More

    ‘ಚಿಕ್ಕ ಚಿಕ್ಕ ಕೆಲಸಗಳ ಮೂಲಕ ಏಕ್ ಭಾರತ – ಶ್ರೇಷ್ಠ ಭಾರತ್​ ಕಲ್ಪನೆಗೆ ಬಣ್ಣ ತುಂಬೋದಕ್ಕೆ ಏಕ್​ಭಾರತ್ ತಾಣಕ್ಕೆ ಭೇಟಿ ಕೊಡಿ’

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಮನ್ ಕೀ ಬಾತ್​ನಲ್ಲಿ ಉಲ್ಲೇಖಿಸಿ ಮತ್ತೊಂದು ಪ್ರಮುಖ ಅಂಶ ಏಕ್​ ಭಾರತ್ ಶ್ರೇಷ್ಠ ಭಾರತ್ ಎಂಬ ಪರಿಕಲ್ಪನೆ.ಅಕ್ಟೋಬರ್ 31 ರಂದು ರಾಷ್ಟ್ರೀಯ ಏಕತಾ ದಿವಸ್, ಸರ್ದಾರ್ ವಲ್ಲಭ ಭಾಯ್ ಪಟೇಲರ ಜಯಂತಿ ಆಚರಣೆಯನ್ನೂ ಸ್ಮರಿಸಿಕೊಂಡ ಅವರು ಇದಕ್ಕೆ ಸಂಬಂಧಿಸಿ ಅನೇಕ ವಿಚಾರಗಳನ್ನು ಹಂಚಿಕೊಂಡದ್ದು ಹೀಗೆ..

    “ ಸರ್ದಾರ್ ವಲ್ಲಭ ಭಾಯಿ ಪಟೇಲರ ಜಯಂತಿಯ ದಿನವಾದ ಅಕ್ಟೋಬರ್ 31 ಸಮೀಪದಲ್ಲೇ ಇದೆ. ಆ ದಿನವನ್ನು ನಾವೆಲ್ಲರೂ ‘ರಾಷ್ಟ್ರೀಯ ಏಕತಾ ದಿವಸ್’ ಎಂದು ಆಚರಿಸುತ್ತೇವೆ. ಈ ಹಿಂದೆಯೂ ‘ಮನ್ ಕೀ ಬಾತ್​’ನಲ್ಲಿ ನಾವು ಸರ್ದಾರ್ ಪಟೇಲರ ಬಗ್ಗೆ ವಿವರವಾಗಿ ಮಾತನಾಡಿದ್ದೇವೆ. ಅವರ ಶ್ರೇಷ್ಠ ವ್ಯಕ್ತಿತ್ವದ ಹಲವು ಆಯಾಮಗಳನ್ನು ಚರ್ಚಿಸಿದ್ದೇವೆ. ಅವರು ರಾಜ-ರಾಜ ಮನೆತನಗಳನ್ನು ದೇಶದೊಂದಿಗೆ ಒಗ್ಗೂಡಿಸುವ ಕೆಲಸ ಮಾಡಿದರು. ಅವರು ವಿವಿಧತೆಯಲ್ಲಿ ಏಕತೆ ಮಂತ್ರವನ್ನು ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಜಾಗೃತಗೊಳಿಸುತ್ತಿದ್ದರು.

    ಇದನ್ನೂ ಓದಿ:  ಕೊಲ್ಲೂರು ದೇವಸ್ಥಾನದಲ್ಲಿ ರಥೋತ್ಸವ ಗೊಂದಲ; ಶಾಸಕರಿಂದ ಸಂಪ್ರದಾಯ ಬದಲಾವಣೆ!?

    ಸಂಕಷ್ಟದಲ್ಲೂ ಹಾಸ್ಯ ಜತೆಗಿರಲಿ

    ಸರ್ದಾರ್ ಪಟೇಲ್ ಅವರ ಬಗ್ಗೆ ಬಾಪೂ ಹೀಗೆಂದಿದ್ದರು – ಅವರ ಹಾಸ್ಯಪೂರ್ಣ ಮಾತುಗಳು ನನ್ನನ್ನು ಎಷ್ಟು ನಗಿಸುವುದೆಂದರೆ, ನಕ್ಕೂ ನಕ್ಕೂ ನನಗೆ ಹೊಟ್ಟೆ ಹುಣ್ಣಾಗುತ್ತಿತ್ತು, ಹೀಗೆ ದಿನದಲ್ಲಿ ಒಂದು ಬಾರಿಯಲ್ಲ, ಅನೇಕ ಬಾರಿ ಆಗುತ್ತಿತ್ತು. ಇದರಲ್ಲಿ ನಮಗೊಂದು ಪಾಠವೂ ಇದೆ, ಪರಿಸ್ಥಿತಿ ಎಷ್ಟೇ ಸಂಕಷ್ಟ, ಕಠಿಣವಾಗಿರಲಿ, ನಿಮ್ಮ ಹಾಸ್ಯ ಪ್ರಜ್ಞೆಯನ್ನು ಜೀವಂತವಾಗಿರಿಸಿಕೊಳ್ಳಿ, ಇದು ನಮ್ಮನ್ನು ಆರಾಮವಾಗಿರಿಸುತ್ತದೆ, ಮತ್ತು ನಾವು ನಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಸರ್ದಾರ್ ಅವರು ಮಾಡಿದ್ದು ಕೂಡಾ ಇದನ್ನೇ.

    ಸರ್ದಾರ್ ಪಟೇಲ್ ಅವರು ತಮ್ಮ ಸಂಪೂರ್ಣ ಜೀವನವನ್ನು ದೇಶದ ಒಗ್ಗಟ್ಟಿಗಾಗಿ ಮೀಸಲಿಟ್ಟರು. ಅವರು ಭಾರತದ ಜನರನ್ನು ಸ್ವಾತಂತ್ರ್ಯದ ಚಳವಳಿಗೆ ಸೇರಿಸಿದರು. ಅವರು ಸ್ವಾತಂತ್ರ್ಯದೊಂದಿಗೆ ರೈತರ ಸಮಸ್ಯೆಗಳನ್ನು ಜೋಡಿಸುವ ಕೆಲಸ ಮಾಡಿದರು. ಇಲ್ಲಿ ನಮ್ಮ ಜನರು ಹೀಗೆಂದು ಹೇಳುತ್ತಾರೆ –ಸ್ನಾನ ಮಾಡುವ ಸಮಯದಲ್ಲಿ ಪವಿತ್ರ ಭಾವನೆಯಿಂದ ಏಕತೆಯ ಮಂತ್ರವನ್ನೇ ಹೇಳಲಾಗುತ್ತದೆ:
    ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ
    ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು

    ಏಕತೆಯ ಶಕ್ತಿಯಿರುವ ಈ ವಿಷಯಗಳು ನಮ್ಮ ನಿತ್ಯ ಜೀವನದಲ್ಲಿ ಬೆರೆತುಹೋಗಿವೆ. ಪ್ರತಿ ಆಚರಣೆಗೆ ಮೊದಲು ವಿವಿಧ ನದಿಗಳನ್ನು ಆಹ್ವಾನಿಸಲಾಗುತ್ತದೆ – ಇದರಲ್ಲಿ ದೂರದ ಉತ್ತರದಲ್ಲಿರುವ ಸಿಂಧು ನದಿಯಿಂದ ದಕ್ಷಿಣ ಭಾರತದ ಜೀವನದಿ ಕಾವೇರಿಯವರೆಗೂ ಒಳಗೊಂಡಿದೆ.

    ಇದನ್ನೂ ಓದಿ: LIVE|ಮನ್​ ಕೀ ಬಾತ್: ಗೋ ಲೋಕಲ್ ಸಂದೇಶ ನೀಡ್ತಿದ್ದಾರೆ ಪ್ರಧಾನಿ ಮೋದಿ

    ನಮ್ಮ ಮಾತು, ನಮ್ಮ ನಡವಳಿಕೆ, ನಮ್ಮ ಕಾರ್ಯಗಳಿಂದ, ನಮ್ಮನ್ನು ‘ಒಗ್ಗೂಡಿಸುವ’ ಹಾಗೂ ದೇಶದ ಒಂದು ಭಾಗದಲ್ಲಿ ವಾಸಿಸುವ ನಾಗರಿಕನ ಮನಸ್ಸಿನಲ್ಲಿ, ಮತ್ತೊಂದು ಭಾಗದಲ್ಲಿ ವಾಸಿಸುವ ನಾಗರಿಕನಿಗಾಗಿ ಮಿಡಿಯುವ ಆತ್ಮೀಯ ಭಾವನೆ ಜಾಗೃತಗೊಳಿಸುವ ಎಲ್ಲಾ ಕಾರ್ಯಗಳನ್ನೂ ಪ್ರತಿ ಕ್ಷಣವೂ ಮುನ್ನಡೆಸಬೇಕಾಗಿದೆ. ಒಗ್ಗಟ್ಟೇ ಶಕ್ತಿ, ಒಗ್ಗಟ್ಟೇ ಬಲ, ಒಗ್ಗಟ್ಟೇ ಪ್ರಗತಿ, ಒಗ್ಗಟ್ಟೇ ಸಬಲೀಕರಣ, ಒಗ್ಗಟ್ಟಿನಿಂದ ನಾವು ಹೊಸ ಎತ್ತರಗಳನ್ನು ಅಧಿಗಮಿಸುವುದು ಸಾಧ್ಯವಿದೆ.

    ಇದನ್ನೂ ಓದಿ:  ಮಹಾರಾಷ್ಟ್ರ ಸಿಎಂ ಮತ್ತು ಅವರ ಪುತ್ರನ ವಿರುದ್ಧ ಟ್ವೀಟ್​ ಮಾಡಿದ್ದ ಬಿಜೆಪಿ ಕಾರ್ಯಕರ್ತನ ಮರುಬಂಧನ

    ಸಿಖ್ಖರ ಪವಿತ್ರ ಸ್ಥಳಗಳಲ್ಲಿ ‘ನಾಂದೇಡ್ ಸಾಹಿಬ್’ ಮತ್ತು ‘ಪಠನಾ ಸಾಹಿಬ್’ ಗುರುದ್ವಾರಗಳೂ ಸೇರಿವೆ. ನಮ್ಮ ಸಿಖ್ ಗುರುಗಳು ಕೂಡಾ ತಮ್ಮ ಜೀವನ ಮತ್ತು ಸತ್ಕಾರ್ಯಗಳ ಮೂಲಕ ಏಕತೆಯ ಭಾವನೆಯನ್ನು ಹೆಚ್ಚಿಸಿದ್ದಾರೆ. ನಮ್ಮ ದೇಶದಲ್ಲಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಂಥ ಗಣ್ಯರು ಸಂವಿಧಾನದ ಮುಖಾಂತರ ನಮ್ಮೆಲ್ಲರನ್ನೂ ಒಂದುಗೂಡಿಸಿದ್ದಾರೆ.

    ಇವೆಲ್ಲದನ್ನೂ ಹಿನ್ನೆಲೆಯಲ್ಲಿಟ್ಟುಕೊಂಡು ಈ ಸಮಯದಲ್ಲಿ ನಾನು ಒಂದು ಜಾಲತಾಣ ವೀಕ್ಷಿಸಬೇಕೆಂದು ನಿಮ್ಮಲ್ಲರಲ್ಲಿ ಮನವಿ ಮಾಡುತ್ತಿದ್ದೇನೆ – ekbharat.gov.in . ಇದರಲ್ಲಿ, ರಾಷ್ಟ್ರೀಯ ಏಕೀಕರಣದ ನಮ್ಮ ಅಭಿಯಾನವನ್ನು ಮುನ್ನಡೆಸುವ ಹಲವು ಪ್ರಯತ್ನಗಳಿವೆ. ನಿರಂತರವಾಗಿ ನಮ್ಮ ಸೃಜನಾತ್ಮಕವಾಗಿ, ಪ್ರೀತಿಯಿಂದ, ಪ್ರತಿ ಕ್ಷಣ ಪ್ರಯತ್ನಪೂರ್ವಕವಾಗಿ ನಮ್ಮ ಚಿಕ್ಕ ಚಿಕ್ಕ ಕೆಲಸ ಕಾರ್ಯಗಳಲ್ಲಿ, ‘ಏಕ್ ಭಾರತ – ಶ್ರೇಷ್ಠ ಭಾರತ’ದ ಆಕರ್ಷಕ ಬಣ್ಣಗಳನ್ನು ತುಂಬುವ ಕೆಲಸ ಮಾಡಬೇಕು, ಒಗ್ಗಟ್ಟಿನ ಹೊಸ ಬಣ್ಣ ತುಂಬಬೇಕು ಮತ್ತು ಪ್ರತಿಯೊಬ್ಬ ನಾಗರಿಕನೂ ಇದಕ್ಕೆ ಬಣ್ಣ ತುಂಬಬೇಕು.

    ಇದನ್ನೂ ಓದಿ: ಉಪಸಮರ| ರಾಜರಾಜೇಶ್ವರಿ ನಗರದಲ್ಲಿ ರಾರಾಜಿಸುವವರ್ಯಾರು?

    ಹಾಗೆಯೇ, ನಿರಂತರವಾಗಿ ಅನುಮಾನದ ಬೀಜಗಳನ್ನು ನಮ್ಮ ಮನದಲ್ಲಿ ಬಿತ್ತುವ ಪ್ರಯತ್ನ ಮಾಡುತ್ತಿರುವ, ದೇಶವನ್ನು ವಿಭಜಿಸಲು ಪ್ರಯತ್ನಿಸುವಂತಹ ಶಕ್ತಿಗಳು ಕೂಡಾ ಇರುತ್ತವೆ. ಇಂತಹ ದುರುದ್ದೇಶಗಳಿಗೆ ತಕ್ಕ ಉತ್ತರವನ್ನು ಪ್ರತಿಬಾರಿಯೂ ದೇಶ ಕೊಟ್ಟಿದೆ. ಈ ತಿಂಗಳ 31 ರಂದು ನನಗೆ ಕೇವಡಿಯಾದಲ್ಲಿ ಐತಿಹಾಸಿಕ ಏಕತಾ ಪ್ರತಿಮೆಯ ಸ್ಥಳದಲ್ಲಿ ನಡೆಯಲಿರುವ ಅನೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಲಿದೆ. ನೀವು ಕೂಡಾ ಖಚಿತವಾಗಿ ಸೇರಿಕೊಳ್ಳಿ.

    ತೂತ್ತುಕುಡಿ ಎಂಬ ಮುತ್ತಿನಗರಿಯ ‘ಪೊನ್​ ಮರಿಯಪ್ಪನ್​’ ಎಂಬ ಮುತ್ತನ್ನು ಜಗತ್ತಿಗೇ ಪರಿಚಯಿಸಿದ್ರು ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts