More

    ಈದ್ಗಾ ಮೈದಾನದಲ್ಲಿ ಬೇಡ…ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ: ತೆಲಂಗಾಣ ವಕ್ಫ್​ ಮಂಡಳಿ

    ತೆಲಂಗಾಣ: ಈ ಬಾರಿ ಕರೊನಾ ವೈರಸ್​ ಇರುವುದರಿಂದ ಈದ್​ ಉಲ್​ ಅಧಾ ಸಭೆಗಳನ್ನು ನಡೆಸಲು ಅವಕಾಶ ಇಲ್ಲ. ಈದ್ಗಾ ಹಾಗೂ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬಾರದು ಎಂದು ಕೇಂದ್ರ, ರಾಜ್ಯ ಸರ್ಕಾರಗಳು ಹೇಳಿವೆ. ಅಲ್ಲದೆ, ಸಮುದಾಯದ ಕೆಲವು ಮುಖಂಡರೂ ಕೂಡ ಇದೇ ಸಂದೇಶ ನೀಡುತ್ತಿದ್ದಾರೆ.

    ಆದರೆ ತೆಲಂಗಾಣದಲ್ಲಿ ಈ ನಿಯಮದಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ. ಈದ್​ ಹಬ್ಬದಂದು ಈದ್ಗಾ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ಪ್ರರ್ಥನೆ ಮಾಡಲು ಅವಕಾಶ ಇರುವುದಿಲ್ಲ. ಆದರೆ ಕೆಲವು ನಿರ್ಬಂಧನೆ, ನಿಯಂತ್ರಣಾ ಕ್ರಮಗಳೊಂದಿಗೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬಹುದು ಎಂದು ತೆಲಂಗಾಣ ವಕ್ಫ್ ಬೋರ್ಡ್​ ತಿಳಿಸಿದೆ. ಇದನ್ನೂ ಓದಿ: ಇಂದು ಸೋನಿಯಾ ಗಾಂಧಿ ನಡೆಸಿದ ಸಭೆಯಲ್ಲೂ ಮತ್ತದೇ ‘ರಾಗಾ’: ರಾಹುಲ್​ ಗಾಂಧಿ ನಿರ್ಧಾರವೊಂದೇ ಬಾಕಿ

    ಆಗಸ್ಟ್​ 1ರಂದು ಆಚರಿಸಲಿರುವ ಈದ್​ನಂದು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ವಕ್ಫ್ ಬೋರ್ಡ್​ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ. ಆದರೆ ಯಾವುದೇ ಮಸೀದಿಯಲ್ಲಾದರೂ 50ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಸಾಮಾಜಿಕ ಅಂತರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲೇಬೇಕು ಎಂದು ಗೈಡ್​ಲೈನ್ಸ್​ನಲ್ಲಿ ಸೂಚಿಸಿದೆ.

    ಹಾಗೇ, ಹಿರಿಯ ನಾಗರಿಕರು ಮತ್ತು 10 ವರ್ಷದ ಕೆಳಗಿನ ಮಕ್ಕಳು ಮಸೀದಿಗೆ ಬರುವುದು ಬೇಡ ಎಂದು ಕೂಡ ವಕ್ಫ್​ ಬೋರ್ಡ್​ ತಿಳಿಸಿದೆ. ಅಷ್ಟೇ ಅಲ್ಲ, ಶೀತ, ಜ್ವರ, ಕೆಮ್ಮು, ಡಯಾಬಿಟಿಸ್, ಬಿಪಿ ಮತ್ತಿತರ ಸಮಸ್ಯೆ ಇದ್ದವರೂ ಮಸೀದಿಗೆ ಬರದೆ, ಮನೆಯಲ್ಲೇ ಪ್ರಾರ್ಥನೆ ಮಾಡಿ ಎಂದು ಹೇಳಿದೆ. (ಏಜೆನ್ಸೀಸ್​)

    ಭಾರತದ ನೆರವಿನೊಂದಿಗೆ ನಿರ್ಮಿಸಿದ ಮಾರಿಷಸ್ ಸುಪ್ರೀಂಕೋರ್ಟ್ ಕಟ್ಟಡ ಉದ್ಘಾಟಿಸಿದ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts