More

    ರೆಸ್ಟ್‌ ತೆಗೆದುಕೊಳ್ಳದೇ ಸೋಂಕಿತರ ಸೇವೆಯಲ್ಲಿ ತೊಡಗಿರುವ ತುಂಬು ಗರ್ಭಿಣಿ: ವೈದ್ಯೆಯ ಸೇವಾ ಪ್ರೀತಿಗೆ ಅಪಾರ ಮೆಚ್ಚುಗೆ

    ಜಯನಗರ (ಆಂಧ್ರ ಪ್ರದೇಶ): ಕರೊನಾ ವೈರಸ್‌ ಇಡೀ ಜಗತ್ತಿಗೆ ಆತಂಕ ಸೃಷ್ಟಿಸಿರುವುದು ಎಷ್ಟು ನಿಜವೋ, ಇದರಿಂದಾಗಿ ನಮ್ಮ ನಡುವೆ ಅದೆಷ್ಟು ಸಹೃದಯಿಗಳು ಇದ್ದಾರೆ ಎಂಬುದನ್ನೂ ತೋರಿಸಿಕೊಡುತ್ತಿದೆ. ಅದರಲ್ಲಿಯೂ ವೈದ್ಯಕೀಯ ಹಾಗೂ ಪೊಲೀಸ್‌ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿಯು ಮೆರೆಯುತ್ತಿರುವ ವೃತ್ತಿ ಪ್ರೀತಿಯಿಂದ ಎಂಥವರ ಮನವನ್ನೂ ಕಲುಕುವುದಂತೂ ನಿಜ.

    ತಮ್ಮ ಪ್ರಾಣದ ಹಂಗು ತೊರೆದು, ಮನೆ- ಕುಟುಂಬ- ಗಂಡ/ ಹೆಂಡತಿ ಎಲ್ಲರಿಂದಲೂ ದೂರವಾಗಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರ ಬಗ್ಗೆ ಅಲ್ಲಲ್ಲಿ ಕೆಲವು ಘಟನೆಗಳು ಈ ಸಮಯದಲ್ಲಿ ಕೇಳಿ ಬರುತ್ತಲೇ ಇವೆ. ಬಾಣಂತಿ ವೈದ್ಯೆಯೊಬ್ಬರು ತಮ್ಮ ಒಂದು ತಿಂಗಳ ಮಗುವನ್ನು ಬಿಟ್ಟು ಕರೊನಾ ಸೋಂಕಿತರ ಆರೈಕೆಯಲ್ಲಿ ತೊಡಗಲು ಕರ್ತವ್ಯಕ್ಕೆ ಹಾಜರಾಗಿರುವ ಸುದ್ದಿ ನಿನ್ನೆಯಷ್ಟೇ ವರದಿಯಾಗಿದೆ. ಎಂಟು ತಿಂಗಳ ತುಂಬು ಗರ್ಭಿಣಿಯೊಬ್ಬರು ಸೋಂಕಿತರ ಸೇವೆಯಲ್ಲಿ ತೊಡಗಿಸಿಕೊಳ್ಳಲು ವಿಶ್ರಾಂತಿಯನ್ನೂ ಮರೆತು ಬಂದಿರುವ ಸುದ್ದಿ ಆಂಧ್ರ ಪ್ರದೇಶದ ವಿಜಯನಗರದಿಂದ ಇಂದು ವರದಿಯಾಗಿದೆ. ಅಷ್ಟೇ ಅಲ್ಲ, ಪ್ರತಿನಿತ್ಯವೂ 30 ಕಿಲೋ ಮೀಟರ್‌ ಪ್ರಯಾಣಿಸಿ ಇವರು ಸೇವೆಗೆ ಬರುತ್ತಿದ್ದಾರೆ!

    ಇವರ ಹೆಸರು ಡಾ. ಎಸ್‌.ಝಾನ್ಸಿ. ಜಯನಗರದ ದೇವುಪಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುತ್ತಮುತ್ತಲ 30 ಹಳ್ಳಿಗಳಿಂದ ಬರುವ ರೋಗಿಗಳ ಆರೋಗ್ಯ ಸೇವೆಯಲ್ಲಿ ಇವರು ನಿರತರಾಗಿದ್ದಾರೆ. ಇಲ್ಲಿ ಖಾಸಗಿ ಕ್ಲಿನಿಕ್‌ಗಳು ಇಲ್ಲದ ಕಾರಣ, ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಜನ ನೆಚ್ಚಿಕೊಂಡಿದ್ದಾರೆ. ಈಗಂತೂ ಎಲ್ಲೆಲ್ಲಿಯೂ ಕರೊನಾ ಭೀತಿ. ಅದು ಹೇಗೆ, ಯಾವ ಕಡೆಯಿಂದ ಯಾರನ್ನು ಆವರಿಸಿಕೊಳ್ಳುತ್ತದೆಯೋ ತಿಳಿದುಬರುತ್ತಿಲ್ಲ. ಇಂಥ ಸಂದರ್ಭದಲ್ಲಿ ಹಳ್ಳಿಯ ಜನರಿಗೆ ಧೈರ್ಯ ತುಂಬಿ ಅವರ ಆರೋಗ್ಯ ರಕ್ಷಣೆ ಮಾಡುವ ಉದ್ದೇಶದಿಂದ ಝಾನ್ಸಿ ಇಲ್ಲಿಗೆ ಪ್ರತಿನಿತ್ಯವೂ ಬರುತ್ತಿದ್ದಾರೆ.

    ಇಲ್ಲಿ ವಿದೇಶಗಳಿಂದ ಬಂದವರೂ ಇದ್ದು ಅವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಕರೊನಾ ಸೋಂಕು ಲಕ್ಷಣ ಹೊಂದಿರುವ 10 ರೋಗಿಗಳಿಗೂ ಇವರು ಚಿಕಿತ್ಸೆ ನೀಡುತ್ತಿದ್ದಾರೆ. ನನಗೆ ನಿಜವಾಗಿಯೂ ಈಗ ರೆಸ್ಟ್‌ ಅಗತ್ಯವಿದೆ. ಆದರೆ ಇಂಥ ಸಂದರ್ಭದಲ್ಲಿ ನನ್ನ ಕರ್ತವ್ಯನಿಂದ ನಾನು ನುಣುಚಿಕೊಳ್ಳುವುದು ಉಚಿತವಲ್ಲ. ಸರ್ಕಾರ ನೀಡಿರುವ ಮಾಸ್ಕ್ ಮತ್ತು ಗ್ಲೌಸ್ ಗಳನ್ನು ಬಳಸುತ್ತೇನೆ. ಎಲ್ಲಾ ಸುರಕ್ಷತಾ ವಿಧಾನಗಳನ್ನೂ ಅಳವಡಿಸಿಕೊಂಡಿದ್ದೇನೆ ಎನ್ನುತ್ತಾರೆ ಝಾನ್ಸಿ. ಇವರ ಈ ಪ್ರೀತಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. (ಏಜೆನ್ಸೀಸ್​)

    ಲಾಕ್‌ಡೌನ್‌ ಪಾರ್ಟಿ ಮಾಡಲು ತನ್ನ ಪತ್ನಿಯ ಜತೆ ಸ್ನೇಹಿತನ ಮನೆಗೆ ಹೋದವನಿಗೆ ಕಾದಿತ್ತು ಶಾಕ್​!

    ಕರೊನಾ ಲಾಕ್​ಡೌನ್​ ಇನ್ನೇನೆಲ್ಲಾ ಮಾಡಿಸಲಿದೆ? ತರಕಾರಿ ವ್ಯಾಪಾರಕ್ಕೂ ಶುರುವಾಯ್ತು ನೋಡಿ ಹೊಸ ಪದ್ಧತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts