More

    ದೇಹಕ್ಕೆ ನವಚೈತನ್ಯ ನೀಡುವ ಏಕಪಾದ ರಾಜಕಪೋತಾಸನ!

    ಬೆನ್ನೆಲುಬಿನ ತಳಭಾಗಕ್ಕೆ ಹುರುಪನ್ನು ನೀಡುವ ‘ಏಕಪಾದ ರಾಜಕಪೋತಾಸನ’ ಸ್ವಲ್ಪ ಕ್ಲಿಷ್ಟಕರವಾದ ಆಸನವಾಗಿದೆ. ಏಕಪಾದ ಎಂದರೆ ಒಂದು ಪಾದ. ರಾಜಕಪೋತವೆಂದರೆ ಪಾರಿವಾಳಗಳ ರಾಜ ಎಂದರ್ಥ. ಪಾರಿವಾಳ ಕೂತಿರುವಂತೆ ಕಾಣಿಸುವ ವಿಶಿಷ್ಟ ಭಂಗಿ ಇದರಲ್ಲಿದೆ. ಯೋಗಾಸನ ಸ್ಪರ್ಧೆಗೆ ಬಳಸುವ ವಿಶೇಷ ಆಸನಗಳಲ್ಲಿ ಏಕಪಾದ ರಾಜಕಪೋತಾಸನವೂ ಒಂದಾಗಿದೆ.

    ಪ್ರಯೋಜನಗಳು: ಏಕಪಾದ ರಾಜ ಕಪೋತಾಸನವನ್ನು ನಿತ್ಯ ಅಭ್ಯಾಸ ಮಾಡಿದರೆ ಬೆನ್ನೆಲುಬಿನ ತಳಭಾಗಕ್ಕೆ ಹುರುಪು ಸಿಗುತ್ತದೆ. ಎದೆ, ಕುತ್ತಿಗೆ, ಭುಜ, ಕಾಲು ಮುಂತಾಗಿ ದೇಹದ ವಿವಿಧ ಭಾಗಗಳಿಗೆ ಉತ್ತಮ ವ್ಯಾಯಾಮ ದೊರಕಿ ನವಚೈತನ್ಯ ಉಂಟಾಗುತ್ತದೆ. ಸೊಂಟ ನೋವು ಮತ್ತು ಬೆನ್ನು ನೋವು ನಿಯಂತ್ರಣವಾಗುತ್ತವೆ. ಮೂತ್ರ ದೋಷ ನಿವಾರಣೆಗೆ ಈ ಆಸನ ತುಂಬಾ ಸಹಕಾರಿ. ಕಾಲುಗಳು ಬಲಗೊಳ್ಳುತ್ತವೆ. ಇದು ಸಮತೋಲನ ಸ್ಥಿತಿಯನ್ನು ಕಾಪಾಡುವ ಭಂಗಿಯಾಗಿದೆ. ಇಲ್ಲಿ ದೇಹ, ಮನಸ್ಸು ಸ್ಥಿರವಾಗಿರಬೇಕು. ಇದರಿಂದ ಏಕಾಗ್ರತೆ ಸಾಧಿಸಲು ಸಹಾಯವಾಗುವುದರಿಂದ ವಿದ್ಯಾರ್ಥಿದೆಸೆಯಲ್ಲಿ ಕಲಿತರೆ ಒಳ್ಳೆಯದು.

    ಇದನ್ನೂ ಓದಿ: ‘ಸೂಪರ್​​ ಸ್ಟಾರ್’​ ಟೀಸರ್​ ಬಿಡುಗಡೆ: ಅಣ್ಣನ ಮಗ ನಿರಂಜನ್​​ ಲುಕ್ಸ್​ಗೆ ಉಪ್ಪಿ ಹ್ಯಾಪಿ!

    ಅಭ್ಯಾಸ ಕ್ರಮ: ಜಮಖಾನದ ಮೇಲೆ ಮೊದಲು ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು. ಒಂದು ಕಾಲನ್ನು ಅಂದರೆ ಮೊದಲಿಗೆ ಬಲಗಾಲನ್ನು ಹಿಂದಕ್ಕೆ ಚಾಚಬೇಕು. ಮಂಡಿಯನ್ನು ನೆಲಕ್ಕೆ ತಾಗಿಸಿ, ಕಾಲಿನ ಪಾದವನ್ನು ಮೇಲೆ ಮಾಡಬೇಕು. ಬಳಿಕ ಕೈಗಳ ಸಹಾಯದಿಂದ, ಉಸಿರನ್ನು ಬಿಡುತ್ತಾ, ಎದೆಯನ್ನು ಮುಂದೆ ಚಾಚಿ ತಲೆಯನ್ನು ಹಿಂದಕ್ಕೆ ಬಾಗಿಸಬೇಕು. ಆಮೇಲೆ ಎರಡು ಕೈಗಳಿಂದ ಬಲಗಾಲಿನ ಬೆರಳುಗಳನ್ನು ಹಿಡಿದು ತಲೆಯನ್ನು ಬಲಗಾಲಿನ ಪಾದಕ್ಕೆ ಒರಗಿಸಿಡಬೇಕು. ಈ ಭಂಗಿಯಲ್ಲಿ ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸುತ್ತಾ ಇರಬೇಕು. ನಂತರ ನಿಧಾನವಾಗಿ ವಜ್ರಾಸನದ ಸ್ಥಿತಿಗೆ ಬರಬೇಕು. ಹಾಗೇ, ಎಡಗಾಲನ್ನು ಹಿಂದಕ್ಕೆ ಚಾಚಿ, ಇನ್ನೊಂದು ಬದಿಯಲ್ಲಿ ಅಭ್ಯಸಿಸಬೇಕು.

    ಈ ಆಸನ ಮಾಡುವ ಮೊದಲು ಸರಳ ವ್ಯಾಯಾಮ, ಸರಳ ಯೋಗಾಸನಗಳನ್ನು ಕಲಿತಿರಬೇಕು ಹಾಗೂ ಅಭ್ಯಾಸ ಹೊಂದಿರಬೇಕು. ಗುರುಗಳ ಮಾರ್ಗದರ್ಶನದಲ್ಲಿ ಕಲಿಯಬೇಕು. ಆರೋಗ್ಯ ಸಮಸ್ಯೆ ಇದ್ದವರು ಈ ಆಸನ ಮಾಡುವುದು ಬೇಡ.

    ಪೆಲ್ವಿಕ್​ ಅಂಗಗಳನ್ನು ಬಲಪಡಿಸಲು ಸರಳವಾದ ‘ಶಲಭಾಸನ’ ಮಾಡಿ!

    ಸಿಂಪಲ್​ ಒನ್​ ಎಲೆಕ್ಟ್ರಿಕ್​ ಸ್ಕೂಟರ್​: ಐದೇ ದಿನಗಳಲ್ಲಿ 30,000 ಬುಕ್ಕಿಂಗ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts