More

    ಹೊಸ ವರ್ಷದ ಮೊದಲ ಶುಕ್ರವಾರ ಎಂಟು ಚಿತ್ರಗಳ ಬಿಡುಗಡೆ …

    ಬೆಂಗಳೂರು: ಕಳೆದ ವರ್ಷ (2022) ಕನ್ನಡ ಚಿತ್ರರಂಗದ ಪಾಲಿಗೆ ಅದೃಷ್ಟದ ವರ್ಷವಾಗಿತ್ತು. 215 ಚಿತ್ರಗಳು ಬಿಡುಗಡೆಯಾಗುವುದರ ಜತೆಗೆ, ‘ಕೆಜಿಎಫ್​ 2’, ‘ಕಾಂತಾರ’, ‘ಚಾರ್ಲಿ 777’ ಸೇರಿದಂತೆ ಕೆಲವು ಚಿತ್ರಗಳು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದ್ದವು. ಈಗ ವರ್ಷ ಮುಗಿದಿದ್ದು, ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಈ ವರ್ಷದ ಬಗ್ಗೆಯೂ ಕನ್ನಡ ಚಿತ್ರರಂಗದ ಬಗ್ಗೆ ಹಲವು ನಿರೀಕ್ಷೆಗಳಿವೆ. ಈ ವರ್ಷ ಸಹ 200 ಪ್ಲಸ್​ ಚಿತ್ರಗಳು ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಇದ್ದು, ಅದಕ್ಕೆ ಮುನ್ಸೂಚನೆ ಈಗಾಗಲೇ ಸಿಕ್ಕಿದೆ.

    ಇದನ್ನೂ ಓದಿ: 5000ಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಬಿಡುಗಡೆಯಾಯಿತು ‘ವಿರಾಟಪುರ ವಿರಾಗಿ’ ಚಿತ್ರದ ಟ್ರೈಲರ್

    ಕರೊನಾ ಮೂರನೇ ಲಾಕ್​ಡೌನ್​ ಭಯದಿಂದಾಗಿ ಕಳೆದ ವರ್ಷ ಮೊದಲ ವಾರ ಯಾವೊಂದು ಸಿನಿಮಾ ಸಹ ಬಿಡುಗಡೆಯಾಗಿರಲಿಲ್ಲ. ಎರಡನೇ ವಾರ ಒಂದು ಚಿತ್ರ ಬಿಡುಗಡೆಯಾಗಿತ್ತು. ಆದರೆ, ಈ ವರ್ಷ ಹಾಗಿಲ್ಲ. ಮೊದಲ ವಾರದಲ್ಲೇ ಎಂಟು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಪೈಪೋಟಿ ನಡೆಸಿವೆ.

    ಹೌದು, ಈ ಶುಕ್ರವಾರ ಅಂದರೆ, ಜನವರಿ ಆರರಂದು ಎಂಟು ಚಿತ್ರಗಳು ಬಿಡುಗಡೆಯಾಗುತ್ತಿವೆ. ಪ್ರಿಯಾಂಕಾ ಉಪೇಂದ್ರ ಅಭಿನಯದ ‘ಮಿಸ್​ ನಂದಿನಿ’, ಹೊಸಬರ ‘ಮರೆಯದೆ ಕ್ಷಮಿಸು’, ಕಿರುತೆರೆ ನಟ ರಾಜೇಶ್​ ಧ್ರುವ ನಟನೆ ಮತ್ತು ನಿರ್ದೇಶನದ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’, ‘ಖುಷಿ’ ರವಿ ಅಭನಯದ ‘ಸ್ಪೂಕಿ ಕಾಲೇಜ್​’, ರಮೇಶ್ ಬೇಗಾರು ನಿರ್ದೇಶನ ಮತ್ತು ಪ್ರಮೋದ್​ ಶೆಟ್ಟಿ ಅಭಿನಯದ ‘ವೈಶಂಪಾಯನ ತೀರ’, ಅಶ್ವಿನ್​ ಹಾಸನ್​ ಅಭಿನಯದ ‘ಥಗ್ಸ್​ ಆಫ್​ ರಾಮ್​ಗಢ’, ಹೊಸಬರ ‘ಕಾಕ್ಟೇಲ್​’ ಮತ್ತು ‘ಡಾರ್ಲಿಂಗ್’ ಕೃಷ್ಣ ಅಭಿನಯದ ‘ಮಿಸ್ಟರ್​ ಬ್ಯಾಚಲರ್​’ ಚಿತ್ರಗಳು ಬಿಡುಗಡೆಯಾಗುತ್ತಿವೆ.

    ಇದನ್ನೂ ಓದಿ: ರಷ್ಯಾದಲ್ಲಿ ಹೊಸ ದಾಖಲೆ ಮಾಡಿದ ‘ಪುಷ್ಪ’; ಅಲ್ಲಿ ಕಲೆಕ್ಷನ್​ ಎಷ್ಟು ಗೊತ್ತಾ?

    ಈ ಎಂಟು ಚಿತ್ರಗಳಲ್ಲದೆ ‘ಸದ್ಗುರು’ ಎಂಬ ಇನ್ನೊಂದು ಚಿತ್ರವು ಬಿಡುಗಡೆಯಾಗುತ್ತಿರುವ ಸುದ್ದಿ ಇದೆ. ಇದೂ ಸೇರಿದರೆ ಒಂಬತ್ತು ಚಿತ್ರಗಳಾಗಿವೆ. ಆದರೆ, ಈ ಚಿತ್ರದ ಬಿಡುಗಡೆಯ ಬಗ್ಗೆ ಗೊಂದಲ ಇರುವುದರಿಂದ, ಸದ್ಯಕ್ಕೆ ಎಂಟು ಚಿತ್ರಗಳು ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಇದರ ಜತೆಗೆ ಇನ್ನಷ್ಟು ಸೇರ್ಪಡೆಯಾದರೆ, ಆಶ್ಚರ್ಯವಿಲ್ಲ.

    ‘ಪಠಾಣ್​’ ಮುಂದಕ್ಕೆ ಹೋಗಿಲ್ಲ … 10ಕ್ಕೆ ಬಿಡುಗಡೆಯಾಗಲಿದೆಯಂತೆ ಟ್ರೈಲರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts