ ಶುಕ್ರವಾರ ರೋಡ್ ಶೋ ನಡೆಸಿದರು.

    ದತ್ತಾತ್ರೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಅಪಾರ ಕಾರ್ಯಕರ್ತರೊಂದಿಗೆ ಪೈಪ್​ಲೈನ್ ರಸ್ತೆ ಮೂಲಕ ನಾಗಪ್ಪ ಬ್ಲಾಕ್​ವರೆಗೆ ರೋಡ್ ಶೋ ಸಾಗಿತು. ಮಲ್ಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಅಶ್ವತ್ಥನಾರಾಯಣ, ಸಂಸದ ಪಿ.ಸಿ. ಮೋಹನ್, ಗಾಂಧಿನಗರ ಮಂಡಲ ಬಿಜೆಪಿ ಅಧ್ಯಕ್ಷರು ಭಾಗವಹಿಸಿದ್ದರು.

    ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಭ್ಯರ್ಥಿ ಸಪ್ತಗಿರಿಗೌಡ, ದಶಕಗಳ ಕಾಲದಿಂದ ಜಡ್ಡುಗಟ್ಟಿದ ಗಾಂಧಿನಗರದ ರಾಜಕೀಯವನ್ನು ಸ್ವಚ್ಛ ಮಾಡಲು ನಾನು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದರು.

    ಇಡೀ ಬೆಂಗಳೂರಿನಲ್ಲಿ ಗಾಂಧಿನಗರ ಕ್ಷೇತ್ರ ಅತ್ಯಂತ ಹಿಂದುಳಿದಿದ್ದು, ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಗಾಂಧಿನಗರ ಕ್ಷೇತ್ರ ರಾಜಧಾನಿಯ ಹೃದಯಭಾಗದಲ್ಲಿದ್ದರೂ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಇದಕ್ಕೆ ನೇರವಾಗಿ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಆರೋಪಿಸಿದರು.

    ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರ ಜನಪರ ಆಡಳಿತದಿಂದ ರಾಜ್ಯ ದೇಶದಲ್ಲೇ ಎದ್ದುಕಾಣುವ ಆಳ್ವಿಕೆಯನ್ನು ನೀಡಿದೆ. ಮುಂದೆ ಗಾಂಧಿನಗರವು ರಾಜ್ಯದಲ್ಲೇ ಎದ್ದುಕಾಣುವಂತೆ ಮಾಡಲಾಗುವುದು ಎಂದರು.

    ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರವಣ ಮತ್ತು ಬೆಂಬಲಿಗರು ಹಾಗೂ ಗಾಂಧಿನಗರದ ಅನೇಕ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ಶರವಣ ಮಾತನಾಡಿ, ಕಾಂಗ್ರೆಸ್​ನ ಸ್ವಹಿತಾಸಕ್ತಿ ಮತ್ತು ಉಸಿರುಗಟ್ಟುವ ವಾತಾವರಣದಿಂದ ತಾವು ಪಕ್ಷ ತ್ಯಜಿಸಿದ್ದು ಗಾಂಧಿನಗರದ ಶ್ರೇಯೋಭಿವೃದ್ಧಿಗಾಗಿ ಸಪ್ತಗಿರಿಗೌಡಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

    ಕ್ರಿಮಿನಲ್ ಕೇಸ್ ಮುಚ್ಚಿಟ್ಟ ಜಾ. ಜನತಾದಳ ಅಭ್ಯರ್ಥಿ

    ಬೆಂಗಳೂರು: ಜೆಡಿಎಸ್ ಅಭ್ಯರ್ಥಿ ಕೆಲವೊಂದು ಕ್ರಿಮಿನಲ್ ಪ್ರಕರಣಗಳನ್ನು ಮುಚ್ವಿಟ್ಟು ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ನಮ್ಮ ಚುನಾವಣಾ ಏಜೆಂಟ್ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ಯಶವಂತಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಟಿ. ಸೋಮಶೇಖರ್ ಹೇಳಿದ್ದಾರೆ.

    ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ಎರಡು ಕ್ರಿಮಿನಲ್ ಪ್ರಕರಣಗಳನ್ನು ಮುಚ್ವಿಟ್ಟು ನಾಮ ಪತ್ರ ಸಲ್ಲಿಸಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಹೀಗಾಗಿ ಆಕ್ಷೇಪಣೆಗೆ ದಾಖಲೆ ಸಲ್ಲಿಸುವಂತೆ ಚುನಾವಣಾಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದರು.

    ನೋಟಿಸ್​ನಲ್ಲಿ ಏನಿದೆ?: ಬಿಜೆಪಿ ಉಮೇದುವಾರರಾದ ಎಸ್.ಟಿ. ಸೋಮಶೇಖರ್ ಅವರ ಚುನಾವಣಾ ಏಜೆಂಟ್ ಕೃಷ್ಣದಾಸ ಅವರು ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ನಾಮಪತ್ರ ಪರಿಶೀಲನೆ ವೇಳೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಕೆಲವೊಂದು ಅಂಶಗಳನ್ನು ಕೈಬಿಟ್ಟಿದ್ದಾರೆ. ಸಿಟಿ ಸಿವಿಲ್ ಕೋರ್ಟ್​ನಲ್ಲಿ ಎರಡು ಪ್ರಕರಣಗಳಿದ್ದು, ಕೈಬಿಟ್ಟಿದ್ದಾರೆ ಎಂದು ಆಕ್ಷೇಪಣೆ ಸಲ್ಲಿಸಲಾಗಿದೆ.

    ಸದರಿ ಆಕ್ಷೇಪಣೆಗೆ ದಾಖಲಾತಿ ಹಾಗೂ ಲಿಖಿತ ಸಮಜಾಯಿಷಿ ಸಲ್ಲಿಸಬೇಕು. ತಪ್ಪಿದಲ್ಲಿ ನಿಯಮಾ ನá-ಸಾರ ಕ್ರಮ ಜರುಗಿಸಲಾಗುವುದು ಎಂದು ಚುನಾವಣಾಧಿ ಕಾರಿಗಳು ತಿಳಿವಳಿಕೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲೆಂದು ಪ್ರಧಾನಿ ನರೇಂದ್ರ ಮೋದಿ 29ಕ್ಕೆ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಮೋದಿ ಬಂದು ಹೋದ ನಂತರ ಮೇ 1ರಿಂದ ಚುನಾವಣಾ ಪ್ರಚಾರ ಆರಂಭಿಸುವೆ.

    | ಎಸ್.ಟಿ.ಸೋಮಶೇಖರ್, ಯಶವಂತಪುರ ಬಿಜೆಪಿ ಅಭ್ಯರ್ಥಿ

    ವರುಣದಲ್ಲಿ ಸಿದ್ದರಾಮಯ್ಯಗೆ ಆತಂಕ ಶುರು: ಬದಲಾದ ಸಿದ್ದು ಲೆಕ್ಕಾಚಾರ

    ಡಿ.ಕೆ. ಸುರೇಶ್ ಸಲ್ಲಿಸಿದ್ದ ನಾಮಪತ್ರ ತಿರಸ್ಕಾರ

    ಹೊಟ್ಟೆಪಾಡಿಗಾಗಿ ಸಾಬೂನು ಮಾರಲು ಬಿಡದ ಕಾಮುಕರು: ವಿಡಿಯೋ ಮೂಲಕ ನಟಿ ಐಶ್ವರ್ಯಾ ಬೇಸರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts